ಭಾರತದ ರೂಪಾಯಿ ಮೌಲ್ಯ ಅಮೆರಿಕದ ಡಾಲರ್ ಎದುರು ಸಾರ್ವಕಾಲಿಕ 84.40 ರೂ.ಗೆ ಮೊತ್ತಕ್ಕೆ ಕುಸಿತ ಕಂಡಿದೆ.
ಬುಧವಾರ ಮಾರುಕಟ್ಟೆ ಆರಂಭವಾದಾಗ ಅಮೆರಿಕಕ್ಕೆ ಭಾರೀ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮತ್ತು ಸ್ಥಳೀಯ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಭಾರತದ ರೂಪಾಯಿ ಮೌಲ್ಯ 1 ಪೈಸೆಯಷ್ಟು ಕುಸಿತ ಕಂಡಿದೆ.
ಈಗಾಗಲೇ ಪಾತಾಳ ಕಂಡಿರುವ ಭಾರತದ ರೂಪಾಯಿ ಮೌಲ್ಯ ಮತ್ತಷ್ಟು ಕುಸಿತ ಕಂಡು 84.40ರೂ.ಗೆ ಇಳಿಕೆ ಕಂಡಿದೆ.
ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ಬೆನ್ನಲ್ಲೇ ಷೇರು ಮಾರುಕಟ್ಟೆ ಜಾಗತಿಕ ಮಟ್ಟದಲ್ಲಿ ಏರಿಳಿತಗಳು ಕಂಡಿವೆ. ಇದರಿಂದ ಇತರೆ ದೇಶಗಳ ಮೇಲೂ ಪರಿಣಾಮ ಬೀರಿದೆ. ಇದರಿಂದ ಡಾಲರ್ ಮೌಲ್ಯ ಮತ್ತಷ್ಟು ಸದೃಢಗೊಂಡಿದೆ.
ಮಂಗಳವಾರವೂ ಕೂಡ ಭಾರತದ ರೂಪಾಯಿ ಮೌಲ್ಯ 1 ಪೈಸೆಯಷ್ಟು ಕುಸಿತ ಕಂಡಿತ್ತು. ಈ ಕುಸಿತ ಇನ್ನಷ್ಟು ದಿನ ಮುಂದುವರಿಯುವ ಲಕ್ಷಣಗಳಿದ್ದು, 84.50 ಪೈಸೆಗೆ ಏರಿಕೆಯಾಗಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.