ಖಾಲಿಸ್ತಾನಿ ಬೆಂಬಲಿಗರು ಕೆನಡಾದಲ್ಲಿ ನೆಲೆಸಿದ್ದಾರೆ. ಆದರೆ ಇವರು ಇಡೀ ಸಿಖ್ ಸಮುದಾಯದ ಪ್ರತಿಧಿಸುವುದಿಲ್ಲ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಇದೇ ಮೊದಲ ಬಾರಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಒಟ್ಟಾವದಲ್ಲಿರುವ ಪಾರ್ಲಿಮೆಂಟ್ ಹಿಲ್ ನಲ್ಲಿ ದೀಪಾವಳಿ ಹಬ್ಬದ ಆಚರಣೆ ವೇಳೆ ಹಿಂದೂ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆನಡಾದಲ್ಲಿರುವ ಹಿಂದೂಗಳು ಮೋದಿಯನ್ನು ಬೆಂಬಲಿಸುತ್ತಾರೆ. ಆದರೆ ಎಲ್ಲಾ ಹಿಂದೂಗಳು ಮೋದಿಯನ್ನು ಬೆಂಬಲಿಸುವುದಿಲ್ಲ ಎಂದರು.
ಭಾರತದಲ್ಲಿ ಪ್ರತ್ಯೇಕ ದೇಶದ ಹೋರಾಟ ನಡೆಸುತ್ತಿರುವ ಖಾಲಿಸ್ತಾನಿಯರಿಗೆ ಕೆನಡಾ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಭಾರತ ಪದೇಪದೆ ಆರೋಪಿಸಿದ್ದರೂ ನಿರಾಕರಿಸುತ್ತಿದ್ದ ಬಂದಿದ್ದ ಕೆನಡಾ ಇದೇ ಮೊದಲ ಬಾರಿಗೆ ಖಾಲಿಸ್ತಾನಿಯರು ಕೆನಡಾದಲ್ಲಿ ವಾಸವಾಗಿರುವುದನ್ನು ಒಪ್ಪಿಕೊಂಡಿದೆ.
ಪ್ರಧಾನಿ ಮೋದಿ ಅವರನ್ನು ಕೆನಡಾದಲ್ಲಿರುವ ಕೆಲವು ಹಿಂದೂಗಳು ಬೆಂಬಲಿಸುತ್ತಿರುವುದು ನಿಜ. ಆದರೆ ಕೆನಡಾದಲ್ಲಿರುವ ಎಲ್ಲಾ ಹಿಂದೂಗಳು ಮೋದಿಯನ್ನು ಬೆಂಬಲಿಸುವುದಿಲ್ಲ. ಅದೇ ರೀತಿ ಖಾಲಿಸ್ತಾನಿಯರು ಕೆನಡಾದಲ್ಲಿದ್ದಾರೆ. ಆದರೆ ಸಿಖ್ ಸಮುದಾಯಕ್ಕೆ ಸೇರಿದ ಎಲ್ಲರೂ ಖಾಲಿಸ್ತಾನಿಗಳಲ್ಲ ಎಂದು ಟ್ರುಡೊ ಹೇಳಿದ್ದಾರೆ.