ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ತಂಡದಿಂದ ಹೊರಗೆ ಹಾಕಲು ನಿರ್ಧಾರವಾಗಿರುವ ಹಿನ್ನೆಲೆಯಲ್ಲಿ ಅವರನ್ನು ತಂಡಕ್ಕೆ ಸೆಳೆದುಕೊಂಡು ಅದಕ್ಕೆ ಬದಲಿಯಾಗಿ ಇಬ್ಬರು ಆಟಗಾರರನ್ನು ಬಿಟ್ಟುಕೊಡಲು ಚೆನ್ನೈ ಸೂಪರ್ ಕಿಂಗ್ಸ್ ಚಿಂತನೆ ನಡೆಸಿದೆ.
ಆಟಗಾರರ ಬದಲು ಮಾಡಿಕೊಳ್ಳುವ ಅವಕಾಶ ಟೂರ್ನಿ ಮುಗಿಯುತ್ತಿದ್ದಂತೆ ಸಿಗಲಿದೆ. ಈ ವೇಳೆ ತಂಡಕ್ಕೆ ಅಗತ್ಯವಾದ ಸೂಕ್ತ ನಾಯಕನಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾರ್ದಿಕ್ ಪಾಂಡ್ಯ ಅವರನ್ನು ಸೆಳೆಯಲು ಮುಂದಾಗಿದೆ.
ಆಟಗಾರರ ಬದಲು ವೇಳೆ ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಸೆಳೆದುಕೊಂಡು ಅವರ ಬದಲಿಗೆ ಶಿವಂ ದುಬೆ ಅಥವಾ ಆಯುಷ್ ಮಾತ್ರೆ ಅವರನ್ನು ಬಿಟ್ಟುಕೊಡಲು ಚೆನ್ನೈ ಸೂಪರ್ ಕಿಂಗ್ಸ್ ಆಡಳಿತ ಮಂಡಳಿ ಚಿಂತನೆ ನಡೆಸಿದೆ.
ಈ ಬಾರಿ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳೆರಡೂ ಕಳಪೆ ಪ್ರದರ್ಶನ ನೀಡಿವೆ. ಎರಡೂ ತಂಡಗಳು ಪ್ಲೇಆಫ್ ಪ್ರವೇಶಿಸಲು ಸಾಧ್ಯವಾಗಿಲ್ಲ.
ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಗೊಂಡ ನಂತರ ಒಂದೂ ಬಾರಿಯೂ ಪ್ಲೇಆಫ್ ಗೆ ತಂಡ ಪ್ರವೇಶಿಸಲಿಲ್ಲ. ಅಲ್ಲದೇ ತಂಡದಲ್ಲಿ ಆಟಗಾರರ ನಡುವೆ ಅಸಮಾಧಾನಕ್ಕೆ ಅವರು ಕಾರಣರಾಗಿದ್ದಾರೆ. ತಂಡದ ಹಿತಾಸಕ್ತಿಗಿಂತ ಅವರ ವೈಯಕ್ತಿಕ ಪ್ರತಿಷ್ಠೆ ತಂಡದ ಯಶಸ್ಸಿಗೆ ಕಾರಣವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.



