ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಆರಂಭಗೊಂಡಿದ್ದು, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ಇದರ ನಡುವೆ ಯಾರಿಗೆ ಗೆಲುವು ಎಂಬ ಲೆಕ್ಕಾಚಾರದ ನಡುವೆ ಕುತೂಹಲ ಕೂಡ ಹೆಚ್ಚಾಗಿದೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿ ಗೆಲುವು ಯಾರಿಗೆ ಎಂಬ ಬಗ್ಗೆ ಇತಿಹಾಸ ತಜ್ಞ ಬರಹಗಾರ ಮತ್ತು ನಾಸ್ಟ್ರಡಾಮಸ್ ಭವಿಷ್ಯದ ರಹಸ್ಯಗಳನ್ನು ಭೇದಿಸಿ ರಾಜಕೀಯ ಭವಿಷ್ಯ ಹೇಳುವ ಅಲಾನ್ ಲಿಚ್ ಮನ್ ಯಾರಿಗೆ ಗೆಲುವು ಎಂಬ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಚುನಾವಣೆ ಬಗ್ಗೆ ಬಂದಿರುವ ಸಮೀಕ್ಷೆ ವರದಿಗಳನ್ನು ನಿರಾಕರಿಸಿರುವ ಲಿಚ್ ಮನ್, ನಾಸ್ಟ್ರಡಾಮಸ್ ಹೇಳಿದ ಭವಿಷ್ಯದ ಸಂಕೇತಗಳನ್ನು ಭೇದಿಸಲಾಗಿದೆ. ಈ ಪ್ರಕಾರ ಹಾಲಿ ಉಪಾಧ್ಯಕ್ಷೆ ಆಗಿರುವ ಕಮಲಾ ಹ್ಯಾರಿಸ್ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಇದೇ ಮೊದಲ ಬಾರಿ ಅಮೆರಿಕಕ್ಕೆ ಮಹಿಳಾ ಅಧ್ಯಕ್ಷರು ಬರಲಿದ್ದಾರೆ. ಆಫ್ರಿಕನ್ ಹಾಗೂ ಏಷ್ಯಾದ ಮಿಶ್ರಿತ ವ್ಯಕ್ತಿ ಅಧ್ಯಕ್ಷರಾಗುತ್ತಾರೆ ಎಂದು ಹೇಳಲಾಗಿದೆ. ಶೀಘ್ರದಲ್ಲೇ ಅಮರಿಕದಲ್ಲಿ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ಬಣಗಳಲ್ಲಿ ವ್ಯತ್ಯಾಸ ಆಗಲಿದೆ. ಬಿಳಿಯರು ಅಲ್ಪಸಂಖ್ಯಾತರಾಗುತ್ತಾರೆ ಎಂದು ಅವರು ಹೇಳಿದ್ದಾರೆ.
1981ರಲ್ಲಿ ವೈಟ್ ಹೌಸ್ ಕುರಿತ ಭವಿಷ್ಯವನ್ನು ಹೇಳಿದ್ದು, ಇದು 13 ಕೀಗಳ ರಹಸ್ಯ ಹೊಂದಿದೆ. ಈ ರಹಸ್ಯ ಭೇದಿಸಿದಾಗ ಸತ್ಯ ತಿಳಿಯುತ್ತದೆ. ರಾಜಕೀಯ ತಂತ್ರಗಾರಿಕೆ, ಆಡಳಿತ ವ್ಯವಸ್ಥೆ ಮತ್ತು ಪ್ರಚಾರದಿಂದ ಅಲ್ಲ. ಇದೇ ರೀತಿ 1984ರಲ್ಲಿ ನೀಡಿದ್ದ ನಾಸ್ಟ್ರಡಾಮಸ್ ಭವಿಷ್ಯ ನಿಜವಾಗಿತ್ತು ಎಂದು ಅವರು ಹೇಳಿದರು.
ನಾಸ್ಟ್ರಡಾಮಸ್ ಭವಿಷ್ಯ ಸುಳ್ಳಗಬಹುದೇ ಎಂಬ ಪ್ರಶ್ನೆಗೆ ಇದು ಮನುಷ್ಯರ ಲೆಕ್ಕಾಚಾರ ತಪ್ಪಾಗುವ ಸಾಧ್ಯತೆ ಖಂಡಿತ ಇದೆ. ಆದರೆ ನಾವು ಹೇಗೆ ರಹಸ್ಯ ಭೇದಿಸಿದ್ದೇವೆ ಎಂಬುದರ ಆಧಾರದ ಮೇಲೆ ತಿಳಿಯುತ್ತದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.