ಭಾರತ ತಂಡದ ನಾಯಕರಾಗಿರುವ ರಾಬಿನ್ ಉತ್ತಪ್ಪ ಸಿಂಗಾಪುರ್ ಸಿಕ್ಸರ್ ಟೂರ್ನಿಯಲ್ಲಿ ಎಸೆದ ಒಂದೇ ಓವರ್ ನಲ್ಲಿ ಇಂಗ್ಲೆಂಡ್ ಮಾಜಿ ಆಟಗಾರ ರವಿ ಬೋಪಾರ ಸತತ 6 ಸಿಕ್ಸರ್ ಬಾರಿಸಿದ ದಾಖಲೆ ಬರೆದಿದ್ದಾರೆ.
ನವೆಂಬರ್ 2ರಂದು ಮಾಂಗ್ ಕುಕ್ ನಲ್ಲಿ ನಡೆದ ಪಂದ್ಯದಲ್ಲಿ ಬೋಪಣ್ಣ ಎಸೆದ ನಾಲ್ಕನೇ ಓವರ್ ನಲ್ಲಿ ಇಂಗ್ಲೆಂಡ್ ತಂಡದ ನಾಯಕ ರವಿ ಬೋಪಾರ ಸತತ 6 ಸಿಕ್ಸರ್ ಸಿಡಿಸಿದರು. ಮುಂದಿನ ಓವರ್ ನಲ್ಲಿ ಶಹಬಾಜ್ ನದೀಂ ಎಸೆತದಲ್ಲಿ ಸಿಕ್ಸರ್ ಬಾರಿಸಿ ಸತತ 7 ಸಿಕ್ಸರ್ ದಾಖಲೆ ಬರೆದರು.
ರವಿ ಬೋಪಾರ 14 ಎಸೆತಗಳಲ್ಲಿ 8 ಸಿಕ್ಸರ್ ಸೇರಿದ 54 ರನ್ ಬಾರಿಸಿದ ನಂತರ ನಿವೃತ್ತಿ ಘೋಷಿಸಿದರು. ಮತ್ತೊಂದು ತುದಿಯಲ್ಲಿ ಆಡಿದ ಸಮಿತ್ ಪಟೇಲ್ 18 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ ಸೇರಿದ 51 ರನ್ ಸಿಡಿಸಿದರು.
ಬೋಪಾರ ಮತ್ತು ಸಮಿತ್ ಪಟೇಲ್ ಸಾಹಸದಿಂದ ಇಂಗ್ಲೆಂಡ್ 6 ಓವರಗಳಲ್ಲಿ 1 ವಿಕೆಟ್ ಕಳೆದುಕೊಂಡು 120 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ಭಾರತ ತಂಡ 6 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 105 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಕೇದಾರ್ ಜಾಧವ್ 15 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡ ಅಜೇಯ 48 ರನ್ ಬಾರಿಸಿದರು.