ಆಮದು ಸುಂಕ ಇಳಿಸಲು ಒಪ್ಪಿಕೊಂಡಿಲ್ಲ: ಅಮೆರಿಕಕ್ಕೆ ಭಾರತ ತಿರುಗೇಟು
ಅಮೆರಿಕದ ವಸ್ತುಗಳ ಮೇಲಿನ ಆಮದು ಸುಂಕ ಇಳಿಸುವುದಾಗಿ ಒಪ್ಪಿಕೊಂಡಿಲ್ಲ ಎಂದು ಭಾರತ ಸ್ಪಷ್ಟನೆ ನೀಡುವ ಮೂಲಕ ಡೊನಾಲ್ಡ್ ಟ್ರಂಪ್ ಗೆ ಪರೋಕ್ಷವಾಗಿ ತಿರುಗೇಟು ನೀಡಿದೆ. ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಅಧಿಕಾರ ಸ್ವೀಕರಿಸಿದ ನಂತರ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಡೊನಾಲ್ಡ್ ಟ್ರಂಪ್ ತಮ್ಮ ದೇಶದ ವಸ್ತುಗಳ ಮೇಲೆ ಎಷ್ಟು ತೆರಿಗೆ ವಿಧಿಸಲಾಗುತ್ತದೆಯೋ ಅಷ್ಟೇ ಪ್ರಮಾಣದ…
ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯಿಂದ 2000 ಉದ್ಯೋಗಿಗಳನ್ನು ವಜಾಗೊಳಿಸಿದ ಅಮೆರಿಕ
ನ್ಯೂಯಾರ್ಕ್: ಇತರ ದೇಶಗಳಿಗೆ ಅಮೆರಿಕದ ನೆರವು ನಿಲ್ಲಿಸಿರುವ ಅಧ್ಯಕ್ಷ ಟ್ರಂಪ್, ಇದೀಗ, ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯ (ಯುಎಸ್ ಏಡ್) ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಯುಎಸ್‌ಏಡ್ ವೆಬ್ ಸೈಟ್ ನಲ್ಲಿ 2,000 ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ಪ್ರಕಟಿಸಲಾಗಿದೆ. ಸಿಬ್ಬಂದಿಗೆ ಬಲವಂತದ ರಜೆ: ಇದರ ಜೊತೆಗೆ, ಪ್ರಪಂಚದಾದ್ಯಂತ ಇರುವ ಸಂಸ್ಥೆಯ ಕೆಲ ಉದ್ಯೋಗಿಗಳನ್ನು ಹೊರತುಪಡಿಸಿ, ಸಾವಿರಾರು ಸಿಬ್ಬಂದಿಗೆ ಬಲವಂತದ…
ಭಾರತದ ಚುನಾವಣೆಗೆ ಅಮೆರಿಕದ ಹಣ: ಶ್ವೇತಪತ್ರ ಹೊರಡಿಸಲು ಕಾಂಗ್ರೆಸ್ ಆಗ್ರಹ
ನವದೆಹಲಿ: ಭಾರತದಲ್ಲಿ ಮತದಾನವನ್ನು ಉತ್ತೇಚಿಸುವ ನಿಟ್ಟಿನಲ್ಲಿ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ಅಮೆರಿಕ ಸರ್ಕಾರದ ನೆರವಿನ ಕುರಿತು ಮೋದಿ ಸರ್ಕಾರವು ಶ್ವೇತಪತ್ರ ಹೊರಡಿಸಲಿ ಎಂದು ಕಾಂಗ್ರೆಸ್ ಗುರುವಾರ ಆಗ್ರಹಿಸಿದೆ. ಭಾರತದಲ್ಲಿ ನಡೆಯುವ ಮತದಾನಕ್ಕೆ ನಾವು 182 ಕೋಟಿ (21 ದಶಲಕ್ಷ ಡಾಲರ್) ವ್ಯಯಿಸುವ ಅಗತ್ಯವೇನಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ್ದರು. ಹಾಗೆಯೇ, ಹಿಂದಿನ…
ಮೋದಿ ಭೇಟಿ ಬೆನ್ನಲ್ಲೇ ಭಾರತಕ್ಕೆ ಶಾಕ್ ನೀಡಿದ ಅಮೆರಿಕ: 21 ದಶಲಕ್ಷ ಡಾಲರ್ ನೆರವು ಕಡಿತ!
ವಾಶಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಹೊಸ ಆಡಳಿತವು ಬಜೆಟ್ ಕಡಿತದ ಭಾಗವಾಗಿ ಭಾರತಕ್ಕೆ ನೀಡುತ್ತಿದ್ದ ನೆರವನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಬೆನ್ನಲ್ಲೇ ಕಡಿತಗೊಳಿಸಿ ಆಘಾತ ನೀಡಿದೆ. ಭಾರತ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವಾರು ದೇಶಗಳಿಗೆ ಲಕ್ಷಾಂತರ ಡಾಲರ್‌ಗಳ ಹಣವನ್ನು ಅಮೆರಿಕ ರದ್ದುಗೊಳಿಸಿದೆ. ಭಾರತದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ 21 ದಶಲಕ್ಷ ಡಾಲರ್…
5ನೇ ತಲೆಮಾರಿನ ಯುದ್ಧ ವಿಮಾನ, ಪರಮಾಣು ಸ್ಥಾವರ: ಭಾರತ- ಅಮೆರಿಕ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಭೇಟಿ ಮಾಡಿ ಹಲವು ರಾಜತಾಂತ್ರಿಕ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಈ ಮೂಲಕ ಎರಡೂ ದೇಶಗಳ ಸಂಬಂಧ ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನ ನಡೆಯಿತು. ಶ್ವೇತಭವನದಲ್ಲಿ ಗುರುವಾರ ಮೋದಿ ಮತ್ತು ಟ್ರಂಪ್ ಎರಡೂ ದೇಶಗಳ ನಡುವೆ ರಕ್ಷಣೆ, ತಂತ್ರಜ್ಞಾನ, ಇಂಧನ, ವಲಸೆ ನೀತಿ, ವ್ಯಾಪಾರ…
ಸ್ಟೀಲ್, ಅಲ್ಯೂಮಿನಿಯಂ ಆಮದು ಮೇಲೆ ಶೇ.25 ತೆರಿಗೆ: ಟ್ರಂಪ್ ನಿಂದ ಮತ್ತೊಂದು ಬರೆ!
ಅಮೆರಿಕ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾದ ಬೆನ್ನಲ್ಲೇ ಒಂದರ ಮೇಲೋಂದರಂತೆ ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿರುವ ಡೊನಾಲ್ಡ್ ಟ್ರಂಪ್ ಇದೀಗ ಸ್ಟೀಲ್ ಮತ್ತು ಅಲ್ಯೂಮಿನಿಯಂ ಆಮದು ಮೇಲೆ ಹೆಚ್ಚುವರಿ ಶೇ.25ರಷ್ಟು ತೆರಿಗೆ ಹೇರಲು ಮುಂದಾಗಿದ್ದಾರೆ. ಭಾನುವಾರ ಏರ್ ಫೋರ್ಸ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಮಂಗಳವಾರ ನೂತನ ತೆರಿಗೆ ಪದ್ಧತಿ ಜಾರಿಗೆ ಸಹಿ ಹಾಕಲಿದ್ದೇನೆ….
World News ಅಮೆರಿಕ ಇತಿಹಾಸದಲ್ಲೇ ದಾಖಲೆಯ 150 ಪೈಪ್ ಬಾಂಬ್ ಪತ್ತೆ!
ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ ಬಿಐ) ವರ್ಜಿಯಾನಿಯಾದ ತೋಟದಲ್ಲಿ ಅಡಗಿಸಲಾಗಿದ್ದ 150 ಕಚ್ಛಾ ಪೈಪ್ ಬಾಂಬ್ ಗಳನ್ನು ಪತ್ತೆ ಹಚ್ಚಿದೆ. ಅಮೆರಿಕ ಇತಿಹಾಸದಲ್ಲೇ ದೊಡ್ಡ ಪ್ರಮಾಣದ ಕಚ್ಛಾ ಬಾಂಬ್ ಪತ್ತೆ ಪ್ರಕರಣ ಇದಾಗಿದ್ದು, ಸುಮಾರು ೨೦ ಎಕರೆ ತೋಟದಲ್ಲಿ ಬಾಂಬ್ ಹಾಗೂ ಸ್ಫೋಟಕಕ್ಕೆ ಬಳಸುವ ಸಾಮಾಗ್ರಿಗಳನ್ನು ಅಡಗಿಸಿಡಲಾಗಿತ್ತು. ಡಿಸೆಂಬರ್ 17ರಂದು ನಡೆದ ದಾಳಿಯಲ್ಲಿ ಅಕ್ರಮ…
ಅಮೆರಿಕ ಅಧ್ಯಕ್ಷೀಯ ಚುನಾವಣೆ: ಡೊನಾಲ್ಡ್ ಟ್ರಂಪ್ ಜಯಭೇರಿ, ಕಮಲಾ ಹ್ಯಾರಿಸ್ ಗೆ ಆಘಾತ
ಮಾಜಿ ಅಧ್ಯಕ್ಷ ಸ್ಪಷ್ಟ ಬಹುಮತ ಗಳಿಸುವ ಮೂಲಕ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿದರೆ, ಹಾಲಿ ಉಪಾಧ್ಯಕ್ಷೆ ಡೆಮಾಕ್ರೆಟಿಕ್ ಪಕ್ಷದ ಹಾಗೂ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಸೋಲುಂಡಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ 538 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ 484 ಸ್ಥಾನಗಳಿಗೆ ಫಲಿತಾಂಶ ಹೊರಬಿದ್ದಿದ್ದು, ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷ…
ಪ್ರಜಾಪ್ರಭುತ್ವ ಅಪಾಯದಲ್ಲಿದೆ: ಸಮೀಕ್ಷೆಯಲ್ಲಿ ಶೇ.73ರಷ್ಟು ಅಮೆರಿಕನ್ನರ ಕಳವಳ
ಅಮೆರಿಕದ ಅಧ್ಯಕ್ಷೀಯ ಚುನಾವಣೆ ವೇಳೆ ನಡೆದ ಸಮೀಕ್ಷೆ ವೇಳೆ ಶೇ.73ರಷ್ಟು ಜನರು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಡೆಮಾಕ್ರೆಟಿಕ್ ಪಕ್ಷದ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಚಾರದ ಭಾಷಣಗಳ ನಂತರ ದೇಶದ 93 ಭಾಗಗಳಲ್ಲಿ ಎಡಿಸನ್ ರಿಸರ್ಚ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಜನರು ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಕಳವಳ…
ಅಮೆರಿಕ ಅಧ್ಯಕ್ಷೀಯ ಚುನಾವಣೆ ಮತದಾನ ಆರಂಭ: ನಾಸ್ಟ್ರಡಾಮಸ್ ಭವಿಷ್ಯದ ಪ್ರಕಾರ ಯಾರಿಗೆ ಜಯ?
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಆರಂಭಗೊಂಡಿದ್ದು, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ಇದರ ನಡುವೆ ಯಾರಿಗೆ ಗೆಲುವು ಎಂಬ ಲೆಕ್ಕಾಚಾರದ ನಡುವೆ ಕುತೂಹಲ ಕೂಡ ಹೆಚ್ಚಾಗಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿ ಗೆಲುವು ಯಾರಿಗೆ ಎಂಬ ಬಗ್ಗೆ ಇತಿಹಾಸ ತಜ್ಞ ಬರಹಗಾರ ಮತ್ತು ನಾಸ್ಟ್ರಡಾಮಸ್ ಭವಿಷ್ಯದ…