Sunday, June 16, 2024
Google search engine
Homeಜಿಲ್ಲಾ ಸುದ್ದಿಅಜ್ಜಿ ಮನೆಗೆ ಬಂದಿದ್ದ 8 ವರ್ಷದ ಮೊಮ್ಮಗ ಟ್ರ್ಯಾಕ್ಟರ್ ರೊಟಾವೆಲ್ಟರ್ ಗೆ ಸಿಲುಕಿ ಭೀಕರ ಸಾವು!

ಅಜ್ಜಿ ಮನೆಗೆ ಬಂದಿದ್ದ 8 ವರ್ಷದ ಮೊಮ್ಮಗ ಟ್ರ್ಯಾಕ್ಟರ್ ರೊಟಾವೆಲ್ಟರ್ ಗೆ ಸಿಲುಕಿ ಭೀಕರ ಸಾವು!

ಅಜ್ಜಿ ಮನೆಗೆ ಬಂದಿದ್ದ ಬಾಲಕ ಕೃಷಿಗೆ ಬಳಸುವ ಟ್ರ‍್ಯಾಕ್ಟರ್‌ ರೊಟಾವೆಲ್ಟರ್ ಗೆ ಸಿಲುಕಿ ಭೀಕರವಾಗಿ ಮೃತಪಟ್ಟ ಆಘಾತಕಾರಿ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಸಂಭವಿಸಿದೆ.

ದೇವರಸನಹಳ್ಳಿಯಲ್ಲಿ ಈ ದಾರುಣ ಘಟನೆ ಸಂಭವಿಸಿದ್ದು, 8 ವರ್ಷದ ಭವಿಷ್ ಮೃತಪಟ್ಟ ಬಾಲಕ.

ಚಾಮರಾಜನಗರದಲ್ಲಿ ನಿಗದಿಯಾಗಿದ್ದ ವಿವಾಹ ಸಮಾರಂಭದಲ್ಲಿ ಭಾಗಿಯಾಗಲು ತಾಯಿ ಮಮತಾ, ಮಕ್ಕಳೊಂದಿಗೆ ದೇವರಸನಹಳ್ಳಿಗೆ ಬಂದಿದ್ದರು. ಈ ವೇಳೆ ಭವಿಷ್‌ ತನ್ನ ಸೋದರಮಾವನ ಜೊತೆ ಟ್ರ‍್ಯಾಕ್ಟರ್ ನಲ್ಲಿ ಜಮೀನಿಗೆ ತೆರಳಿದ್ದ.

ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಭವಿಷ್‌ ಟ್ರ‍್ಯಾಕ್ಟರ್ ನಿಂದ ಕೆಳಗೆ ಬಿದ್ದಿದ್ದಾನೆ ಬಳಿಕ ರೊಟಾವೆಲ್ಟರ್‌ಗೆ ಸಿಲುಕಿ ಅವಘಡ ಸಂಭವಿಸಿದೆ. ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments