Friday, October 18, 2024
Google search engine
Homeಕ್ರೀಡೆ4 ವರ್ಷದ ನಂತರ ತವರಿನಲ್ಲಿ ಮೊದಲ ಬಾರಿ ಟೆಸ್ಟ್ ಗೆದ್ದ ಪಾಕಿಸ್ತಾನ!

4 ವರ್ಷದ ನಂತರ ತವರಿನಲ್ಲಿ ಮೊದಲ ಬಾರಿ ಟೆಸ್ಟ್ ಗೆದ್ದ ಪಾಕಿಸ್ತಾನ!

ಪಾಕಿಸ್ತಾನ ತಂಡ 2ನೇ ಟೆಸ್ಟ್ ಪಂದ್ಯದಲ್ಲಿ 152 ರನ್ ಗಳ ಭಾರೀ ಅಂತರದಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿದೆ. ಈ ಮೂಲಕ 4 ವರ್ಷಗಳ ನಂತರ ಮೊದಲ ಬಾರಿ ತವರಿನಲ್ಲಿ ಟೆಸ್ಟ್ ನಲ್ಲಿ ಗೆಲುವಿನ ನಗೆ ಬೀರಿದೆ.

ಮುಲ್ತಾನ್ ನಲ್ಲಿ ನಡೆದ ಪಂದ್ಯದಲ್ಲಿ 297 ರನ್ ಗಳ ಗುರಿ ಬೆಂಬತ್ತಿದ ಇಂಗ್ಲೆಂಡ್ ತಂಡ ನೊಮನ್ ಅಲಿ (46/8) ಮಾರಕ ದಾಳಿಗೆ ತತ್ತರಿಸಿ 144 ರನ್ ಗಳ ಅಲ್ಪ ಮೊತ್ತಕ್ಕೆ ಆಲೌಟಾಯಿತು. ಈ ಮೂಲಕ ಪಾಕಿಸ್ತಾನ ತಂಡ ಸುಮಾರು 4 ವರ್ಷಗಳ ನಂತರ ಟೆಸ್ಟ್ ನಲ್ಲಿ ಅದರಲ್ಲೂ ತವರಿನಲ್ಲಿ ಮೊದಲ ಗೆಲುವು ದಾಖಲಿಸಿತು.

ಸ್ಪಿನ್ನರ್ ಗ ಳಾದ ನೊಮನ್ ಅಲಿ ಮತ್ತು ಸಾಜಿನ್ ಖಾನ್ ಇಬ್ಬರೇ ಬೌಲಿಂಗ್ ದಾಳಿಗಿಳಿದಿದ್ದು, 1956ರ ನಂತರ ಇದೇ ಮೊದಲ ಬಾರಿಗೆ ಇಬ್ಬರು ಸ್ಪಿನ್ನರ್ ಗಳು ಎಲ್ಲಾ 20 ವಿಕೆಟ್ ಪಡೆದ ದಾಖಲೆ ಬರೆದರು. ಮೊದಲ ಇನಿಂಗ್ಸ್ ನಲ್ಲಿ ಸಾಜಿನ್ ಖಾನ್ 7 ವಿಕೆಟ್ ಪಡೆದರೆ ನೊಮನ್ ಅಲಿ 3 ವಿಕೆಟ್ ಗಳಿಸಿದ್ದರು.

ಬಾಬರ್ ಅಜಮ್ ನಾಯಕ ಸ್ಥಾನದಿಂದ ತೆಗೆದ ನಂತರ ಶಾನ್ ಮಸೂದ್ ನಾಯಕತ್ವದಲ್ಲಿ ಪಾಕಿಸ್ತಾನ ಆಡಿದ 7 ಪಂದ್ಯಗಳಲ್ಲಿ ಒಲಿದ ಮೊದಲ ಗೆಲುವಾಗಿದೆ.

ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ 366 (ಕಮ್ರನ್ ಗುಲಾಮ್ 118, ಸೈಮ್ ಅಯುಬ್ 77, ಜಾಕ್ ಲೀಚ್ 114/4) ಮತ್ತು 221 (ಸಲ್ಮಾನ್ ಆಘಾ 63, ಶೋಯೆಬ್ ಬಶೀರ್ 66/4). ಇಂಗ್ಲೆಂಡ್ 291 (ಬೆನ್ ಡುಕೆಟ್ 114, ಸಾಜಿದ್ ಖಾನ್ 111/7, ನೊಮನ್ ಅಲಿ 101/3). ಮತ್ತು 133 (ಬೆನ್ ಸ್ಟೋಕ್ಸ್ 37, ನೊಮನ್ ಅಲಿ 46/8, ಸಾಜಿದ್ 93/2).

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments