ಸತತ ವೈಫಲ್ಯದಿಂದ ಭಾರತ ತಂಡದಲ್ಲಿ ಕಾಯಂ ಸ್ಥಾನ ಪಡೆಯಲು ಪರದಾಡುತ್ತಿದ್ದ ಕೇರಳ ಮೂಲಕ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಟಿ-20 ಕ್ರಿಕೆಟ್ ನಲ್ಲಿ ಭಾರತ ಪರ ಸತತ 2 ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಡರ್ಬನ್ ನಲ್ಲಿ ಶುಕ್ರವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಸ್ಯಾಮ್ಸನ್ ಶತಕ ಸಿಡಿಸಿ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ನಲ್ಲಿ ಭಾರತದ ಪರ ಸತತ 2 ಶತಕ ಸಿಡಿಸಿದ ಮೊದಲಿಗ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಇಂಗ್ಲೆಂಡ್ ನ ಫಿಲ್ ಸಾಲ್ಟ್, ದಕ್ಷಿಣ ಆಫ್ರಿಕಾದ ರಿಲೀ ರಾಸ್ಕೊ ಮತ್ತು ಫ್ರಾನ್ಸ್ ನ ಗೌಸ್ತವ್ ಮೆಕೊಯಿನ್ ಸತತ 2ನೇ ಶತಕ ಗಳಿಸಿದ ಸಾಧನೆ ಮಾಡಿದ್ದು. ಈ ಸಾಲಿಗೆ ಇದೀಗ ಸ್ಯಾಮ್ಸನ್ ಸೇರ್ಪಡೆಯಾಗಿದ್ದಾರೆ. ಅಲ್ಲದೇ ಟೆಸ್ಟ್ ಆಡುವ ತಂಡಗಳ ಪೈಕಿ ಮೂರನೇ ಆಟಗಾರರಾಗಿದ್ದಾರೆ.
47 ಎಸೆತಗಳಲ್ಲಿ ಶತಕ ಪೂರೈಸಿದ ಸ್ಯಾಮ್ಸನ್ 50 ಎಸೆತಗಳಲ್ಲಿ 7 ಬೌಂಡರಿ ಮತ್ತು 10 ಸಿಕ್ಸರ್ ಗಳ ನೆರವಿನಿಂದ 107 ರ್ ಬಾರಿಸಿ ಔಟಾದರು. ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧದ ಟಿ-20 ಪಂದ್ಯದಲ್ಲಿ ಸ್ಯಾಮ್ಸನ್ 47 ಎಸೆತಗಳಲ್ಲಿ 111 ರನ್ ಗಳಿಸಿದ್ದರು.
ಸ್ಯಾಮ್ಸನ್ ದಕ್ಷಿಣ ಆಫ್ರಿಕಾ ವಿರುದ್ಧ 47 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಅತ್ಯಂತ ವೇಗವಾಗಿ ಶತಕ ಸಿಡಿಸಿದ ಆಟಗಾರ ಎಂಬ ಮತ್ತೊಂದು ದಾಖಲೆ ಬರೆದರು.
ಸ್ಯಾಮ್ಸನ್ ಒಂದೇ ಪಂದ್ಯದಲ್ಲಿ 10 ಸಿಕ್ಸರ್ ಬಾರಿಸಿ ಮತ್ತೊಂದು ದಾಖಲೆ ಬರೆದಿದ್ದಾರೆ. ಬೌಂಡರಿ ಸಿಕ್ಸರ್ ಗಳಿಂದಲೇ 88 ರನ್ ಕೊಳ್ಳೆ ಹೊಡೆದಿದ್ದಾರೆ.