Home ಆರೋಗ್ಯ ಪ್ರೊಟೀನ್ ಸಪ್ಲಿಮೆಂಟ್ ಗೆ ಪರ್ಯಾಯವಾದ ನೈಸರ್ಗಿಕ ಪ್ರೊಟೀನ್ ಸಮೃದ್ಧ ಆಹಾರಗಳು

ಪ್ರೊಟೀನ್ ಸಪ್ಲಿಮೆಂಟ್ ಗೆ ಪರ್ಯಾಯವಾದ ನೈಸರ್ಗಿಕ ಪ್ರೊಟೀನ್ ಸಮೃದ್ಧ ಆಹಾರಗಳು

by Editor
0 comments

ಪ್ರೊಟೀನ್ ಸ್ನಾಯುಗಳು, ಜೀವಕೋಶಗಳು ಮತ್ತು ಹಾರ್ಮೋನುಗಳ ನಿರ್ಮಾಣಕ್ಕೆ ನೆರವಾಗುವ ಮೂಲಕ ಒಟ್ಟಾರೆ ಸ್ವಾಸ್ಥ್ಯಕ್ಕೆ ಅತ್ಯಗತ್ಯವಾಗಿದ್ದು ಚಯಾಪಚಯ ನಿಯಂತ್ರಣಕ್ಕೆ ನೆರವು, ರೋಗ ಪ್ರತಿರೋಧ ಕಾರ್ಯಕ್ಕೆ ಬೆಂಬಲ ಮತ್ತು ಸತತ ಶಕ್ತಿ ನೀಡುತ್ತದೆ. ಹಲವು ಮಂದಿ ಅನುಕೂಲಕ್ಕೆ ಪ್ರೊಟೀನ್ ಸಪ್ಲಿಮೆಂಟ್ ಗಳ ಮೇಲೆ ಆಧಾರಪಟ್ಟಿದ್ದರೆ ಹೈದರಾಬಾದ್ ಮೂಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಹೊಸದಾಗಿ ಬಿಡುಗಡೆ ಮಾಡಿದ ಪಥ್ಯದ ಮಾರ್ಗಸೂಚಿಗಳು ದೇಹದ ತೂಕ ಹೆಚ್ಚಿಸುವಲ್ಲಿ ಅವುಗಳ ಬಳಕೆಯ ವಿರುದ್ಧ ಸಲಹೆ ನೀಡಿದೆ. ಇದು ನೈಸರ್ಗಿಕ ಪ್ರೊಟೀನ್ ಮೂಲಗಳನ್ನು ಅರ್ಥ ಮಾಡಿಕೊಳ್ಳುವ ಮತ್ತು ಆದ್ಯತೆ ನೀಡುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.

ಡಯೆಟಿಷಿಯನ್ ಆಗಿ ನಾನು ಸತತವಾಗಿ ನನ್ನ ಗ್ರಾಹಕರಿಗೆ ಪ್ರೊಟೀನ್ ಸಪ್ಲಿಮೆಂಟ್ ಗಳಿಂದ ದೂರವಿರಲು ಮತ್ತು ಅದರ ಬದಲಿಗೆ ಬಾದಾಮಿಗಳಂತಹ ನೈಸರ್ಗಿಕ ಪ್ರೊಟೀನ್ ಮೂಲಗಳಿಗೆ ಆದ್ಯತೆ ನೀಡಲು ಸಲಹೆ ನೀಡುತ್ತೇನೆ. ಈ ಪರ್ಯಾಯಗಳು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಅಸಂಖ್ಯ ಆರೋಗ್ಯದ ಅನುಕೂಲಗಳನ್ನು ನೀಡುವ ಮೂಲಕ ಒಟ್ಟಾರೆ ಸ್ವಾಸ್ಥ್ಯಕ್ಕೆ ಕೊಡುಗೆ ನೀಡುತ್ತವೆ. ಈ ಲೇಖನದಲ್ಲಿ ನಾನು ಅತ್ಯಂತ ಪೌಷ್ಠಿಕಯುಕ್ತವಾದ ಮಾತ್ರವಲ್ಲದೆ ನಿಮ್ಮ ಆಹಾರದಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಕೆಲ ನೈಸರ್ಗಿಕ ಪ್ರೊಟೀನ್ ಮೂಲಗಳನ್ನು ಹಂಚಿಕೊಳ್ಳುತ್ತೇನೆ.

ಬಾದಾಮಿಗಳು

ಬಾದಾಮಿಗಳು ಪ್ರೊಟೀನ್ ಶಕ್ತಿಕೇಂದ್ರವಾಗಿವೆ ಮತ್ತು ಈ ಅಗತ್ಯ ಪೋಷಕಾಂಶದ ಅದ್ಭುತ ನೈಸರ್ಗಿಕ ಮೂಲವಾಗಿವೆ. ಅವು ಅಸಾಧಾರಣ ಪೋಷಕಾಂಶಯುಕ್ತವಾಗಿವೆ ಮತ್ತು ವೈವಿಧ್ಯಮಯವಾಗಿದ್ದು ನಿಮ್ಮ ಪಥ್ಯಕ್ಕೆ ಪ್ರೊಟೀನ್ ಸೇರ್ಪಡೆ ಮಾಡುವ ಜನಪ್ರಿಯ ಆಯ್ಕೆಯಾಗಿಸಿದೆ. ಪ್ರೊಟೀನ್, ಆರೋಗ್ಯಕರ ಕೊಬ್ಬುಗಳು, ನಾರು, ವಿಟಮಿನ್ ಇ ಮತ್ತು ಮೆಗ್ನೀಷಿಯಂ ಒಳಗೊಂಡ 15 ಅಗತ್ಯ ಪೋಷಕಾಂಶಗಳನ್ನು ಒಳಗೊಂಡ ಬಾದಾಮಿಗಳು ಹಲವು ಆರೋಗ್ಯದ ಅನುಕೂಲಗಳನ್ನು ಕಲ್ಪಿಸುತ್ತವೆ. ಆಲ್ಮಂಡ್ ಬೋರ್ಡ್ ಆಫ್ ಕ್ಯಾಲಿಫೋರ್ನಿಯಾ ನೆರವಿನಿಂದ ಪ್ರಕಟಿಸಲಾದ ವಿಟರ್ಡ್ ಸ್ಟಡಿ ಅಧ್ಯಯನದಲ್ಲಿ ಬಾದಾಮಿಗಳನ್ನು ಸತತವಾಗಿ ಸೇವಿಸುವುದು ವ್ಯಾಯಾಮದ ಪುನಶ್ಚೇತನದಲ್ಲಿ ಸ್ನಾಯು ನೋವಿನ ಭಾವನೆಯನ್ನು ಕಡಿಮೆ ಮಾಡುತ್ತದೆ. ಸಲಾಡ್ ಗಳು, ಟ್ರೈಲ್ ಮಿಕ್ಸ್, ಗ್ರನೋಲಾ ಜೊತೆಯಲ್ಲಿ ಸೇರಿಸಿದಾಗ ಅಥವಾ ಅದನ್ನೇ ಕುರುಕುಲು ತಿನಿಸಾಗಿ ಸೇವಿಸುವುದು ಬಾದಾಮಿಗಳು ನಿಮ್ಮ ಪ್ರೊಟೀನ್ ಸೇವನೆ ಹೆಚ್ಚಿಸುವ ಮತ್ತು ಒಟ್ಟಾರೆ ಆರೋಗ್ಯಕ್ಕೆ ಬೆಂಬಲಿಸುವ ಅನುಕೂಲಕರ ಮತ್ತು ರುಚಿಕರ ವಿಧಾನ ಒದಗಿಸುತ್ತವೆ.

banner

ಬೇಳೆಗಳು

ತಮ್ಮ ಉನ್ನತ ಪ್ರೊಟೀನ್ ಅಂಶ, ಅಡುಗೆಯ ವೈವಿಧ್ಯತೆ ಮತ್ತು ಶ್ರೀಮಂತ ಪೌಷ್ಠಿಕಾಂಶದಿಂದ ಹಲವು ಆಹಾರಗಳಿಗೆ ಬೇಳೆ ಅತ್ಯಂತ ಮುಖ್ಯ ಅಳವಡಿಕೆಯಾಗಿದೆ. ಪ್ರೊಟೀನ್, ನಾರು ಮತ್ತು ಅಗತ್ಯ ಪೋಷಕಾಂಶಗಳಾದ ಕಬ್ಬಿಣ, ಫೊಲೇಟ್ ಹೊಂದಿರುವ ಬೇಳೆಗಳು ಯಾವುದೇ ಭೋಜನಕ್ಕೆ ಪೌಷ್ಠಿಕತೆಯ ಉತ್ತೇಜನ ನೀಡುತ್ತವೆ. ರುಚಿಕರ ಸೂಪ್ ಗಳಿಂದ ಸಲಾಡ್ ಗಳವರೆಗೆ ಮತ್ತು ಸ್ವಾದಿಷ್ಟ ವೆಜ್ಜೀ ಬರ್ಗರ್ ಗಳವರೆಗೆ ಬೇಳೆಗಳನ್ನು ಹಲವಾರು ಬಗೆಯ ತಿನಿಸಿನಲ್ಲಿ ಸೇರಿಸುತ್ತಿದ್ದು ಅದ್ಭುತ ಪ್ರೊಟೀನ್ ಆಯ್ಕೆಯಾಗಿಸಿದೆ.

ಗ್ರೀಕ್ ಯೊಗರ್ಟ್

ಗ್ರೀಕ್ ಯೊಗರ್ಟ್ ಯಾವುದೇ ಆಹಾರಕ್ಕೆ ಅತ್ಯಂತ ಮೌಲ್ಯಯುತ ಸೇರ್ಪಡೆಯಾಗುವ ಪ್ರೊಟೀನ್ ಸನ್ನದ್ಧ ಆಹಾರವಾಗಿದೆ. ಇದರಲ್ಲಿ ಸಾಮಾನ್ಯ ದಧಿಗಿಂತ ಹೆಚ್ಚು ಪ್ರೊಟೀನ್ ಒಳಗೊಂಡಿರುತ್ತದೆ ಮತ್ತು ಕ್ಯಾಲ್ಷಿಯಂ ಮತ್ತು ಪ್ರೊಬಯೋಟಿಕ್ಸ್ ಉತ್ತಮ ಮೂಲವಾಗಿದೆ. ಗ್ರೀಕ್ ಯೊಗರ್ಟ್ ಅನ್ನು ತಿನಸಾಗಿ ಆನಂದಿಸಿ ಅಥವಾ ಅದನ್ನು ಸ್ಮೂಥಿಗಳು, ಡಿಪ್  ಮತ್ತು ಡ್ರೆಸ್ಸಿಂಗ್ ಗಳಿಗೆ ಬೇಸ್ ಆಗಿ ಬಳಸುವ ಮೂಲಕ ನಿಮ್ಮ ಪ್ರೊಟೀನ್ ಸೇವನೆಯನ್ನು ರುಚಿಕರವಾಗಿ ಹೆಚ್ಚಿಸಿ.

ಮೊಟ್ಟೆಗಳು

ವೈವಿಧ್ಯಮಯ ಪ್ರೊಟೀನ್ ಮೂಲವಾಗಿರುವ ಮೊಟ್ಟೆಗಳು ಪ್ರತಿ ದೊಡ್ಡ ಮೊಟ್ಟೆಗೆ 6 ಗ್ರಾಂನಷ್ಟು ಪ್ರೊಟೀನ್ ನೀಡುತ್ತದೆ ಮತ್ತು ವಿಟಮಿನ್ ಬಿ12, ಡಿ ಮತ್ತು ಕೋಲಿನ್ ಹೊಂದಿರುತ್ತದೆ. ಆಮ್ಲೆಟ್ ಗಳು, ಫ್ರಿಟ್ಟಾಟಾಗಳು ಮತ್ತು ಬೇಯಿಸಿದ ಉತ್ಪನ್ನಗಳಲ್ಲಿ ಕರಗಿಸಿ, ಬೆರೆಸಿ ಬಳಸಿದಾಗ ಮೊಟ್ಟೆಗಳು ಅನುಕೂಲಕರ ಮತ್ತು ಪೌಷ್ಠಿಕತೆಯ ಪ್ರೊಟೀನ್ ಆಯ್ಕೆ ನೀಡುತ್ತವೆ.

ಕೋಳಿ ಮತ್ತು ಮೀನು

ಕೋಳಿ ಮತ್ತು ಮೀನುಗಳು ಪ್ರೊಟೀನ್ ನ ಅದ್ಭುತ ಮೂಲಗಳಾಗಿದ್ದು ಸ್ನಾಯುವಿನ ಬೆಳವಣಿಗೆ, ರಿಪೇರಿ ಮತ್ತು ನಿರ್ವಹಣೆಗೆ ಅಗತ್ಯವಾಗಿವೆ. ಮೀನು ಒಮೇಗಾ-3 ಫ್ಯಾಟಿ ಆಮ್ಲಗಳು, ವಿಟಮಿನ್ ಗಳು ಮತ್ತು ಮಿನರಲ್ ಗಳಿಂದ ಕೂಡಿದ್ದು ಹೃದಯದ ಆರೋಗ್ಯ, ಮೆದುಳಿನ ಕಾರ್ಯ ಮತ್ತು ರೋಗ ಪ್ರತಿರೋಧ ವ್ಯವಸ್ಥೆಗೆ ಬೆಂಬಲಿಸುತ್ತದೆ. ಆದ್ದರಿಂದ ಕೋಳಿ ಮತ್ತು ಮೀನನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಒಟ್ಟಾರೆ ಸ್ವಾಸ್ಥ್ಯ ಉತ್ತೇಜಿಸುತ್ತದೆ ಮತ್ತು ಆರೋಗ್ಯಕರ ಜೀವನಶೈಲಿಗೆ ಬೆಂಬಲಿಸುತ್ತದೆ.

ಕಿನೋವ

ಗ್ಲುಟೆನ್ ಮುಕ್ತ ಧಾನ್ಯವಾಗಿರುವ ಕಿನೋವ ಎಲ್ಲ ಒಂಬತ್ತು ಅಗತ್ಯ ಅಮೈನೋ ಆಮ್ಲಗಳನ್ನು ಒಳಗೊಂಡ ಸಂಪೂರ್ಣ ಪ್ರೊಟೀನ್ ಆಗಿದೆ. ಅಸಾಧಾರಣ ವೈವಿಧ್ಯತೆಯ ಕಿನೋವವನ್ನು ಹಲವು ತಿನಿಸುಗಳಲ್ಲಿ, ಸಲಾಡ್ ಗಳಲ್ಲಿ, ಫ್ರೈಗಳು ಮತ್ತು ಪಲಾವುಗಳಲ್ಲಿ ಬಳಸಬಹುದು. ನಾರಿನಂಶ, ವಿಟಮಿನ್ ಗಳು ಮತ್ತು ಮಿನರಲ್ ಗಳಿಂದ ಸಮೃದ್ಧವಾದ ಕಿನೋವ ಯಾವುದೇ ಭೋಜನಕ್ಕೆ ಪೌಷ್ಠಿಕತೆಯ ಸೇರ್ಪಡೆಯಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಕಳಸಾ ಬಂಡೂರಿ, ಮೇಕೆದಾಟು ಯೋಜನೆ ಅನುಮತಿಗೆ ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರಕ್ಕೆ ಮನವಿ Netflix ನಯನತಾರಾ-ವಿಘ್ನೇಶ್ ದಂಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟ ಧನುಷ್! 28 ಎಸೆತಗಳಲ್ಲಿ ಟಿ-20 ಶತಕ ಸಿಡಿಸಿ ಗೇಲ್, ಪಂತ್ ದಾಖಲೆ ಮುರಿದ ಯುವ ಕ್ರಿಕೆಟಿಗ! Law News ಬೆಂಗಳೂರಿನಲ್ಲಿ ಲಾಕಪ್ ಡೆತ್‌: ನಾಲ್ವರು ಪೊಲೀಸರಿಗೆ 12 ವರ್ಷ ಶಿಕ್ಷೆ! vote power ಸ್ವಾಮೀಜಿಗೆ ಸಂವಿಧಾನ ಗೊತ್ತಿಲ್ಲ: ಸಚಿವ ಎಂ.ಮಹದೇವಪ್ಪ ಅಸಮಾಧಾನ Muda Scam ಸಿಬಿಐನಿಂದ ಮುಡಾ ಹಗರಣದ ತನಿಖೆ: ಶುಕ್ರವಾರ ಹೈಕೋರ್ಟ್ ತೀರ್ಪು ಪ್ರಕಟ UP Accident ನಿದ್ದೆಗೆ ಜಾರಿ ಚಾಲಕ, ಚಿರನಿದ್ರೆಗೆ ಜಾರಿಗೆ 5 ವೈದ್ಯರು! ಐಪಿಎಲ್‌ ಹರಾಜಿನಲ್ಲಿ ಸೇಲಾದ 13 ಕನ್ನಡಿಗರು: ಮಯಾಂಕ್ ಕಡೆಗಣನೆ! Goutam Gambhir ಮೊದಲ ಟೆಸ್ಟ್ ಗೆದ್ದ ಬೆನ್ನಲ್ಲೇ ಭಾರತಕ್ಕೆ ಮರಳಿದ ಗಂಭೀರ್! Pakistan ಇಮ್ರಾನ್ ಖಾನ್ ಬೆಂಬಲಿಗರಿಂದ ಧಂಗೆ: ಕಂಡಲ್ಲಿ ಗುಂಡಿಕ್ಕಲು ಆದೇಶ