1
ಭಾರತದ ಶರದ್ ಕುಮಾರ್ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದರೆ, ಮರಿಯಪ್ಪನ್ ತಂಗವೇಲು ಕಂಚು ಗಳಿಸಿದರು. ಈ ಮೂಲಕ ಭಾರತ ಪ್ಯಾರಾಲಿಂಪಿಕ್ಸ್ ನ ಹೈಜಂಪ್ ವಿಭಾಗದಲ್ಲಿ 2 ಪದಕ ಕೊಳ್ಳೆ ಹೊಡೆಯಿತು.
ಮಂಗಳವಾರ ನಡೆದ ಪುರುಷರ ಟಿ 63 ವಿಭಾದಗ ಹೈಜಂಪ್ ನಲ್ಲಿ ಭಾರತದ ಮೂವರು ಫೈನಲ್ ಲಗ್ಗೆ ಹಾಕಿದರು. ಇದರಲ್ಲಿ ಇಬ್ಬರು ಪದಕ ಗೆದ್ದು ಇತಿಹಾಸ ಬರೆದರು.
ಶರದ್ ಕುಮಾರ್ ಮತ್ತು ಮರಿಯಪ್ಪನ್ 1.81 ಮೀ. ಕನಿಷ್ಠ ಅಂತರ ಕಾಯ್ದುಕೊಂಡು ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು. ಮತ್ತೊಬ್ಬ ಸ್ಪರ್ಧಿ ಶೈಲೇಶ್ ಕುಮಾರ್ ಪದಕ ಹೊಸ್ತಿಲಲ್ಲಿ ಎಡವಿದರು.