Monday, September 16, 2024
Google search engine
Homeತಾಜಾ ಸುದ್ದಿRaksha Bandhan ಪ್ರತಿ ನಿಮಿಷಕ್ಕೆ 700 ರಾಖಿ ಮಾರಾಟ; ದಾಖಲೆ ಬರೆದ ಸ್ವಿಗ್ಗಿ, ಬ್ಲಿಂಕಿಟ್!

Raksha Bandhan ಪ್ರತಿ ನಿಮಿಷಕ್ಕೆ 700 ರಾಖಿ ಮಾರಾಟ; ದಾಖಲೆ ಬರೆದ ಸ್ವಿಗ್ಗಿ, ಬ್ಲಿಂಕಿಟ್!

ಸೋದರತ್ವದ ಮಹತ್ವ ಸಾರುವ ರಾಖಿ ಹಬ್ಬವನ್ನು ಈ ಬಾರಿ ಆನ್ ಲೈನ್ ಕಾಮರ್ಸ್ ಕಂಪನಿಗಳು ಅತೀ ಹೆಚ್ಚು ವಹಿವಾಟು ನಡೆಸುವ ಮೂಲಕ ದಾಖಲೆ ಬರೆದಿದೆ.

ರಾಖಿ ಹಬ್ಬವಾದ ಸೋಮವಾರ 24 ಗಂಟೆಯಲ್ಲಿ ಆನ್ ಲೈನ್ ಸೇವೆ ನೀಡುವ ಸ್ವಿಗ್ಗಿ ಮತ್ತು ಬ್ಲಿಂಕಿಟ್ ಪ್ರತಿ ನಿಮಿಷಕ್ಕೆ ಸರಾಸರಿ 693 ರಾಖಿಗಳನ್ನು ಮಾರಾಟ ಮಾಡಿವೆ. ವಿಶೇಷ ಅಂದರೆ ಸರಾಸರಿ 11 ಸಾವಿರ ರೂ. ಮೌಲ್ಯದ ಉಡುಗೊರೆಗಳು ಮಾರಾಟವಾಗಿ ಹೊಸ ದಾಖಲೆ ಬರೆದಿವೆ.

ಎರಡೂ ಕಂಪನಿಗಳು 2023ರಲ್ಲಿ ರಾಖಿ ಹಬ್ಬದಲ್ಲಿ ಮಾಡಿದ್ದ ಅತ್ಯಧಿಕ ವಹಿವಾಟಿನ ದಾಖಲೆಯನ್ನು ಈ ಬಾರಿ ಮುರಿದಿದೆ.

ಬ್ಲಿಂಕಿಟ್ ಕಂಪನಿಯ ಸಿಇಒ ಅಲ್ಬಿಂದರ್ ದಿಂಡ್ಸಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಒಂದು ದಿನದಲ್ಲಿ ಅತ್ಯಧಿಕ ಆರ್ಡರ್ ಪಡೆದ ದಾಖಲೆ ಈ ಬಾರಿ ರಾಖಿ ಹಬ್ಬದಂದು ಆಗಿದೆ. ವಿಶೇಷ ಅಂದರೆ ಪ್ರತಿ ನಿಮಿಷಕ್ಕೆ ಬಂದ ಆರ್ಡರ್ ಗಳು ಹಿಂದಿನ ಎಲ್ಲಾ ದಾಖಲೆ ಮುರಿದಿದೆ. ಗರಿಷ್ಠ ಅಂದರೆ ಪ್ರತಿ ನಿಮಿಷಕ್ಕೆ 693 ರಾಖಿಗಳು ಮಾರಾಟವಾಗಿವೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ರಾಖಿ ಹಬ್ಬವನ್ನು ಈ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗಿದೆ. ಅಮೆರಿಕ, ಕೆನಡಾ, ನೆದರ್ಲೆಂಡ್ಸ್, ಜರ್ಮನಿ, ಫ್ರಾನ್ಸ್ ಮತ್ತು ಜಪಾನ್ ಸೇರಿದಂತೆ 6 ರಾಷ್ಟ್ರಗಳಿಂದ ಆರ್ಡರ್ ಗಳು ಬಂದಿವೆ ಎಂದು ಅವರು ವಿವರಿಸಿದ್ದಾರೆ.

ಬ್ಲಿಂಕಿಟ್ ಕಂಪನಿ 2022ರಲ್ಲಿ ಜೊಮೊಟೊ ಷೇರುಗಳನ್ನು 570 ದಶಲಕ್ಷ ಡಾಲರ್ ಗೆ ಖರೀದಿಸಿತ್ತು.

ಸ್ವಿಗ್ಗಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 5 ಪಟ್ಟು ಹೆಚ್ಚು ಆರ್ಡರ್ ಗಳು ಒಂದು ದಿನ ಮುಂಚಿತವಾಗಿಯೇ ಬಂದಿದೆ. ಇನ್ನೂ ಒಂದು ದಿನ ಇರುವುದರಿಂದ ವಹಿವಾಟು ಮತ್ತಷ್ಟು ಹೆಚ್ಚುವ ವಿಶ್ವಾಸವಿದೆ ಎಂದು ಹೇಳಿಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments