Monday, September 16, 2024
Google search engine
Homeತಾಜಾ ಸುದ್ದಿಚಿಕಿತ್ಸೆಗೆ ಹಣ ಇಲ್ಲದೇ 15 ದಿನದ ಹಸುಗೂಸನ್ನು ಜೀವಂತವಾಗಿ ಹೂತುಹಾಕಿದ ಪಾಪಿ ತಂದೆ!

ಚಿಕಿತ್ಸೆಗೆ ಹಣ ಇಲ್ಲದೇ 15 ದಿನದ ಹಸುಗೂಸನ್ನು ಜೀವಂತವಾಗಿ ಹೂತುಹಾಕಿದ ಪಾಪಿ ತಂದೆ!

ಹಣ ಇಲ್ಲದ ಕಾರಣ ಚಿಕಿತ್ಸೆ ಕೊಡಿಸಲು ಅಸಾಧ್ಯ ಎಂಬ ಕಾರಣಕ್ಕೆ 15 ದಿನದ ಹಸುಗೂಸನ್ನು ತಂದೆಯೊಬ್ಬ ಜೀವಂತವಾಗಿ ಹೂತು ಹಾಕಿ ಕೊಂಡ ಆಘಾತಕಾರಿ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ತರುಶಾಹ್ ಎಂಬಲ್ಲಿ ಈ ಘಟನೆ ನಡೆದಿದ್ದು, ತಂದೆ ತಯಾಬ್ ನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಮಗುವನ್ನು ಕೊಂದಿರುವುದನ್ನು ಒಪ್ಪಿಕೊಂಡಿದ್ದಾನೆ.

ಹುಟ್ಟುವಾಗಲೇ ಅನಾರೋಗ್ಯಕ್ಕೆ ಒಳಗಾಗಿದ್ದ ಮಗುವಿಗೆ ಚಿಕಿತ್ಸೆ ಕೊಡಿಸಲು ಹಣ ಇಲ್ಲದ ಕಾರಣ ಮಗುವನ್ನು ಕೊಂದು ಕೈಯ್ಯಾರೆ ಹೂತು ಹಾಕಿದ್ದಾಗಿ ತಯಾಬ್ ವಿಚಾರಣೆ ವೇಳೆ ಬಹಿಂರಪಡಿಸಿದ್ದಾನೆ.

ಪೊಲೀಸರು ತಯಾಬ್ ವಿರುದ್ಧ ಪ್ರಕರಣದ ದಾಖಲಿಸಿಕೊಂಡಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಅಲ್ಲದೇ ಮಗುವಿನ ಅನಾರೋಗ್ಯದ ಸಮಸ್ಯೆ ತಿಳಿಯಲು ಮಗುವಿನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಪೊಲೀಸರು ತೀರ್ಮಾನಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments