ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ ಸೋಡಿಯಂ ಮಿಶ್ರಿತ ಉಪ್ಪು ಬಳಸುವುದರಿಂದ ಭಾರತದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಮತ್ತು ಕಿಡ್ನಿ ವೈಫಲ್ಯದಂತಹ ಸಮಸ್ಯೆಗಳನ್ನು ನಿಯಂತ್ರಿಸಬಹುದು ಎಂದು ಸಮೀಕ್ಷೆ ವರದಿ ಹೇಳಿದೆ.
ಸಮೀಕ್ಷೆ ಪ್ರಕಾರ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ ಸೋಡಿಯಂ ಉಪ್ಪು ಬಳಕೆಯ ಕುರಿತು 10 ವರ್ಷಗಳ ಕಾಲ ನಡೆಸಿದ ಅಧ್ಯಯನದಲ್ಲಿ ಹೃದಯ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 3 ಲಕ್ಷಕ್ಕೂ ಅಧಿಕ ಜನರು ಸಾವಿನ ದವಡೆಯಿಂದ ಪಾರಾಗಿದ್ದಾರೆ.
ಅತ್ಯಧಿಕ ಪ್ರಮಾಣದ ಸೋಡಿಯಂ ಅಂಶ ಇರುವ ಉಪ್ಪು ಬಳಕೆಯಿಂದ ಪ್ರಮುಖ ಆರೋಗ್ಯ ಸಮಸ್ಯೆ ನಿಯಂತ್ರಿಸಬಹುದು. ಆದರೆ ಶ್ರೀಮಂತ ರಾಷ್ಟ್ರಗಳಲ್ಲಿ ಪ್ಯಾಕೆಜ್ ಫುಡ್ ಬಳಕೆ ಪ್ರಮಾಣ ಹೆಚ್ಚಾಗಿದೆ. ಈ ರೀತಿ ಪ್ಯಾಕೇಜ್ ಆಹಾರದಲ್ಲಿ ಸೋಡಿಯಂ ಮಿಶ್ರಿತ ಉಪ್ಪು ಬಳಕೆ ಪ್ರಮಾಣ ಕಡಿಮೆ ಇರುತ್ತದೆ ಎಂದು ಲ್ಯಾನ್ಸೆಟ್ ಸಂಸ್ಥೆ ಸಮೀಕ್ಷಾ ವರದಿ ಹೇಳಿದೆ.
ಹೈದರಾಬಾದ್ ನಲ್ಲಿರುವ ಜಾರ್ಜಿಯಾ ಮೂಲದ ಗ್ಲೋಬಲ್ ಹೆಲ್ತ್ ಸಂಸ್ಥೆ ದೇಶದಲ್ಲಿ ಸೋಡಿಯಂ ಬಳಕೆ ಕುರಿತು ನಿರ್ದಿಷ್ಟ ನಿಯಮಗಳಿಲ್ಲ. ಆದ್ದರಿಂದ ಶಿಫಾರಸು ಮಾಡಲಾಗದ, ಎರಡನೇ ದರ್ಜೆಯ ಉಪ್ಪು ಹಾಗೂ ಆಹಾರ ಪೊಟ್ಟಣಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ಹೇಳಿದೆ.
ಭಾರತದಲ್ಲಿ ಸಾಮಾನ್ಯವಾಗಿ ಮನುಷ್ಯ ಪ್ರತಿದಿನ 2 ಗ್ರಾಂ ಸೋಡಿಯಂ ಬಳಸಬೇಕು. ಆದರೆ ಟೀ ಸ್ಪೂನ್ ಗಿಂತ ಕಡಿಮೆ ಅಥವಾ 5 ಗ್ರಾಂನಷ್ಟು ಉಪ್ಪು ಬಳಸಲಾಗುತ್ತಿದೆ.
ಲ್ಯಾನ್ಸೆಟ್ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಕಳೆದ 10 ವರ್ಷಗಳ ಕಾಲ ನಡೆಸಿದ ಅಧ್ಯಯನದಲ್ಲಿ ಹೃದಯಾಘಾತ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ 3 ಲಕ್ಷಕ್ಕೂ ಹೆಚ್ಚು ಜನರು ಸೋಡಿಯಂ ಮಿಶ್ರಿತ ಉಪ್ಪು ಬಳಕೆಯಿಂದ ಗುಣಮುಖರಾಗಿದ್ದಾರೆ. ಇದರಿಂದ 800 ದಶಲಕ್ಷ ಡಾಲರ್ ನಷ್ಟು ಹಣ ಉಳಿತಾಯವಾಗಿದೆ ಎಂದು ಹೇಳಿದೆ.