ಗಂಟೆಗೆ 130 ಕಿ.ಮೀ.ಗಿಂತ ವೇಗವಾಗಿ ವಾಹನ ಚಲಾಯಿಸಿದರೆ ಎಫ್ ಐಆರ್ ದಾಖಲಿಸಲಾಗುವುದು ಎಂದು ಸಂಚಾರ ಹಾಗೂ ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ದಂಡ ವಿಧಿಸಲಾಗುತ್ತಿತ್ತು. ಆದರೆ ಆಗಸ್ಟ್ ಒಂದರಿಂದ ಸಂಚಾರ ನಿಯಮದಲ್ಲಿ ಬದಲಾವಣೆ ಮಾಡಲಾಗಿದ್ದು, ನಿಗದಿಪಡಿಸಿದ್ದಕ್ಕಿಂತ ಹೆಚ್ಚು ವೇಗವಾಗಿ ವಾಹನ ಚಲಾಯಿಸಿದರೆ ವಾಹನ ಸವಾರರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಎಡಿಜಿಪಿ ಅಲೋಕ್ ಕುಮಾರ್, ರಾಜ್ಯದ ಸಂಭವಿಸುವ ಅಪಘಾತಗಳಲ್ಲಿ ಶೇ. 90ರಷ್ಟು ಮಂದಿ ಅತೀ ವೇಗದ ಚಾಲನೆಯಿಂದ ಸಾಯುತ್ತಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ 155 ಮಂದಿ ಮೃತಪಟ್ಟಿದ್ದು, ಇವರೆಲ್ಲರೂ ತಮ್ಮ ವಾಹನವನ್ನು 130 ಕಿ.ಮೀ.ಗಿಂತ ಹೆಚ್ಚು ವೇಗವಾಗಿ ಚಲಾಯಿಸುತ್ತಿದ್ದರು.
ಆಗಸ್ಟ್ 1ರಿಂದ ರಾಜ್ಯದ ಯಾವುದೇ ಮೂಲೆಯಲ್ಲಿ 130 ಕಿ.ಮೀ.ಗಿಂತ ವೇಗವಾಗಿ ವಾಹನ ಚಲಾಯಿಸುವುದು, ಅಪಾಯಕಾರಿಯಾಗಿ ವಾಹನ ಚಲಾಯಿಸುವುದು ಅಥವಾ ಅತೀ ವೇಗವಾಗಿ ವಾಹನ ಚಲಾಯಿಸುವುದು ಕಂಡು ಬಂದರೆ ಅಂತಹ ವಾಹನ ಸವಾರರ ವಿರುದ್ಧ ಎಫ್ ಐಆರ್ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.