Monday, October 26, 2026
Google search engine
Homeರಾಜಕೀಯಕಾಂಗ್ರೆಸ್ನಲ್ಲಿ ಸ್ಲೀಪರ್ ಸೆಲ್ಗಳಿಲ್ಲ, ಬಿಜೆಪಿಯಲ್ಲೇ ಇವೆ: ಬಿಕೆ ಹರಿಪ್ರಸಾದ್

ಕಾಂಗ್ರೆಸ್ನಲ್ಲಿ ಸ್ಲೀಪರ್ ಸೆಲ್ಗಳಿಲ್ಲ, ಬಿಜೆಪಿಯಲ್ಲೇ ಇವೆ: ಬಿಕೆ ಹರಿಪ್ರಸಾದ್

ಶಿವಮೊಗ್ಗ: ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ‘ಸ್ಲೀಪರ್ ಸೆಲ್’ಗಳಿಲ್ಲ, ಅಂತಹ ಸಂಸ್ಕೃತಿ ಇರುವುದೇ ಬಿಜೆಪಿ ಪಕ್ಷದಲ್ಲಿ ಎಂದು ಕೆಪಿಸಿಸಿ ಪ್ರಮುಖ ಮುಖಂಡ ಬಿ.ಕೆ. ಹರಿಪ್ರಸಾದ್ ತೀವ್ರವಾಗಿ ತಿರುಗೇಟು ನೀಡಿದ್ದಾರೆ.

​ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಎಲ್ಲಾ ಆರೋಪಗಳು ಸುಳ್ಳು ಎಂದರು. ಇವು ಕೇವಲ ರಾಜಕೀಯ ಬ್ಲ್ಯಾಕ್‌ಮೇಲ್ ತಂತ್ರಗಳಾಗಿದ್ದು, ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಲು ವಿರೋಧ ಪಕ್ಷಗಳು ಹೆಣೆದಿರುವ ಸಂಚಷ್ಟೇ ಹೊರತು ಬೇರೊಂದಲ್ಲ ಎಂದು ಹರಿಪ್ರಸಾದ್ ಕಿಡಿಕಾರಿದರು. ದೇಶದಲ್ಲಿ ಮೊದಲ ಸ್ಟಿಂಗ್ ಆಪರೇಷನ್‌ನ ಪಿತಾಮಹ ಆರ್‌ಎಸ್‌ಎಸ್‌ನ ಸಂಜಯ್ ಜೋಶಿ ಪ್ರಕರಣ ಎಂದು ಹೇಳಿದ ಅವರು, ಈ ರೀತಿಯ ರಾಜಕೀಯ ತಂತ್ರಗಾರಿಕೆ ಬಿಜೆಪಿಯವರೇ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

​ಪಕ್ಷದಲ್ಲಿ ತಪ್ಪು ಮಾಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಅವರು, ಸಾಕ್ಷಿ ಸಮೇತ ಸೂಕ್ತ ಪುರಾವೆಗಳು ಸಿಕ್ಕರೆ ಎಷ್ಟೇ ದೊಡ್ಡ ನಾಯಕರಾಗಿದ್ದರೂ ಪಕ್ಷದಿಂದ ಕ್ರಮ ಕೈಗೊಳ್ಳುವುದು ಗ್ಯಾರಂಟಿ. ಈ ಕುರಿತು ಈಗಾಗಲೇ ಶೋಕಾಸ್ ನೋಟೀಸ್ ನೀಡಲು ಪತ್ರ ಬರೆಯಲಾಗಿದೆ ಎಂದರು.

​ಇದೇ ವೇಳೆ ನಾಥೂರಾಮ್ ಗೋಡ್ಸೆ ವಿಚಾರವಾಗಿ ಮಾತನಾಡಿದ ಅವರು, ಮಹಾತ್ಮ ಗಾಂಧಿಯವರನ್ನು ಕೊಂದವರೇ ಈ ದೇಶದ ಮೊದಲ ಭಯೋತ್ಪಾದಕ. ಬಿಜೆಪಿ ನಾಯಕರಿಗೆ ನಿಜವಾದ ದೇಶಭಕ್ತಿಯಿದ್ದರೆ ಗೋಡ್ಸೆಯನ್ನು ‘ದೇಶದ ಮೊಟ್ಟಮೊದಲ ಉಗ್ರ’ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಲಿ ಎಂದು ಬಹಿರಂಗ ಸವಾಲು ಹಾಕಿದರು. ಗಾಂಧೀಜಿಯವರ ತ್ಯಾಗ ಮತ್ತು ತತ್ತ್ವಗಳನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಅವರ ವಿಚಾರಗಳನ್ನು ಜನರಿಗೆ ತಲುಪಿಸಲು ದೇಶಾದ್ಯಂತ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹರಿಪ್ರಸಾದ್ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments