Sunday, May 31, 2026
Google search engine
Homeರಾಜಕೀಯಡಿಸಿಎಂ ಸ್ಥಾನಕ್ಕೆ ಬೇಡಿಕೆ ಬಂದಿಲ್ಲ: ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ

ಡಿಸಿಎಂ ಸ್ಥಾನಕ್ಕೆ ಬೇಡಿಕೆ ಬಂದಿಲ್ಲ: ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ

ಕಲಬುರಗಿ: ಡಿಸಿಎಂ ಸ್ಥಾನದ ಪ್ರಪೋಸಲ್ ಇನ್ನೂ ಬಂದಿಲ್ಲ ಬಂದ ಮೇಲೆ ಎಷ್ಟು ಜನರನ್ನು ಡಿಸಿಎಂ ಮಾಡಬೇಕು ಎನ್ನೋದನ್ನು ನೋಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಲಬುರಗಿ ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಷ್ಟು ಜನ ಸಚಿವರನ್ನಾಗಿ ಮಾಡಬೇಕು ಅಂತನೂ ಪ್ರಪೋಜಲ್ ಬಂದಿಲ್ಲ.ಮೊದಲು ಒಂದು ಹಂತದಲ್ಲಿ ಸಚಿವರನ್ನ ಮಾಡಿ, ಆ ಮೇಲೆ ಹದಿನೈದು ದಿನದ ನಂತರ ಮತ್ತೊಂದು ಸುತ್ತಿನಲ್ಲಿ ಸಚಿವ ಸ್ಥಾನ ಮಾಡಿ ಎಂದು ಹೇಳಿದ್ದೇವೆ. ಆದರೆ, ಸಿಎಂ ಅವರು ಏನ್ ಮಾಡ್ತಾರೆ ಗೊತ್ತಿಲ್ಲ ಎಂದರು.

ಮೊದಲ ಹಂತದಲ್ಲಿ 8 ರಿಂದ 10 ಜನ ಸಚಿವರು ಆಗ್ತಾರೆನೋ ನೋಡಬೇಕು. ಸಿಎಂ ಅವರು ಸಚಿವರ ಲಿಸ್ಟ್ ಕೊಡಲಿ ಎಷ್ಟು ಜನರನ್ನು ಸೇರಿಸಿಕೊಳ್ಳುತ್ತಾರೆ ಎಂದು ಗೋತ್ತಾಗುತ್ತೆ. ಜೂನ್ 3 ರಂದು ಸಭೆ ಮಾಡಿ ಎಲ್ಲಾ ಪೈನಲ್ ಆಗುತ್ತದೆ ಎಂದು ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಖರ್ಗೆ ಅವರು, ಡಿ.ಕೆ.ಶಿವಕುಮಾರ ಅವರು ಸಿಎಂ ಆದ ಮೇಲೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಹಜವಾಗಿ ಬದಲಾವಣೆ ಆಗೇ ಆಗುತ್ತದೆ. ಜನ ಬೆಂಬಲ ಇರುವ ಸೂಕ್ತ ವ್ಯಕ್ತಿಯನ್ನ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುತ್ತೇವೆ. ಸಿಎಂ ಅವರಿಗೂ ಒಳ್ಳೆಯ ಕೋ-ಆರ್ಡಿನಿಷನ್ ಇರಬೇಕು. ಅಂತಹ ವ್ಯಕ್ತಿಯನ್ನ. ಸರ್ಚ್ ಮಾಡುತ್ತಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments