Monday, September 16, 2024
Google search engine
Homeತಾಜಾ ಸುದ್ದಿಬ್ರಿಟನ್ ಕಿಂಗ್ ಚಾರ್ಲ್ಸ್ ಗಿಂತ ಪ್ರಧಾನಿ ರಿಷಿ ಸುನಕ್ ಪತ್ನಿ ಆಕಾಂಕ್ಷ ಶ್ರೀಮಂತೆ!

ಬ್ರಿಟನ್ ಕಿಂಗ್ ಚಾರ್ಲ್ಸ್ ಗಿಂತ ಪ್ರಧಾನಿ ರಿಷಿ ಸುನಕ್ ಪತ್ನಿ ಆಕಾಂಕ್ಷ ಶ್ರೀಮಂತೆ!

ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ದಂಪತಿಯ ಪುತ್ರಿ ಹಾಗೂ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪತ್ನಿ ಆಕಾಂಕ್ಷ ಮೂರ್ತಿ ಕಿಂಗ್ ಚಾರ್ಲ್ಸ್ ಗಿಂತ ಶ್ರೀಮಂತೆ!

ಹೌದು, ಸಂಡೆ ಟೈಮ್ಸ್ ಶ್ರೀಮಂತರ ಪಟ್ಟಿ ಪ್ರಕಟಿಸಿದ್ದು, ಬ್ರಿಟನ್ ನ 1000 ಶ್ರೀಮಂತರ ಪಟ್ಟಿಯನ್ನು ಅವರ ವೈಯಕ್ತಿಕ ಹಾಗೂ ಕುಟುಂಬದ ಒಟ್ಟು ಆದಾಯದ ಪಟ್ಟಿ ಬಿಡುಗಡೆ ಮಾಡಿದೆ.

ರಿಷಿ ಸುನಕ್ ಮತ್ತು ಆಕಾಂಕ್ಷ ಮೂರ್ತಿ ದಂಪತಿಯ ವಾರ್ಷಿಕ ಆದಾಯ ಕಳೆದ ವರ್ಷಕ್ಕೆ ಹೋಲಿಸಿದರೆ 120 ದಶಲಕ್ಷ ಡಾಲರ್ ಹೆಚ್ಚಾಗಿದೆ. ಈ ಮೂಲಕ ಇವರ ಒಟ್ಟು ಆದಾಯ 651 ದಶಲಕ್ಷ ಡಾಲರ್ ಗೆ ಏರಿಕೆಯಾಗಿದೆ.

ಕಿಂಗ್ ಚಾರ್ಲ್ಸ್ ಆದಾಯ 529 ದಶಲಕ್ಷ ಡಾಲರ್ ಆಗಿದ್ದು, ಅವರಿಗಿಂತ ಆಕಾಂಕ್ಷ ಮೂರ್ತಿ ಮತ್ತು ರಿಷಿ ಸುನಕ್ ದಂಪತಿ ಹೆಚ್ಚು ಶ್ರೀಮಂತರಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments