Wednesday, October 30, 2024
Google search engine
Homeಅಪರಾಧಬೈಕ್ ಕೊಡಿಸಲಿಲ್ಲ ಅಂತ ಮಗ ಆತ್ಮಹತ್ಯೆ, ನೊಂದ ತಾಯಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ!

ಬೈಕ್ ಕೊಡಿಸಲಿಲ್ಲ ಅಂತ ಮಗ ಆತ್ಮಹತ್ಯೆ, ನೊಂದ ತಾಯಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ!

ಬೈಕ್ ಕೊಡಸಲಿಲ್ಲ ಎಂಬ ಕಾರಣಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡರೆ, ಮಗನ ಆತ್ಮಹತ್ಯೆಯಿಂದ ನೊಂದ ತಾಯಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕರೂರು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಧನರಾಜ್ ನಾಯಕ್ (18) ಮತ್ತು ತಾಯಿ ಭಾಗ್ಯಮ್ಮ (40) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.

ಬೈಕ್ ಕೊಡಿಸು ಎಂದು ಮಗ ಧನರಾಜ್ ತಾಯಿಯ ಬಳಿ ಬೇಡಿಕೆ ಇಟ್ಟಿದ್ದಾನೆ. ಬೈಕ್ ಕೊಡಿಸಲು ಸಾಧ್ಯವಿಲ್ಲ ಎಂದ ತಾಯಿ ಮಗನಿಗೆ ಬುದ್ದಿವಾದ ಹೇಳಿದ್ದಾಳೆ.

ತಾಯಿ ಬುದ್ದಿಮಾತಿನಿಂದ ಬೇಸರಗೊಂಡ ಧನರಾಜ್ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನ ಸಾವಿನಿಂದ ವಿಚಲಿತಗೊಂಡ ತಾಯಿ ಭಾಗ್ಯಮ್ಮ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಧನರಾಜ್ ದಾವಣಗೆರೆ ಜಿಲ್ಲೆ ಹರಿಹರದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿ‍ದ್ದು, ಕಾಲೇಜಿಗೆ ಹೋಗಿ ಬರಲು ಬೈಕ್ ಬೇಕು ಎಂದು ಹಠ ಮಾಡಿ ಜಗಳ ಮಾಡಿದ್ದ.

ಕೂಲಿ ಮಾಡಿಕೊಂಡಿದ್ದ ತಂದೆ ಸುರೇಶ್ ಮಗನಿಗೆ ಬೈಕ್ ಕೊಡಿಸುತ್ತೇನೆ ಎಂದು ತಿಳಿಸಿದರೆ, ಕಷ್ಟದಲ್ಲಿರುವ ನಮಗೆ ಬೈಕ್ ಬೇಡ ಎಂದು ಮಗನಿಗೆ ಬುದ್ದಿವಾದ ಹೇಳಿದ್ದಾರೆ.

ತಂದೆ ತಾಯಿ ಹೊರಗಡೆ ಹೋದಾಗ ಧನರಾಜ ಅಡುಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಗೆ ವಾಪಸ್ ಬಂದಾಗ ಮಗ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿ ಆಘಾತಕ್ಕೆ ಒಳಗಾದ ತಾಯಿ ಕರೂರು ರೈಲು ನಿಲ್ದಾಣದ ಬಳಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments