Thursday, September 19, 2024
Google search engine
Homeತಾಜಾ ಸುದ್ದಿ75 ವರ್ಷ ಆದರೂ ಮೋದಿನೇ ಪ್ರಧಾನಿ: ಅಮಿತ್ ಶಾ

75 ವರ್ಷ ಆದರೂ ಮೋದಿನೇ ಪ್ರಧಾನಿ: ಅಮಿತ್ ಶಾ

ಮೋದಿಗೆ 75 ವರ್ಷ ಆದರೂ ಪ್ರಧಾನಿ ಆಗಿ ಮುಂದುವರಿಯುತ್ತಾರೆ ಮತ್ತು ಮೂರನೇ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಹೈದರಾಬಾದ್ ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 17ಕ್ಕೆ ಪ್ರಧಾನಿ ಮೋದಿ 75 ವರ್ಷ ಪೂರ್ಣಗೊಳಿಸಲಿದ್ದಾರೆ. ಪ್ರಧಾನಿ ಆಗಿ ಅದು ಅವರ ಕೊನೆಯ ದಿನವಾಗಿರುತ್ತದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿಕೆಗೆ ಮೋದಿ ಪ್ರಧಾನಿಯಾಗಿ 3ನೇ ಅವಧಿ ಪೂರ್ಣಗೊಳಿಸುತ್ತಾರೆ ಎಂದು ತಿರುಗೇಟು ನೀಡಿದರು.

ಪ್ರಧಾನಿ ಮೋದಿಗೆ 75 ವರ್ಷ ಆಗುತ್ತದೆ ಎಂದು ಅರವಿಂದ್ ಕೇಜ್ರಿವಾಲ್ ಆಗಲಿ ಇಂಡಿಯಾ ಬ್ಲಾಕ್ ಮೈತ್ರಿಕೂಟವಾಗಲಿ ಸಂತೋಷಪಡುವ ಅಗತ್ಯವಿಲ್ಲ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬಾರದು ಎಂದು ಬಿಜೆಪಿ ಅಜೆಂಡಾದಲ್ಲಿ ಬರೆದಿಲ್ಲ. ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ ಮತ್ತು ಅವಧಿ ಪೂರ್ಣಗೊಳಿಸುತ್ತಾರೆ ಎಂದು ಅಮಿತ್ ಶಾ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments