Home ತಾಜಾ ಸುದ್ದಿ ಸ್ವದೇಶಿ ನಿರ್ಮಿತ ಲಘು ಯುದ್ಧ ಟ್ಯಾಂಕರ್ `ಜೋರಾವರ್’ ಯಶಸ್ವಿ ಪ್ರಯೋಗ: ಭಾರತದ ಬತ್ತಳಿಕೆಗೆ ಮಹಾಸ್ತ್ರ!

ಸ್ವದೇಶಿ ನಿರ್ಮಿತ ಲಘು ಯುದ್ಧ ಟ್ಯಾಂಕರ್ `ಜೋರಾವರ್’ ಯಶಸ್ವಿ ಪ್ರಯೋಗ: ಭಾರತದ ಬತ್ತಳಿಕೆಗೆ ಮಹಾಸ್ತ್ರ!

by Editor
0 comments
war tank

ಹೆಲಿಕಾಫ್ಟರ್ ನಲ್ಲಿ ಹೊತ್ತೊಯ್ಯಬಹುದಾದ ವೈವಿದ್ಯಮಯ ಲಘು ಯುದ್ಧ ಟ್ಯಾಂಕರ್ `ಜೋರಾವರ್’ ಯಶಸ್ವಿಯಾಗಿ ಪ್ರಯೋಗ ನಡೆಸಲಾಗಿದ್ದು, ಶೀಘ್ರದಲ್ಲೇ ಗಡಿ ಪ್ರದೇಶಗಳಲ್ಲಿ ನಿಯೋಜನೆಗೊಳ್ಳಲಿದ್ದು, ಭಾರತದ ಬಲ ಹೆಚ್ಚಿಸಲಿದೆ.

ಭಾರತೀಯ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಶುಕ್ರವಾರ ಮರುಭೂಮಿಯಲ್ಲಿ ಜೋರಾವರ್ ಹಗುರ ಯುದ್ಧ ಟ್ಯಾಂಕರ್ ಗಳನ್ನು ಪ್ರಯೋಗಕ್ಕೆ ಒಳಪಡಿಸಲಾಗಿದ್ದು, ಹಲವು ಉದ್ದೇಶಿತ ಗುರಿಗಳನ್ನು ಯಶಸ್ವಿಯಾಗಿ ತಲುಪಿದ್ದೂ ಅಲ್ಲದೇ ನಿರೀಕ್ಷೆಗೂ ಮೀರಿದ ಕಾರ್ಯಕ್ಷಮತೆ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.

ಕಡಿದಾದ ಪ್ರದೇಶಗಳಲ್ಲಿ, ಪರ್ವತಗಳ ನಡುವೆ ನಿರಾಯಸವಾಗಿ ಸಾಗಬಲ್ಲ ಈ ಯುದ್ಧ ಟ್ಯಾಂಕರ್ ಅನ್ನು ಹೆಲಿಕಾಫ್ಟರ್ ನಲ್ಲಿ ಕೂಡ ಸಾಗಿಸಬಹುದಾಗಿದೆ. ಇದರಿಂದ ಚೀನಾ ಗಡಿಯಲ್ಲಿ ಭಾರತದ ಈ ಟ್ಯಾಂಕರ್ ನಿಯೋಜಿಸುವ ಮೂಲಕ ಗಡಿ ಕಾವಲು ಮತ್ತಷ್ಟು ಬಲಪಡಿಸುವ ಸಾಧ್ಯತೆ ಇದೆ.

ಭಾರತೀಯ ಲಘು ಟ್ಯಾಂಕರ್ ಯಶಸ್ವಿ ಪ್ರಯೋಗಗಳು ಯಶಸ್ವಿಯಾಗಿದ್ದು, ಇದು ಆಧುನಿಕ ತಂತ್ರಜ್ಞಾನ ಮತ್ತು ರಕ್ಷಣಾ ವ್ಯವಸ್ಥೆಗಳನ್ನು ಒಳಗೊಂಡ ಸ್ವಾವಲಂಬನೆಯ ಭಾರತ ಕಲ್ಪನೆಯ ಗುರಿ ತಲುಪಲು ಮಹತ್ವದ ಮೈಲಿಗಲ್ಲು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದರು.

banner

ಪರ್ವತಗಳ ಮೇಲೆ ಅದರಲ್ಲೂ ಸಮುದ್ರ ಮಟ್ಟಕ್ಕಿಂತ ಅತ್ಯಂತ ಎತ್ತರದ ಪ್ರದೇಶಗಳಲ್ಲಿ ಈ ಯುದ್ಧ ಟ್ಯಾಂಕರ್ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. 350ಕ್ಕೂ ಹೆಚ್ಚು ಲಘು ಟ್ಯಾಂಕರ್ ಗಳನ್ನು ಭಾರತೀಯ ಸೇನೆ ಪರ್ವತಗಳ ಗಡಿ ಪ್ರದೇಶಗಳಲ್ಲಿ ನಿಯೋಜಿಸುವ ಗುರಿ ಹೊಂದಿದೆ.

ಪೂರ್ವ ಲಡಾಖ್‌ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರ ಜೊತೆಗಿನ ಘರ್ಷಣೆಯ ನಂತರ ಭಾರತೀಯ ಸೇನೆಯು ತನ್ನ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದು ಗಮನಾರ್ಹ ಸಂಖ್ಯೆಯ ಸುಲಭವಾಗಿ ಸಾಗಿಸಬಹುದಾದ M-777 ಅಲ್ಟ್ರಾ ಲೈಟ್ ಹೊವಿಟ್ಜರ್‌ಗಳನ್ನು ಅರುಣಾಚಲ ಪ್ರದೇಶ ಸೇರಿದಂತೆ ಗಡಿ ಪ್ರದೇಶದ ಉದ್ದಕ್ಕೂ ಪರ್ವತ ಪ್ರದೇಶಗಳಲ್ಲಿ ನಿಯೋಜನೆ ಆಗುವ ಸಾಧ್ಯತೆ ಇದೆ.

M-777 ಅನ್ನು ಚಿನೂಕ್ ಹೆಲಿಕಾಪ್ಟರ್‌ಗಳಲ್ಲಿ ತ್ವರಿತವಾಗಿ ಸಾಗಿಸಬಹುದು. ಸೈನ್ಯವು ಪೂರ್ವ ಲಡಾಖ್‌ನಲ್ಲಿ T-90 ಮತ್ತು T-72 ಮತ್ತು ಪದಾತಿಸೈನ್ಯದ ಯುದ್ಧ ವಾಹನಗಳಂತಹ ಭಾರೀ ಟ್ಯಾಂಕ್‌ಗಳನ್ನು ನಿಯೋಜಿಸಿದೆ.

ಸೇನೆಯ ಫಿರಂಗಿ ಘಟಕಗಳು ಈಗಾಗಲೇ ಕೆ-9 ವಜ್ರ ಟ್ರ್ಯಾಕ್ಡ್ ಸೆಲ್ಫ್ ಪ್ರೊಪೆಲ್ಡ್ ಹೊವಿಟ್ಜರ್‌ಗಳು, ಪಿನಾಕಾ ರಾಕೆಟ್ ಸಿಸ್ಟಮ್‌ಗಳು ಮತ್ತು ಧನುಷ್ ಗನ್ ಸಿಸ್ಟಮ್‌ಗಳನ್ನು ಚೀನಾದ ಗಡಿಯಲ್ಲಿ ನಿಯೋಜಿಸಿವೆ.

ಮೇ 2020 ರಿಂದ ಭಾರತ ಮತ್ತು ಚೀನೀ ಮಿಲಿಟರಿಗಳು ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿವೆ ಮತ್ತು ಎರಡು ಕಡೆಯವರು ಹಲವಾರು ಘರ್ಷಣೆ ಬಿಂದುಗಳಿಂದ ಬೇರ್ಪಟ್ಟಿದ್ದರೂ ಗಡಿ ಸಾಲಿನ ಸಂಪೂರ್ಣ ಪರಿಹಾರವನ್ನು ಇನ್ನೂ ಸಾಧಿಸಲಾಗಿಲ್ಲ.

https://twitter.com/SpokespersonMoD/status/1834612247626391593

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
World News 60 ದಿನಗಳ ಕದನ ವಿರಾಮ ಘೋಷಿಸಿದ ಇಸ್ರೇಲ್-ಹೆಜಾಬುಲ್ಲಾ! ಬಿಸಿ ತುಪ್ಪವಾದ ಅದಾನಿ ಜೊತೆ ಬಾಂಧವ್ಯ ಕಡಿದುಕೊಳ್ಳಲು ಬಿಜೆಪಿ ನಿರ್ಧಾರ? Priyanka Gandhi ನ.28ಕ್ಕೆ ಸಂಸದೆಯಾಗಿ ಲೋಕಸಭೆ ಪ್ರವೇಶಿಸಲಿರುವ ಪ್ರಿಯಾಂಕಾ ಗಾಂಧಿ ಕಳಸಾ ಬಂಡೂರಿ, ಮೇಕೆದಾಟು ಯೋಜನೆ ಅನುಮತಿಗೆ ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರಕ್ಕೆ ಮನವಿ Netflix ನಯನತಾರಾ-ವಿಘ್ನೇಶ್ ದಂಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟ ಧನುಷ್! 28 ಎಸೆತಗಳಲ್ಲಿ ಟಿ-20 ಶತಕ ಸಿಡಿಸಿ ಗೇಲ್, ಪಂತ್ ದಾಖಲೆ ಮುರಿದ ಯುವ ಕ್ರಿಕೆಟಿಗ! Law News ಬೆಂಗಳೂರಿನಲ್ಲಿ ಲಾಕಪ್ ಡೆತ್‌: ನಾಲ್ವರು ಪೊಲೀಸರಿಗೆ 12 ವರ್ಷ ಶಿಕ್ಷೆ! vote power ಸ್ವಾಮೀಜಿಗೆ ಸಂವಿಧಾನ ಗೊತ್ತಿಲ್ಲ: ಸಚಿವ ಎಂ.ಮಹದೇವಪ್ಪ ಅಸಮಾಧಾನ Muda Scam ಸಿಬಿಐನಿಂದ ಮುಡಾ ಹಗರಣದ ತನಿಖೆ: ಶುಕ್ರವಾರ ಹೈಕೋರ್ಟ್ ತೀರ್ಪು ಪ್ರಕಟ UP Accident ನಿದ್ದೆಗೆ ಜಾರಿ ಚಾಲಕ, ಚಿರನಿದ್ರೆಗೆ ಜಾರಿಗೆ 5 ವೈದ್ಯರು!