Wednesday, May 13, 2026
Google search engine
Homeವಿದೇಶಖಾರ್ಗ್ ದ್ವೀಪ, ತೈಲ ಬಾವಿ ಸ್ಫೋಟಿಸುತ್ತೇವೆ: ಟ್ರಂಪ್ ಹೊಸ ಎಚ್ಚರಿಕೆ

ಖಾರ್ಗ್ ದ್ವೀಪ, ತೈಲ ಬಾವಿ ಸ್ಫೋಟಿಸುತ್ತೇವೆ: ಟ್ರಂಪ್ ಹೊಸ ಎಚ್ಚರಿಕೆ

ಟೆಹರಾನ್/ವಾಷಿಂಗ್ಟನ್: ಶಾಂತಿ ಮಾತುಕತೆ ಶೀಘ್ರವಾಗಿ ಇತ್ಯರ್ಥಗೊಳ್ಳದೇ ಇದ್ದರೆ ಇರಾನ್ ನ ಖಾರ್ಗ್ ದ್ವೀಪ ಹಾಗೂ ತೈಲ ಬಾವಿಗಳನ್ನು ಸ್ಫೋಟಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಶಾಂತಿ ಮಾತುಕತೆ ಪ್ರಸ್ತಾಪದ ನಡುವೆ ಇರಾನ್ ಅರಬ್ ರಾಷ್ಟ್ರಗಳಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿ ದಾಳಿ ಮುಂದುವರಿಸಿರುವ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತೆ ಸಾಮಾಜಿಕ ಜಾಲತಾಣದ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವೆ ಶೀಘ್ರದಲ್ಲೇ ಒಪ್ಪಂದಕ್ಕೆ ಬಾರದೇ ಇದ್ದರೆ ಇರಾನ್ ಅನ್ನು ಸಂಪೂರ್ಣ ನಾಶಪಡಿಸಲಾಗುವುದು. ಇರಾನ್ ನ ಆದಾಯದ ಮೂಲವಾದ ತೈಲ ಬಾವಿ ಸ್ಫೋಟಿಸಲಾಗುವುದು ಎಂದು ಹೇಳಿದ್ದಾರೆ.

57 ಸಾವಿರ ಸೇನೆ ರವಾನೆ?

ಒಂದು ಕಡೆ ಶಾಂತಿ ಮಾತುಕತೆ ಪ್ರಯತ್ನಗಳು ನಡೆದಿರುವ ಮಧ್ಯೆಯೇ ಅಮೆರಿಕ ಭೂದಾಳಿ ನಡೆಸಲು 57 ಸಾವಿರ ಯೋಧರ ತುಕಡಿಗಳನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಿದೆ. ಮತ್ತೊಂದೆಡೆ ಅಮೆರಿಕದ ನಡೆಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿರುವ ಇರಾನ್ ದಾಳಿ ಹತ್ತಿಕ್ಕಲು ಸನ್ನದ್ಧವಾಗಿರುವುದಾಗಿ ಹೇಳಿಕೊಂಡಿದೆ.

ಅಮೆರಿಕ ನೀಡಿರುವ 15 ಅಂಶಗಳ ಮಾತುಕತೆಗೆ ಇರಾನ್ ನಿರಾಕರಿಸಿದ್ದು, ಪ್ರಮುಖ 5 ಬೇಡಿಕೆಗಳನ್ನು ಮುಂದಿಟ್ಟಿದೆ. ಈ ನಡುವೆ ಮಾತುಕತೆ ಮಧ್ಯಸ್ಥಿಕೆ ವಹಿಸಲು ಮುಂದಾಗಿರುವ ಪಾಕಿಸ್ತಾನ ತೆರೆಮರೆಯ ಪ್ರಯತ್ನಗಳನ್ನು ಮುಂದುವರಿಸಿದೆ.

ವಾಯುನೆಲೆಗೆ ಮುಚ್ಚಿದ ಸ್ಪೇನ್

ಇರಾನ್ ಮೇಲೆ ದಾಳಿ ನಡೆಸಲು ಅಮೆರಿಕ ಯುದ್ಧ ವಿಮಾನಗಳಿಗೆ ಸ್ಪೇನ್ ವಾಯುನೆಲೆಗಳನ್ನು ಮುಚ್ಚಿದೆ. ಯುದ್ಧಕ್ಕಾಗಿ ವಾಯುನೆಲೆ ಹಾಗೂ ಸೇನಾ ನೆಲೆಗಳನ್ನು ಅಮೆರಿಕ ಬಳಸಲು ಅವಕಾಶ ನೀಡುವುದಿಲ್ಲ ಎಂದು ಸ್ಪೇನ್ ಘೋಷಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments