ಹುಸಿ ಬಾಂಬ್ ಬೆದರಿಕೆಗಳು ಭಾರತ ವಿಮಾನ ಸಂಚಾರಗಳಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು, 7 ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.
ಮಂಗಳವಾರ ಒಂದೇ ದಿನದಲ್ಲಿ ಹುಸಿಬಾಂಬ್ ಬೆದರಿಕೆಯಿಂದ 7 ವಿಮಾನಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ. ಅಲ್ಲದೇ ಕಳೆದ 48 ಗಂಟೆಗಳಲ್ಲಿ ಈ ರೀತಿ ಬಾಂಬ್ ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ 10 ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಮುಂಬೈನಿಂದ ಚಿಕಾಗೊಗೆ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನವನ್ನು ಕೆನಡಾದ ಗ್ರಾಮೀಣ ಪ್ರದೇಶವಾದ ಇಲ್ಕುತ್ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಸಲಾಗಿದೆ.
ಸೋಮವಾರ 2 ಇಂಡಿಗೊ ಹಾಗೂ ಒಂದು ಏರ್ ಇಂಡಿಯಾ ವಿಮಾನಗಳ ಸಂಚಾರ ಮಾರ್ಗ ಬದಲಾಯಿಸಲಾಗಿತ್ತು. ಇದೀಗ ಮಂಗಳವಾರ ಒಂದೇ ದಿನ 7 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಇಂದು, ಏರ್ ಇಂಡಿಯಾ ದೆಹಲಿ-ಚಿಕಾಗೋ ವಿಮಾನ, ದಮ್ಮಾಮ್-ಲಕ್ನೋ ಇಂಡಿಗೋ ವಿಮಾನ, ಅಯೋಧ್ಯೆ-ಬೆಂಗಳೂರು ಏರ್ ಇಂಡಿಯಾ ಎಕ್ಸ್‌ಪ್ರೆಸ್, ದರ್ಭಾಂಗಾದಿಂದ ಮುಂಬೈಗೆ ಸ್ಪೈಸ್‌ಜೆಟ್ ವಿಮಾನ (SG116), ಬಾಗ್ಡೋಗ್ರಾದಿಂದ ಬೆಂಗಳೂರಿಗೆ ಆಕಾಶ ಏರ್ ವಿಮಾನ (QP 1373), ಅಲಯನ್ಸ್ ಏರ್ ಅಮೃತಸರ -ಡೆಹ್ರಾಡೂನ್-ದೆಹಲಿ ವಿಮಾನ (9I 650) ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ (IX 684) ಮಧುರೈನಿಂದ ಸಿಂಗಾಪುರ ವಿಮಾನಗಳ ಮೇಲೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ.