Wednesday, July 3, 2024
Google search engine
Homeಕ್ರೀಡೆEuro cup: ಲುಕಾಕೊ 2 ಗೋಲು ರದ್ದು: ಬೆಲ್ಜಿಯಂಗೆ ಆಘಾತ ನೀಡಿದ ಸ್ಲೊವಾಕಿಯಾ!

Euro cup: ಲುಕಾಕೊ 2 ಗೋಲು ರದ್ದು: ಬೆಲ್ಜಿಯಂಗೆ ಆಘಾತ ನೀಡಿದ ಸ್ಲೊವಾಕಿಯಾ!

ಸ್ಟಾರ್ ಆಟಗಾರ ರೊಮೆಲೂ ಲುಕಾಕೊ ಸಿಡಿಸಿದ ಎರಡು ಗೋಲುಗಳು ರದ್ದುಗೊಂಡಿದ್ದರಿಂದ ಬೆಲ್ಜಿಯಂ ತಂಡ ಏಕೈಕ ಗೋಲಿನಿಂದ ಸ್ಪೊವಾಕಿಯಾ ವಿರುದ್ಧ ಆಘಾತ ಅನುಭವಿಸಿತು. ಈ ಮೂಲಕ ಯುರೋ ಕಪ್ ಟೂರ್ನಿಯಲ್ಲಿ ಅಚ್ಚರಿ ಫಲಿತಾಂಶ ಬಿದ್ದಿದೆ.

ಬ್ರೆಜಿಲ್ ನ ಫ್ರಂಕ್ ಫುಟ್ ನಲ್ಲಿ ಮಂಗಳವಾರ ನಡೆದ ಇ ಗುಂಪಿನ ಪಂದ್ಯದಲ್ಲಿ ಸ್ಲೊವಾಕಿಯಾ ತಂಡ 7ನೇ ನಿಮಿಷದಲ್ಲಿ ವಿಂಗರ್ ಶ್ಕಾರ್ಜನಾಜ್ ಗಳಿಸಿದ ಏಕೈಕ ಗೋಲಿನಿಂದ ಬೆಲ್ಜಿಯಂ ತಂಡವನ್ನು ಮಣಿಸಿತು.

ಪಂದ್ಯದ 56ನೇ ನಿಮಿಷದಲ್ಲಿ ಲುಕಾಕೊ ಗೋಲುಗಳಿಸುವ ಅವಕಾಶ ಪಡೆದು ಅದರಲ್ಲಿ ಯಶಸ್ವಿಯಾದರೂ ರೆಫರಿ ಆಫ್ ಸೈಡ್ ಎಂದು ಘೋಷಿಸುವ ಮೂಲಕ ಗೋಲು ನಿರಾಕರಿಸಿದರು. ನಂತರ 86ನೇ ನಿಮಿಷದಲ್ಲಿ ಏಕಾಂಗಿಯಾಗಿ ಗೋಲು ಪೆಟ್ಟಿಗೆಯೊಳಗೆ ಚೆಂಡು ಹಾಕಿದರೂ ತಪ್ಪು ಮರುಕಳಿಸಿದ್ದರಿಂದ ಮತ್ತೊಮ್ಮೆ ಗೋಲು ನಿರಾಕರಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments