ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಜನವರಿ ಕೊನೆಯ ವಾರದಲ್ಲಿ ಸಂಚಾರ ಆರಂಭಿಸಲಿದೆ.
ಸ್ಲೀಪರ್ ರೈಲಿನ ತೂಕದಲ್ಲಿ ಬದಲಾವಣೆ ಮಾಡಿರುವ ಕಾರಣ ವಂದೇ ಭಾರತ್ ಸ್ಲೀಪರ್ ರೈಲಿನ ವೇಗದಲ್ಲಿ ಕಡಿಮೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಸಂಶೋಧನಾ ಮತ್ತು ಗುಣಮಟ್ಟ ಸಂಘಟನೆ (RDSO) ನೀಡಿದ ಮಾಹಿತಿ ಪ್ರಕಾರ ವಂದೇ ಭಾರತ್ ಸ್ಲೀಪರ್ ರೈಲು ಗಂಟೆಗೆ 130ರಿಂದ ಗರಿಷ್ಠ 180 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ.
ಸಾಮಾನ್ಯವಾಗಿ ವಂದೇ ಭಾರತ್ ರೈಲುಗಳು ಆಸನಗಳನ್ನು ಹೊಂದಿದ್ದು, ಈ ರೈಲಿನಲ್ಲಿ ಆಸನಗಳ ಬದಲು ಬೆಡ್ ಗಳು ಇರುತ್ತವೆ. ಅಲ್ಲದೇ ನೀರಿನ ಸಂಗ್ರಹ ಕೂಡ ಹೆಚ್ಚಾಗಲಿದೆ. ಇದರಿಂದ ಸಹಜವಾಗಿ ರೈಲಿನ ತೂಕದಲ್ಲಿ ಹೆಚ್ಚಳವಾಗಲಿದೆ.
ವಂದೇ ಭಾರತ್ ಸ್ಲೀಪರ್ ರೈಲುಗಳು ಸಂಚಾರ ಆರಂಭಿಸುವ ಮುನ್ನ ಗುಣಮಟ್ಟದ ಪ್ರಮಾಣ ಪತ್ರ ಪಡೆಯಬೇಕಾಗಿದೆ. ಅಲ್ಲದೇ ಹಳಿಗಳ ಮೇಲೆ ಸಂಚರಿಸುವ ವೇಗ ಹಾಗೂ ಸುರಕ್ಷತೆ ಮಾನದಂಡಗಳನ್ನು ಪೂರೈಸಬೇಕಾಗಿದೆ. ಈ ಎಲ್ಲಾ ಪ್ರಕ್ರಿಯೆಗಳು ಕೆಲವೇ ದಿನಗಳಲ್ಲಿ ಪೂರೈಸುವ ನಿರೀಕ್ಷೆ ಇದೆ.
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬೆಮ್ಮೆಲ್) ಸಂಸ್ಥೆ ಸ್ಲೀಪರ್ ರೈಲುಗಳನ್ನು ಅಭಿವೃದ್ಧಿಪಡಿಸಿದ್ದು, 2204 ಅಕ್ಟೋಬರ್ 4ರಂದು ಬೋಗಿಗಳು ಹಸ್ತಾಂತರಗೊಂಡಿವೆ. 2023ರಿಂದ ಉತ್ಪಾದನೆ ಆರಂಭಿಸಲಾಗಿದ್ದು, 10 ವಂದೇ ಭಾರತ್ ರೈಲುಗಳನ್ನು ಭಾರತೀಯ ರೈಲ್ವೆಗೆ ಪೂರೈಸಲಿದೆ.