Home ತಾಜಾ ಸುದ್ದಿ 15 ದಿನಕ್ಕೊಮ್ಮೆ ಕ್ರೆಡಿಟ್ ಸ್ಕೋರ್ ನವೀಕರಣಕ್ಕೆ ಆರ್ ಬಿಐ ತಾಕಿತು!

15 ದಿನಕ್ಕೊಮ್ಮೆ ಕ್ರೆಡಿಟ್ ಸ್ಕೋರ್ ನವೀಕರಣಕ್ಕೆ ಆರ್ ಬಿಐ ತಾಕಿತು!

ನವದೆಹಲಿ: ತ್ವರಿತವಾಗಿ ಮತ್ತು ಕಾಲಕಾಲಕ್ಕೆ ಕ್ರೆಡಿಟ್ ಮಟ್ಟವನ್ನು ನವೀಕರಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಕ್ರೆಡಿಟ್ ಬ್ಯೂರೋಗಳು ಮತ್ತು ಬ್ಯಾಂಕುಗಳಿಗೆ ಸೂಚನೆ ನೀಡಿದೆ.

by Editor
0 comments
credit score

ನವದೆಹಲಿ: ತ್ವರಿತವಾಗಿ ಮತ್ತು ಕಾಲಕಾಲಕ್ಕೆ ಕ್ರೆಡಿಟ್ ಮಟ್ಟವನ್ನು ನವೀಕರಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಕ್ರೆಡಿಟ್ ಬ್ಯೂರೋಗಳು ಮತ್ತು ಬ್ಯಾಂಕುಗಳಿಗೆ ಸೂಚನೆ ನೀಡಿದೆ.

ಕ್ರೆಡಿಟ್ ಸ್ಕೋರ್ ಬ್ಯೂರೋಗಳು, ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳು ಕ್ರೆಡಿಟ್ ಸ್ಕೋರ್ ತ್ವರಿತವಾಗಿ ನವೀಕರಿಸಲು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ಹೊಸ ಮಾರ್ಗಸೂಚಿಗಳು ಜನವರಿ 1 ರಿಂದ ಜಾರಿಗೆ ಬಂದಿವೆ.

ಕ್ರೆಡಿಟ್ ಬ್ಯೂರೋಗಳು ಮೊದಲು ಕ್ರೆಡಿಟ್ ವರದಿಗಳನ್ನು ನವೀಕರಣ ಮಾಡಲು ಗರಿಷ್ಠ 30 ರಿಂದ 45 ದಿನಗಳನ್ನು ತೆಗೆದುಕೊಳ್ಳುತ್ತಿದ್ದವು. ಆದರೆ ಈಗ ಭಾರತೀಯ ರಿಸರ್ವ್ ಬ್ಯಾಂಕ್ ಆ ಗಡುವನ್ನು ಕಡಿಮೆ ಮಾಡಿದ್ದು, ಹೆಚ್ಚೆಂದರೆ 15 ದಿನಗಳಲ್ಲಿ ಕ್ರೆಡಿಟ್ ವರದಿ ನವೀಕರಣ ಮಾಡುವಂತೆ ಬ್ಯೂರೋಗಳಿಗೆ ಸೂಚಿಸಿದೆ.

ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಈ ವಿಷಯದ ಬಗ್ಗೆ ಗಮನ ಹರಿಸಬೇಕು. ಅವರು ತಮ್ಮ ಗ್ರಾಹಕರ ಬಗ್ಗೆ ಕ್ರೆಡಿಟ್ ಮಾಹಿತಿಯನ್ನು ಕಾಲಕಾಲಕ್ಕೆ ಕ್ರೆಡಿಟ್ ಬ್ಯೂರೋಗಳಿಗೆ ಕಳುಹಿಸಬೇಕು.

banner

ಕ್ರೆಡಿಟ್ ಬ್ಯೂರೋಗಳು ತಮ್ಮ ಆಪ್ ಗಳು ಮತ್ತು ಪೋರ್ಟಲ್‌ಗಳಲ್ಲಿ ಗ್ರಾಹಕರು/ಸಾಲಗಾರರು/ಗ್ರಾಹಕರ ಕ್ರೆಡಿಟ್ ವರದಿಗಳನ್ನು ತಕ್ಷಣವೇ ನವೀಕರಿಸುತ್ತವೆ. ಅಲ್ಲದೇ, ಒಬ್ಬ ವ್ಯಕ್ತಿಗೆ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ವೈಯಕ್ತಿಕ ಸಾಲ ಪಡೆಯಲು ಕಷ್ಟವಾಗುವಂತೆ ಆರ್ಬಿಐ ನಿಯಮಗಳನ್ನು ಬದಲಾವಣೆ ಮಾಡಿದೆ.

ಕ್ರೆಡಿಟ್ ವರದಿಯನ್ನು ತಡವಾಗಿ ನವೀಕರಿಸುವುದರಿಂದ ಉತ್ತಮ ಸಾಲೇತಿಹಾಸ ಇದ್ದವರೂ ಸಮಯಕ್ಕೆ ಸಾಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಋಣಾತ್ಮಕ ದಾಖಲೆ ಹೊಂದಿರುವವರು ತಕ್ಷಣವೇ ಸಾಲಗಳಿಗೆ ಅನುಮೋದನೆ ಪಡೆಯದಿರಬಹುದು.

ಅಂತಹ ಸಂದರ್ಭಗಳನ್ನು ತಪ್ಪಿಸಲು ನವೀಕರಿಸಿದ ಕ್ರೆಡಿಟ್ ವರದಿಯನ್ನು ಹೊಂದಿರುವುದು ಬಹಳ ಮುಖ್ಯ. ಸಾಲಕ್ಕಾಗಿ ಅರ್ಜಿ ಸಲ್ಲಿಸುವವರ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಲು ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಕ್ರೆಡಿಟ್ ವರದಿಯು ಮಾನದಂಡವಾಗಿ ನಿಂತಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಒನ್‌ಪ್ಲಸ್ ಪರಿಚಯಿಸುತ್ತಿದೆ ಒನ್‌ಪ್ಲಸ್ 13 ಸೀರೀಸ್ ಗಾಗಿ ಫೋನ್ ಬದಲಿ ಪ್ಲಾನ್! ಕಲಬುರಗಿಯಲ್ಲಿ 17 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಕುಳಿತಲ್ಲೇ ಹೃದಯಾಘಾತದಿಂದ ಸಾವು ಮೈಸೂರು ಆಸ್ಪತ್ರೆಗೆ ನಟ ದರ್ಶನ್ ಭೇಟಿ: 3 ದಿನದಲ್ಲಿ ಶಸ್ತ್ರಚಿಕಿತ್ಸೆ? ಪೊಲೀಸರ ಸಮ್ಮುಖದಲ್ಲೇ ಮಗಳಿಗೆ ಗುಂಡಿಕ್ಕಿ ಕೊಂದ ತಂದೆ! ನೌಕಾಪಡೆಗೆ ತ್ರಿಶಕ್ತಿ: 3 ಐಎನ್ ಎಸ್ ಯುದ್ಧ ನೌಕೆ ಲೋಕಾರ್ಪಣೆ ಮಾಡಿದ ಪ್ರಧಾನಿ! ಬಿಸಿಸಿಐನಿಂದ ಮೇಜರ್ ಸರ್ಜರಿ: ಆಟಕ್ಕೆ ತಕ್ಕಂತೆ ಆದಾಯ, ಸಂಗಾತಿ ಪ್ರವೇಶ ನಿರ್ಬಂಧ! 15 ದಿನಕ್ಕೊಮ್ಮೆ ಕ್ರೆಡಿಟ್ ಸ್ಕೋರ್ ನವೀಕರಣಕ್ಕೆ ಆರ್ ಬಿಐ ತಾಕಿತು! ಸಾಮೂಹಿಕ ಅತ್ಯಾಚಾರ ಎಸಗಿದ ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ವಿರುದ್ಧ ಎಫ್ ಐಆರ್ ದಾಖಲು! ಬಿಆರ್‌ಎಸ್ ನಾಯಕ ರಾಮರಾವ್, ಹರೀಶ್‌ಗೆ ಗೃಹಬಂಧನ ಇಸ್ರೇಲ್-ಹಮಾಸ್ ಕದನ ವಿರಾಮ ಸಾಧ್ಯತೆ: ಮಧ್ಯಪ್ರಾಚ್ಯದಲ್ಲಿ ಶಾಂತಿ ವಾಪಸ್