Saturday, July 6, 2024
Google search engine
Homeತಾಜಾ ಸುದ್ದಿ1178 ಅಡಿ ಎತ್ತರದ ವಿಶ್ವದ ಅತೀ ಎತ್ತರದ ರೈಲ್ವೆ ಸೇತುವೆ ಮೇಲೆ ಯಶಸ್ವಿ ಪರೀಕ್ಷಾರ್ಥ ಸಂಚಾರ!

1178 ಅಡಿ ಎತ್ತರದ ವಿಶ್ವದ ಅತೀ ಎತ್ತರದ ರೈಲ್ವೆ ಸೇತುವೆ ಮೇಲೆ ಯಶಸ್ವಿ ಪರೀಕ್ಷಾರ್ಥ ಸಂಚಾರ!

ಜಮ್ಮು ಕಾಶ್ಮೀರದಲ್ಲಿ ಚೆನಾಬ್ ನದಿಯ ಮೇಲೆ ನಿರ್ಮಿಸಲಾದ ವಿಶ್ವದ ಅತೀ ಎತ್ತರದ ಸೇತುವೆ ಮೇಲೆ ರೈಲು ಯಶಸ್ವಿಯಾಗಿ ಸಂಚರಿಸುವ ಮೂಲಕ ಮೈಲುಗಲ್ಲು ನಿರ್ಮಿಸಿದೆ.

ಗುರುವಾರ ಪರೀಕ್ಷಾರ್ಥ ರೈಲು ಸಂಚಾರ ಮಾಡಲಾಗಿದ್ದು, ಬಕಾಲ್ ಮತ್ತು ಕೌರಿ ಜಿಲ್ಲೆಗಳ ನಡುವೆ ರೈಲು ಸಂಚರಿಸಲಿದೆ. ಇದರಿಂದ ಕಣಿವೆ ರಾಜ್ಯದಲ್ಲಿ ನೇರ ಸಂಪರ್ಕಕ್ಕೆ ಅನುಕೂಲವಾಗಲಿದೆ.

ಪರೀಕ್ಷಾರ್ಥ ಸಂಚಾರ ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಶೀಘ್ರದಲ್ಲೇ ಅಧಿಕೃತವಾಗಿ ರೈಲು ಸಂಚಾರ ಆರಂಭಿಸುವ ಬಗ್ಗೆ ಘೋಷಣೆ ಮಾಡಲಿದೆ.

ಈ ರೈಲು ಯೋಜನೆಗೆ 2003ರಲ್ಲಿ ಪ್ರಸ್ತಾಪ ಮಾಡಲಾಗಿದ್ದು, 2008ರಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಏಕ ಕಂಬದ ಈ ಸೇತುವೆ ನಿರ್ಮಾಣದ ಬಗ್ಗೆ ಆತಂಕ ಹಾಗೂ ಅನುಮಾನಗಳು ವ್ಯಕ್ತವಾಗಿತ್ತು. ಆದರೆ ಪರೀಕ್ಷಾರ್ಥ ಸಂಚಾರ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿದೆ.

ನೆಲದಿಂದ 1178 ಅಡಿ ಎತ್ತರದಲ್ಲಿ ಈ ಸೇತುವೆ ನಿರ್ಮಾಣವಾಗಿದ್ದು, ಜಗತ್ತಿನ ಅತ್ಯಂತ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪ್ಯಾರಿಸ್ ಇಫೆಲ್ ಟವರ್ ಗಿಂತ ಈ ಸೇತುವೆ 38 ಅಡಿ ಎತ್ತರ ಹೊಂದಿದೆ.

ಉದಯ್ ಪುರ್-ಶ್ರೀನಗರ ನಡುವಿನ ರೈಲು ಯೋಜನೆಗೆ ಒಟ್ಟಾರೆ 35 ಸಾವಿರ ಕೋಟಿ ರೂ. ವೆಚ್ಚವಾಗಿದ್ದು, ಈ ಸೇತುವೆ ನಿರ್ಮಾಣಕ್ಕಾಗಿ 14 ಸಾವಿರ ಕೋಟಿ ರೂ. ವಿನಿಯೋಗಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments