Kannadavahini

ಬಾರಿಸು ಕನ್ನಡ ಡಿಂಡಿಮವ

ಕ್ರೀಡೆ ತಾಜಾ ಸುದ್ದಿ

ಭಾರತ ಫುಟ್ಬಾಲ್ ತಂಡದ ಕೋಚ್ ಸ್ಥಾನದಿಂದ ಇಗೋರ್ ಸ್ಟಿಮ್ಯಾಕ್ ವಜಾ

ಭಾರತ ಫುಟ್ಬಾಲ್ ತಂಡದ ಕೋಚ್ ಸ್ಥಾನದಿಂದ ಇಗೋರ್ ಸ್ಟಿಮ್ಯಾಕ್ ಅವರನ್ನು ವಜಾಗೊಳಿಸಲು ಅಖಿಲ ಭಾರತ ಫುಟ್ಬಾಲ್ ಸಂಸ್ಥೆ ನಿರ್ಧರಿಸಿದೆ.

ಕತಾರ್ ವಿರುದ್ಧ ಭಾರತ ಆಡಿದ ಕೊನೆಯ ಪಂದ್ಯದಲ್ಲಿ 2-1ರಿಂದ ಜಯ ಸಾಧಿಸಿದರೂ ಫಿಫಾ ವಿಶ್ವಕಪ್-2026 ಟೂರ್ನಿಯ 3ನೇ ಹಂತದ ಅರ್ಹತಾ ಸುತ್ತಿಗೆ ಅರ್ಹತೆ ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಎಐಎಫ್ ಎಫ್ ಈ ನಿರ್ಧಾರ ಕೈಗೊಂಡಿದೆ.

ಭಾರತ ತಂಡ ಕೊನೆಯ ಪಂದ್ಯದಲ್ಲಿ ಜಯ ಸಾಧಿಸಿದರೂ ಗುಂಪಿನಲ್ಲಿ ಕುವೈತ್ ಮತ್ತು ಆಫ್ಘಾನಿಸ್ತಾನ ನಂತರದ ಮೂರನೇ ಸ್ಥಾನಕ್ಕೆ ಕುಸಿದು ಫಿಫಾ ವಿಶ್ವಕಪ್ ಟೂರ್ನಿಯ 3ನೇ ಅರ್ಹತಾ ಸುತ್ತಿಗೆ ಅರ್ಹತೆ ಪಡೆಯಲು ವಿಫಲವಾಗಿತ್ತು.

ಭಾರತ ತಂಡದ ನಾಯಕ ಸುನೀಲ್ ಛೆಟ್ರಿ ಫುಟ್ಬಾಲ್ ಗೆ ನಿವೃತ್ತಿ ಹೇಳಿದ ಕೆಲವೇ ದಿನಗಳಲ್ಲಿ ಕೋಚ್ ಸ್ಥಾನದಿಂದ ಸ್ಟಿಮ್ಯಾಕ್ ಅವರನ್ನು ವಜಾಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ.

LEAVE A RESPONSE

Your email address will not be published. Required fields are marked *