Kannadavahini

ಬಾರಿಸು ಕನ್ನಡ ಡಿಂಡಿಮವ

ಕ್ರೀಡೆ ತಾಜಾ ಸುದ್ದಿ

ಒಲಿಂಪಿಕ್ಸ್ ನಲ್ಲಿ ಬೋಪಣ್ಣ-ಬಾಲಾಜಿ ಜೋಡಿ ಸ್ಪರ್ಧೆ: ಎಐಟಿಎ ಘೋಷಣೆ

ಸ್ಟಾರ್ ಆಟಗಾರ ರೋಹನ್ ಬೋಪಣ್ಣ ಮತ್ತು ಶ್ರೀರಾಮ್ ಬಾಲಾಜಿ ಪ್ಯಾರಿಸ್ ಒಲಿಂಪಿಕ್ಸ್ ಡಬಲ್ಸ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಕರ್ನಾಟಕದ ರೋಹನ್ ಬೋಪಣ್ಣ ವಿಶ್ವದ ಡಬಲ್ಸ್ ರ್ಯಾಂಕಿಂಗ್ ನಲ್ಲಿ 4ನೇ ಸ್ಥಾನದಲ್ಲಿದ್ದರೆ, ಶ್ರೀರಾಮ್ ಬಾಲಾಜಿ 67ನೇ ಸ್ಥಾನದಲ್ಲಿದ್ದಾರೆ.

ಅಖಿಲ ಭಾರತ ಟೆನಿಸ್ ಸಂಸ್ಥೆ ಗುರುವಾರ ಭಾರತ ತಂಡವನ್ನು ಪ್ರಕಟಿಸಿದ್ದು, ಡಬಲ್ಸ್ ನಲ್ಲಿ ರೋಹನ್ ಬೋಪಣ್ಣ ಜೊತೆಗೂಡಿ ಶ್ರೀರಾಮ್ ಬಾಲಾಜಿ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದೆ.

ಕೋಚ್ ಆಗಿ ಬಾಲಚಂದ್ರನ್ ಮಣಿಕಾಂತ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಒಲಿಂಪಿಕ್ಸ್ ನಲ್ಲಿ ಭಾರತ ಪದಕ ಗೆಲ್ಲುವ ಏಕೈಕ ಭರವಸೆ ಇರುವುದು ಪುರುಷರ ಡಬಲ್ಸ್ ನಲ್ಲಿ ಮಾತ್ರ. ಹಾಗಾಗಿ ಈ ವಿಭಾಗದ ಬಗ್ಗೆ ಹೆಚ್ಚು ಭರವಸೆ ಹೊಂದಲಾಗಿದೆ.

LEAVE A RESPONSE

Your email address will not be published. Required fields are marked *