ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮನೆಯಲ್ಲಿ ಆಚರಿಸಲಾದ ಗಣೇಶೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದು ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ನಿವಾಸದಲ್ಲಿ ಆಚರಿಸಲಾದ ಗಣೇಶೋತ್ಸವಕ್ಕೆ ಪಾಲ್ಗೊಂಡಿದ್ದಾಗಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಚಂದ್ರಚೂಡ್ ನಿವಾಸದಲ್ಲಿ ಪ್ರಧಾನಿ ಮೋದಿ ಗಣೇಶೋತ್ಸವದಲ್ಲಿ ಪಾಲ್ಗೊಂಡಿರುವುದು ಪ್ರತಿಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ಇದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುವ ಸಾಧ್ಯತೆ ಇದೆ ಎಂದರು.
ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಪಾಲ್ಗೊಂಡಿದ್ದು ಅಪರಾಧವೇನಲ್ಲ. ರಾಜಕಾರಣಿಗಳು ನ್ಯಾಯಾಧೀಶರ ಜೊತೆ ಹಲವಾರು ಬಾರಿ ವೇದಿಕೆ ಹಂಚಿಕೊಂಡಿದ್ದಾರೆ. ಇದು ಹೊಸದೇನಲ್ಲ ಎಂದು ಹೇಳಿದೆ.
https://twitter.com/narendramodi/status/1833908774051926135
ಮಂಗಳವಾರ ದೆಹಲಿಯಲ್ಲಿರುವ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನಿವಾಸಕ್ಕೆ ಪ್ರಧಾನಿ ಭೇಟಿ ನೀಡಿದ್ದು, ಪ್ರಧಾನಿ ಅವರನ್ನು ಚಂದ್ರಚೂಡ್ ಮತ್ತು ಪತ್ನಿ ಕಲ್ಪನಾ ದಾಸ್ ಸ್ವಾಗತಿಸಿದ್ದರು.
ಶಿವಸೇನಾ ಮುಖ್ಯಸ್ಥ ಸಂಜಯ್ ರಾವತ್ ಪ್ರಧಾನಿ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ದೆಹಲಿಯಲ್ಲಿ ಎಲ್ಲೆಡೆ ಗಣೇಶೋತ್ಸವ ಸಮಾರಂಭ ಆಚರಿಸಲಾಗಿದೆ. ಎಷ್ಟು ಮನೆಗೆ ಮೋದಿ ಭೇಟಿ ನೀಡಿದ್ದಾರೆ? ಆದರೆ ಸಿಜೆಇ ಮನೆಗೆ ಭೇಟಿ ನೀಡಿದ್ದು ಮಾತ್ರ ಗೊತ್ತಾಗುತ್ತಿದೆ ಎಂದು ಅವರು ಹೇಳಿದರು.
https://twitter.com/ANI/status/1834087665731240336