Wednesday, October 30, 2024
Google search engine
Homeಕ್ರೀಡೆಅಪಘಾತದಲ್ಲಿ ಪಾರಾದ ಭಾರತ ಪ್ಯಾರಿಸ್ ಒಲಿಂಪಿಕ್ಸ್ ಆಟಗಾರ್ತಿ, ತಾಯಿ ಆಸ್ಪತ್ರೆಗೆ ದಾಖಲು!

ಅಪಘಾತದಲ್ಲಿ ಪಾರಾದ ಭಾರತ ಪ್ಯಾರಿಸ್ ಒಲಿಂಪಿಕ್ಸ್ ಆಟಗಾರ್ತಿ, ತಾಯಿ ಆಸ್ಪತ್ರೆಗೆ ದಾಖಲು!

ಒಲಿಂಪಿಕ್ಸ್ 2024ರಲ್ಲಿ ಪಾಲ್ಗೊಂಡಿರುವ ಭಾರತ ಗಾಲ್ಫ್ ಆಟಗಾರ್ತಿ ದೀಕ್ಷಾ ದಾಗರ್ ಪ್ಯಾರಿಸ್ ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಪಾರಾಗಿದ್ದು, ಗಾಯಗೊಂಡಿರುವ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾರತದ ಸ್ಟಾರ್ ಗಾಲ್ಫಪಟು ಆಗಿರುವ ದೀಕ್ಷಾ ದಾಗರ್, ತಂದೆ ಕ್ಯಾಡಿ ಕರ್ನಲ್ ನರೇನ್ ದಾಗರ್ ತಾಯಿ ಹಾಗೂ ಸೋದರ ಮಂಗಳವಾರ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.

ದೀಕ್ಷಾ ದಾಗರ್ ಅಪಘಾತದಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಪಾರಾಗಿದ್ದು, ಆಗಸ್ಟ್ 7ರಂದು ನಡೆಯಲಿರುವ ಸ್ಪರ್ಧೆಯಲ್ಲಿ ಪಾಲ್ಗೊಳ್ಲಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ದೀಕ್ಷಾ ದಾಗರ್ ತಾಯಿಗೆ ಅಪಘಾತದಲ್ಲಿ ಬೆನ್ನು ನೋವಿಗೆ ಒಳಗಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ತಪಾಸಣೆ ಮುಂದುವರಿದಿದ್ದು, ಕೆಲವು ದಿನಗಳ ಚಿಕಿತ್ಸೆ ನಂತರ ಚೇತರಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments