Monday, July 22, 2024
Google search engine
Homeತಾಜಾ ಸುದ್ದಿನಿವೃತ್ತ ಇಂಜಿನಿಯರ್ ಸೇರಿ 13 ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: 100 ಅಧಿಕಾರಿಗಳಿಂದ 56 ಕಡೆ ದಾಳಿ!

ನಿವೃತ್ತ ಇಂಜಿನಿಯರ್ ಸೇರಿ 13 ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: 100 ಅಧಿಕಾರಿಗಳಿಂದ 56 ಕಡೆ ದಾಳಿ!

ರಾಜ್ಯದ ನಾನಾ ಕಡೆ ಗುರುವಾರ ಏಕಕಾಲದಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಇಬ್ಬರು ನಿವೃತ್ತ ಇಂಜಿನಿಯರ್ ಸೇರಿದಂತೆ 13 ಅಧಿಕಾರಿಗಳಿಗೆ ಬೆಳಂಬೆಳಿಗ್ಗೆ ಶಾಕ್ ನೀಡಿದೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಇಬ್ಬರು ನಿವೃತ್ತ ಎಂಜಿನಿಯರ್‌ ಸೇರಿದಂತೆ 11 ಅಧಿಕಾರಿಗಳ ಮನೆ ಹಾಗೂ ಇತರೆಡೆ ದಾಳಿ ನಡೆಸಿದೆ.

ಬೆಂಗಳೂರು, ಮಂಡ್ಯ, ಕಲಬುರಗಿ, ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಕೋಲಾರ, ಮೈಸೂರು, ಬೆಂಗಳೂರು, ಹಾಸನ ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲಿಸುತ್ತಿದ್ದಾರೆ.

11 ಪ್ರಕರಣಗಳಿಗೆ ಸಂಬಂಧಿಸಿ 9 ಜಿಲ್ಲೆಗಳ ಒಟ್ಟು 56 ಸ್ಥಳಗಳಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳ ತಂಡದ ದಾಳಿ ನಡೆಸಿ ಕಡತ ಪರಿಶೀಲಿಸುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments