Friday, October 4, 2024
Google search engine
Homeತಾಜಾ ಸುದ್ದಿ5 ವರ್ಷಗಳ ಡೇಟಿಂಗ್ ನಂತರ ಮಲೈಕಾ ಆರೋರಾ-ಅರ್ಜುನ್ ಕಪೂರ್ ಬ್ರೇಕಪ್!

5 ವರ್ಷಗಳ ಡೇಟಿಂಗ್ ನಂತರ ಮಲೈಕಾ ಆರೋರಾ-ಅರ್ಜುನ್ ಕಪೂರ್ ಬ್ರೇಕಪ್!

ಬಾಲಿವುಡ್ ಸ್ಟಾರ್ ಗಳಾದ ಮಲೈಕಾ ಆರೋರಾ ಮತ್ತು ಅರ್ಜುನ್ ಕಪೂರ್ 5 ವರ್ಷಗಳ ಡೇಟಿಂಗ್ ನಂತರ ಬೇರ್ಪಟ್ಟಿದ್ದಾರೆ. ವಯಸ್ಸಿನ ಅಂತರದ ಬಗ್ಗೆ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಜೋಡಿ ಸಂಬಂಧ ಕೊನೆಗೂ ಮುರಿದು ಬಿದ್ದಿದೆ.

ಹೌದು, ಬಾಲಿವುಡ್ ನಟ ಸಲ್ಮಾನ್ ಖಾನ್ ಸೋದರ ಹಾಗೂ ನಟ ಅರ್ಬಾಜ್ ಖಾನ್ ಗೆ ಡಿವೋರ್ಸ್ ನೀಡಿದ್ದ ಮಲೈಕಾ ಆರೋರಾ ತನಗಿಂತ 12 ವರ್ಷ ಚಿಕ್ಕವನಾದ ಅರ್ಜುನ್ ಕಪೂರ್ ಜೊತೆ ಸುತ್ತಾಡಲು ಆರಂಭಿಸಿದ್ದರು. ಶೀಘ್ರದಲ್ಲೇ ಇಬ್ಬರು ಮದುವೆ ಆಗಲು ನಿರ್ಧರಿಸಿದ್ದರು.

ಆದರೆ ಮದುವೆ ಮಾತುಕತೆ ನಡೆಯುತ್ತಿರುವ ಬೆನ್ನಲ್ಲೇ ಮಲೈಕಾ ಆರೋರಾ ಮತ್ತು ಅರ್ಜುನ್ ಕಪೂರ್ ಜೋಡಿ ಬೇರ್ಪಟ್ಟಿದೆ. ಮೂಲಗಳ ಪ್ರಕಾರ ಇಬ್ಬರೂ ಪರಸ್ಪರ ಒಪ್ಪಂದ ಮೇರೆಗೆ `ಶಾಂತಿಯುತ’ವಾಗಿ ಬೇರ್ಪಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

2018ರಲ್ಲಿ ಮಲೈಕಾ ಮತ್ತು ಅರ್ಜುನ್ ಮೊದಲ ಬಾರಿ ಡೇಟಿಂಗ್ ಆರಂಭಿಸಿದ್ದರು. ಇಬ್ಬರೂ ಜೊತೆಗಿರುವ ಫೋಟೊಗಳನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದರೂ ಬಹಿರಂಗಪಡಿಸಿರಲಿಲ್ಲ. ಆದರೆ 2019ರಂದು ಅರ್ಜುನ್ ಕಪೂರ್ ಜನ್ಮದಿನದಂದು ಇಬ್ಬರು ಡೇಟಿಂಗ್ ವಿಷಯವನ್ನು ಅಧಿಕೃತವಾಗಿ ಘೋಷಿಸಿಕೊಂಡರು.

ಅರ್ಬಾಜ್ ಖಾನ್ ಮತ್ತು ಮಲೈಕಾ 2017ರಲ್ಲಿ ಬೇರ್ಪಟ್ಟಿದ್ದು, ಇಬ್ಬರಿಗೂ ಅರ್ಹಾನ್ ಎಂಬ ಒಬ್ಬ ಮಗನಿದ್ದಾನೆ. ಅರ್ಬಾಜ್ ಖಾನ್ ಕಳೆದ ವರ್ಷವಷ್ಟೇ ಮೇಕಪ್ ವುಮೆನ್ ಶೌರಾ  ಖಾನ್ ಅವರನ್ನು ವರಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments