Wednesday, 18 November 2026 — Kannadavahini
BREAKING NEWS
ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು
ಆರೋಗ್ಯ

ಪಪ್ಪಾಯಿ, ತುಳಸಿ ಹೀಗೆ ಬಳಸಿದರೆ ಕಿಡ್ನಿ, ಸಂಧಿವಾತ ಸಮಸ್ಯೆಗೆ ಕಾರಣವಾಗುವ ಯೂರಿಕ್ ಆಡಿಸ್ ಮಾಯ!

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 31 ವೀಕ್ಷಣೆಗಳು
kidney

ದೇಹದಲ್ಲಿ ನೋವು, ಸಂಧಿವಾತ, ಕಿಡ್ನಿ ಸಮಸ್ಯೆಗಳು ಇಂದು ಸಾಮಾನ್ಯ ಎಂಬಂತಾಗಿದೆ. ವೈದ್ಯರ ಬಳಿ ಹೋದಾಗ ಯೂರಿಕ್‌ ಆಸಿಡ್‌ ಎಂದು ಹೇಳುತ್ತಾರೆ. ಅದಕ್ಕಾಗಿ ಕೆಲವೊಂದು ಆಹಾರ ವಸ್ತುಗಳನ್ನು ತಿನ್ನದಂತೆ ಸಲಹೆ ನೀಡುತ್ತಾರೆ. ಅದೇ ರೀತಿ ಕೆಲವೊಂದು ಅಹಾರ ಯೂರಿಕ್‌ ಆಸಿಡ್‌ ನಿಯಂತ್ರಣಕ್ಕೆ ಸಹಕಾರಿ ಎಂದೂ ಹೇಳುತ್ತಾರೆ.

ಯಾವುದು ತಿಂದರೆ ಉತ್ತಮ: ಯೂರಿಕ್ ಆಸಿಡ್ ಹೆಚ್ಚಾದರೆ ಪಾಪೈನ್ ಎಂಬ ಪ್ರೋಟಿಯೋಲೈಟಿಕ್ ಕಿಣ್ವ ಹೊಂದಿರುವ ಪಪ್ಪಾಯಿಯನ್ನು ಪ್ರತಿದಿನ ತಿನ್ನಬೇಕು. ಇದು ಪ್ರೋಟೀನ್ ಗಳ ಜೀರ್ಣಕ್ಕೆ ಸಹಕಾರಿ. ರಕ್ತದಲ್ಲಿನ ಯೂರಿಕ್ ಆಮ್ಲವನ್ನು ನಿಯಂತ್ರಿಸುತ್ತದೆ.

ಪ್ರತಿದಿನ ತುಳಸಿ ತಿನ್ನುವುದರಿಂದ ದೇಹದಲ್ಲಿ ಸಂಗ್ರಹವಾದ ಪ್ಯೂರಿನ್‌ಗಳು ಬಿಡುಗಡೆಯಾಗಲು ಪ್ರಾರಂಭಿಸುತ್ತವೆ. ರಕ್ತದಲ್ಲಿ ಯೂರಿಕ್ ಆಮ್ಲವು ಹೆಚ್ಚಾಗಲು ಪ್ರಾರಂಭಿಸಿದರೆ ಪ್ರತಿದಿನ 4 ರಿಂದ 5 ತುಳಸಿ ಎಲೆಗಳನ್ನು ಜಗಿದು ತಿನ್ನಬೇಕು. ಅದೇ ರೀತಿ ಕುಂಬಳಕಾಯಿ ತಿನ್ನುವುದು ಉತ್ತಮ. ಇದು ವಿಟಮಿನ್ ಸಿ, ಬೀಟಾ-ಕ್ಯಾರೋಟಿನ್ ಮತ್ತು ಲುಟೀನ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೇರಳವಾಗಿ ಒಳಗೊಂಡಿದೆ. ಈ ಉತ್ಕರ್ಷಣ ನಿರೋಧಕಗಳು   ನೋವು, ಉರಿಯೂತ ಮತ್ತು ಯೂರಿಕ್ ಆಮ್ಲದ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.

ಯಾವುದು ಸೇವಿಸಬಾರದು: ಯೂರಿಕ್ ಆಮ್ಲ ಸಮಸ್ಯೆ ಇರುವವರು ಬಿಯರ್, ವೋಡ್ಕಾ, ವಿಸ್ಕಿ, ಆರ್ಗನ್ ಮಾಂಸ ತಿನ್ನಬಾರದು. ಯೂರಿಕ್ ಆಸಿಡ್ ಹೆಚ್ಚಾದಾಗ ಐಸ್ ಕ್ರೀಂ, ಚಿಪ್ಸ್, ಪ್ಯಾಕೆಟ್ ಫುಡ್, ಪ್ಯಾಕ್ ಮಾಡಿದ ಹಣ್ಣಿನ ಜ್ಯೂಸ್ ಸೇವಿಸಬಾರದು. ಪ್ರತಿದಿನ ಕನಿಷ್ಠ 2.5 ರಿಂದ 3 ಲೀಟರ್ ನೀರು ಕುಡಿಯುವ ಜೊತೆಗೆ ಪ್ರತಿದಿನ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡಿದರೆ ಉತ್ತಮ. ಸಿಹಿ ಪದಾರ್ಥ ತಿನ್ನುವುದನ್ನು ಕಡಿಮೆ ಮಾಡುವುದು ಅಗತ್ಯ.

ಪೌಷ್ಟಿಕಾಂಶಗಳನ್ನು ಹೆಚ್ಚಾಗಿ ಒಳಗೊಂಡಿರುವ ಪಾಲಕ್ ಸೊಪ್ಪು ಹೆಚ್ಚಿನ ಪ್ರಮಾಣದ ಪ್ಯೂರಿನ್ ಹೊಂದಿರುತ್ತದೆ. ಜೀರ್ಣಕ್ರಿಯೆಯಲ್ಲಿ ಇದು ಯೂರಿಕ್ ಆಮ್ಲವಾಗಿ ಬದಲಾಗುತ್ತದೆ. ಹೀಗಾಗಿ ಪಾಲಕ್ ಸೊಪ್ಪನ್ನು ಮಿತವಾಗಿ ಸೇವಿಸಿದರೆ ಸಾಕು. ಟೊಮೆಟೊ ದೇಹದಲ್ಲಿ ಪ್ಯೂರಿನ್ ಅಥವಾ ಯೂರಿಕ್ ಆಮ್ಲದ ಪ್ರಮಾಣವನ್ನು ಹೆಚ್ಚು ಮಾಡುತ್ತವೆ. ಟೊಮೆಟೊ ಹಣ್ಣುಗಳನ್ನು ಮಿತವಾಗಿ ಬಳಸಿದರೆ ಉತ್ತಮ. ಬೇಳೆ, ಅಣಬೆ ಕೂಡ ಹೆಚ್ಚಿನ ಪ್ರಮಾಣದಲ್ಲಿ ಸೆವನೆ ಸಮಸ್ಯೆಯಯನ್ನು ತೀವ್ರಗೊಳಿಸುವುದು, ಮಿತಿ ಇದ್ದರೆ ಉತ್ತಮ. ಬೀಟ್‌ ರೂಟ್‌ ಸೇವನೆ ಕೂಡ ಮಿತವಾಗಿರಬೇಕು. ​

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8423 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment