ಸಂಸತ್ ಭವನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ `ಚಕ್ರವ್ಯೂಹ’ ಆರೋಪ ಮಾಡಿದ್ದಕ್ಕಾಗಿ ನನ್ನ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಲು ಸಿದ್ಧತೆ ನಡೆಸಿದೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಕೇರಳದ ವಯನಾಡು ದುರಂತ ಸ್ಥಳಕ್ಕೆ ಭೇಟಿ ನೀಡಿ ದೆಹಲಿಗೆ ಮರಳಿದ ನಂತರ ಶುಕ್ರವಾರ ತಡರಾತ್ರಿ 1.30ಕ್ಕೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಜಾರಿ ನಿರ್ದೇಶನಾಲಯದಲ್ಲಿರುವ ಕೆಲವು ಅಧಿಕಾರಿಗಳು ನನ್ನ ಮೇಲೆ ದಾಳಿ ನಡೆಸಲು ಇಡಿ ಸಿದ್ಧತೆ ನಡೆಸಿರುವ ವಿಷಯ ತಿಳಿಸಿದ್ದಾರೆ. ಆದರೆ ದಾಳಿಯನ್ನು ನಾನು ಎರಡು ಕೈಗಳಿಂದ ಸ್ವಾಗತಿಸುವೆ ಎಂದರು,
ಇಡಿ ಅಧಿಕಾರಿಗಳು ನನಗೆ ಟೀ, ಬಿಸ್ಕತ್ ಕೊಡಲು ಕಾಯುತ್ತಿದ್ದಾರೆ. ಅವರ ಬರುವಿಕೆಯನ್ನು ಸ್ವಾಗತಿಸಲು ಕಾಯುತ್ತಿರುವೆ ಎಂದು ರಾಹುಲ್ ಹೇಳಿದ್ದಾರೆ.
ಜುಲೈ 29ರಂದು ಲೋಕಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ನಿರುದ್ಯೋಗಿಗಳು, ರೈತರು ಹಾಗೂ ಯುವಕರು ಬಜೆಟ್-2024ರಿಂದ ನಿರಾಶಾರಾಗಿದ್ದಾರೆ. ಕೇವಲ 6 ಮಂದಿ ದೇಶವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.