ರಾಷ್ಟ್ರಪತಿ ದ್ರೌಪದಿ ಮರ್ಮು ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹವಾಲ್ ಜೊತೆ ಸೌಹಾರ್ದ ಪಂದ್ಯ ಆಡುವ ಮೂಲಕ ಕ್ರೀಡೆ ಮೇಲಿರುವ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಬುಧವಾರ ನಡೆದ ಕ್ರೀಡಾ ಕಾರ್ಯಕ್ರಮದ ವೇಳೆ ರಾಷ್ಟ್ರಪತಿ ದ್ರೌಪದಿ ಮರ್ಮು ಬ್ಯಾಡ್ಮಿಂಟನ್ ಆಡಿದ್ದೂ ಅಲ್ಲದೇ ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹವಾಲ್ ವಿರುದ್ಧ ಒಂದು ಅಂಕ ಗಳಿಸುವ ಮೂಲಕ ನೆರೆದಿದ್ದ ಕ್ರೀಡಾಪಟುಗಳ ಚಪ್ಪಾಳೆಯನ್ನೂ ಗಿಟ್ಟಿಸಿದರು.
ತಿಳಿ ಕೆಂಪು ಬಣ್ಣದ ಸೆಲ್ವಾರ್ ಕಮೀಜ್ ಧರಿಸಿದ್ದ ದ್ರೌಪದಿ ಮರ್ಮು ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ಎಲ್ಲಿಯೂ ತಮ್ಮ ಭಾವನೆಗಳನ್ನು ತೋರಿಸಿಕೊಂಡಿರಲಿಲ್ಲ. ಆದರೆ ಬುಧವಾರ ಬ್ಯಾಡ್ಮಿಂಟನ್ ಆಡಿ ಗಮನ ಸೆಳದಿದ್ದಾರೆ.
ರಾಷ್ಟ್ರಪತಿ ಭವನ ಅಧಿಕೃತ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಈ ವೀಡಿಯೊ ವೈರಲ್ ಆಗಿದೆ.
ಸೈನಾ ನೆಹವಾಲ್ ರಾಷ್ಟ್ರಪತಿ ಭವನದಲ್ಲಿ ಗುರುವಾರ ಆಕೆಯ ಕಥೆ.. ನನ್ನ ಕಥೆ ವಿಷಯದ ಮೇಲೆ ಸ್ಫೂರ್ತಿಯುತ ಭಾಷಣ ಮಾಡಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಸಾಧಕ ಮಹಿಳೆಯರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ವೇದಿಕೆಯಲ್ಲಿ ಹಲವಾರು ಮಹಿಳೆಯರು ತಮ್ಮ ಅನುಭವ ಹಂಚಿಕೊಂಡಿದ್ದು, ಜನಮನ ಸೆಳೆದಿವೆ.
Leave a Reply