Thursday, September 19, 2024
Google search engine
Homeತಾಜಾ ಸುದ್ದಿಪೂಜಾ ಖೇಡ್ಕರ್ ಕೆಎಎಸ್ ಆಯ್ಕೆ ರದ್ದು, ಯುಪಿಎಸ್ ಸಿ ಪರೀಕ್ಷೆಯಿಂದ ಆಜೀವ ನಿಷೇಧ!

ಪೂಜಾ ಖೇಡ್ಕರ್ ಕೆಎಎಸ್ ಆಯ್ಕೆ ರದ್ದು, ಯುಪಿಎಸ್ ಸಿ ಪರೀಕ್ಷೆಯಿಂದ ಆಜೀವ ನಿಷೇಧ!

ತರಬೇತಿ ಅವಧಿಯಲ್ಲಿಯೇ ಅಧಿಕಾರ ದರ್ಪ ತೋರಿದ್ದಕ್ಕಾಗಿ ವಿವಾದಕ್ಕೆ ಗುರಿಯಾಗಿದ್ದ ಪೂಜಾ ಖೇಡ್ಕರ್ ಅವರ ಕೆಎಎಸ್ ಆಯ್ಕೆಯನ್ನು ರದ್ದುಗೊಳಿಸಲಾಗಿದ್ದು, ಯುಪಿಎಸ್ ಸಿ ಪರೀಕ್ಷೆಯಿಂದ ಆಜೀವ ನಿಷೇಧ ಹೇರಲಾಗಿದೆ.

ಯುಪಿಎಸ್ ಸಿ ಪರೀಕ್ಷೆಯನ್ನು ಹಲವಾರು ಬಾರಿ ಬರೆಯಲು ಪೂಜಾ ತನ್ನ ಹೆಸರನ್ನು ಪದೇಪದೆ ಬದಲಾಯಿಸಿದ್ದು ಮಾತ್ರವಲ್ಲ, ಹೆತ್ತವರ ಹೆಸರು ಹಾಗೂ ಊರು ಹಾಗೂ ಅಂಗವಿಕಲೆ ಎಂದು ನಕಲಿ ದಾಖಲೆ ಸೃಷ್ಟಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ನಾಗರಿಕ ಸೇವಾ ನಿಯಮಗಳನ್ನು ಉಲ್ಲಂಘಿಸಿರುವುದು ಬಳಕಿಗೆ ಬಂದಿದೆ. ಆದರೆ ಪೂಜಾ ಹೆಸರನ್ನು ಐಎಎಸ್ ಪರೀಕ್ಷೆಯ ರ್ಯಾಂಕಿಂಗ್ ಪಟ್ಟಿಯಿಂದ ವಜಾ ಮಾಡಲು ಸಾಧ್ಯವಿಲ್ಲ ಎಂದು ಯುಪಿಎಸ್ ಸಿ ತಿಳಿಸಿದೆ.

ಯುಪಿಎಸ್ ಸಿ ಪರೀಕ್ಷೆ ವೇಳೆ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಎಂದು 2022ರ ಜುಲೈ 24ರಂದು ಸಿವಿಲ್ ಸರ್ವಿಸ್ ಪರೀಕ್ಷೆ ಬರೆದಿದ್ದಾರೆ.  34 ವರ್ಷದ ಪೂಜಾ ಅವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಜುಲೈ 25ರೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿತ್ತು. ಆದರೆ ಆಗಸ್ಟ್ 4ರವರೆಗೆ ಸಮಯ ಕೇಳಿದ್ದಾರೆ. ಆದರೆ ಜುಲೈ 30ರೊಳಗೆ ಉತ್ತರ ನೀಡುವಂತೆ ಗಡುವು ನೀಡಲಾಗಿತ್ತು. ಉತ್ತರ ನೀಡದ ಹಿನ್ನೆಲೆಯಲ್ಲಿ ಅವರ ಆಯ್ಕೆಯನ್ನು ರದ್ದುಗೊಳಿಸಲಾಗಿದೆ ಎಂದು ಯುಪಿಎಸ್ ಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಪೂಜಾ ಖೇಡ್ಕರ್ ನಕಲಿ ದಾಖಲೆ ನೀಡಿ ಪರೀಕ್ಷೆ ಬರೆದ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಯುಪಿಎಸ್ ಸಿ 2009ರಿಂದ 2023ರ ಅವಧಿಯಲ್ಲಿ ನಡೆದ ಯುಪಿಎಸ್ ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು ಆಯ್ಕೆಯಾದ ಎಲ್ಲಾ 15,000 ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆ ನಡೆಸಲಾಗುತ್ತಿದೆ. ಪೂಜಾ ಹೊರತುಪಡಿಸಿ ಯಾವುದೇ ಅಭ್ಯರ್ಥಿ ನಿಯಮ ಮೀರಿ ಪರೀಕ್ಷೆ ಪಡೆದಿರುವುದು ಅಥವಾ ನಕಲಿ ದಾಖಲೆ ನೀಡಿರುವುದು ಪತ್ತೆಯಾಗಿಲ್ಲ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments