Friday, September 20, 2024
Google search engine
Homeತಾಜಾ ಸುದ್ದಿರಾಹುಲ್ ವಿರುದ್ಧ ದೂರು, ಮೋದಿ ವಿರುದ್ಧ ಪ್ರತಿದೂರು: ಲೋಕಸಭೆಯಲ್ಲಿ ತಾರಕಕ್ಕೇರಿದ ಸಮರ!

ರಾಹುಲ್ ವಿರುದ್ಧ ದೂರು, ಮೋದಿ ವಿರುದ್ಧ ಪ್ರತಿದೂರು: ಲೋಕಸಭೆಯಲ್ಲಿ ತಾರಕಕ್ಕೇರಿದ ಸಮರ!

ಸ್ಪಷ್ಟ ಉತ್ತರಕ್ಕಾಗಿ ಸ್ಪೀಕರ್ ಓಂಪ್ರಕಾಶ್ ಬಿರ್ಲಾಗೆ ದೂರು-ಪ್ರತಿದೂರು ನೀಡುವ ಮೂಲಕ ಲೋಕಸಭೆಯಲ್ಲಿ ಆಡಳಿತಾರೂಢ ಎನ್ ಡಿಎ ಹಾಗೂ ಇಂಡಿಯಾ ಮೈತ್ರಿಕೂಟದ ಪ್ರತಿಪಕ್ಷಗಳ ನಡುವೆ ಸಮರ ತಾರಕಕ್ಕೇರಿದೆ.

ಲೋಕಸಭೆಗೆ ತಪ್ಪಾದ ಮಾಹಿತಿ ನೀಡುತ್ತಿರುವ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕಲಾಪದ ದಿಕ್ಕು ತಪ್ಪಿಸುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊ‍ಳ್ಳಬೇಕು ಎಂದು ಆಡಳಿತಾರೂಢ ಬಿಜೆಪಿ ಸಂಸದರು ಸ್ಪೀಕರ್ ಗೆ ದೂರು ನೀಡಿದ್ದಾರೆ.

ಇದರ ಬೆನ್ನಲ್ಲೇ ಪ್ರತಿಪಕ್ಷಗಳು ಕೂಡ ಪ್ರಧಾನಿ ಮೋದಿ ವಿರುದ್ಧ ಸ್ಪೀಕರ್ ಗೆ ದೂರು ನೀಡಿದ್ದು, ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಮೋದಿ ಭಾಷಣದಲ್ಲಿ ಅಂಕಿ-ಅಂಶ ಆಧಾರಿತ ಸರಿಯಾದ ಮಾಹಿತಿ ನೀಡದೇ ಸದನದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದೆ.

ಪ್ರಧಾನಿ ಮೋದಿ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದು ಕೋಟ್ಯಾಧಿಪತಿಗಳಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಇದಕ್ಕೆ ಸೂಕ್ತ ದಾಖಲೆಗಳನ್ನೇ ನೀಡಿಲ್ಲ ಎಂದು ಆರೋಪಿಸಿದೆ.

ಪ್ರತಿಪಕ್ಷಗಳು ಮೋದಿ ವಿರುದ್ಧ ಮಾತ್ರವಲ್ಲದೇ ಬಿಜೆಪಿಯ ಹಮಿರ್ಪುರ್ ಸಂಸದ ಹಾಗೂ ಮಾಜಿ ಸಚಿವ ಅನುರಾಗ್ ಥಾಕೂರ್ ವಿರುದ್ಧವೂ ದೂರು ನೀಡಿದೆ.

ಇದಕ್ಕೂ ಮುನ್ನ ಬಿಜೆಪಿ ಸಂಸದೆ ಬನ್ಸೂರಿ ಸ್ವರಾಜ್ ಮತ್ತು ಸಚಿವ ಕಿರಣ್ ರಿಜಿಜು ಸ್ಪೀಕರ್ ಗೆ ದೂರು ನೀಡಿದ್ದು,  ರಾಹುಲ್ ಗಾಂಧಿ ತಪ್ಪು ಮಾಹಿತಿಗಳನ್ನು ನೀಡುವ ಮೂಲಕ ಕಲಾಪದ ದಿಕ್ಕು ತಪ್ಪಿಸುತ್ತಿದ್ದಾರೆ. ಆದ್ದರಿಂದ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ರಾಹುಲ್ ಗಾಂಧಿ ತಮ್ಮ ಭಾಷಣದ ವೇಳೆ ಅಗ್ನಿವೀರ್ ಯೋಜನೆಯ ಹುತಾತ್ಮ ಯೋಧನಿಗೆ ಪರಿಹಾರ ನೀಡದೇ ಸದನಕ್ಕೆ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಆರೋಪಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments