ಅಮೆರಿಕದ ಅತ್ಯಾಧುನಿಕ ಹಾಗೂ ಚುರುಕಾಗಿ ಕೆಲಸ ಮಾಡುವ ಮಾನವ ರಹಿತ ಜಲಾಂತರ್ಗಾಮಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಇರಾನ್ ಹೇಳಿಕೊಂಡಿದೆ. ಈ ಮೂಲಕ ಎರಡೂ ದೇಶಗಳ ನಡುವೆ ಕೆಲವು ದಿನಗಳ ತಣ್ಣಗಿದ್ದ ಯುದ್ಧದ ಕಾವು ಮತ್ತೊಮ್ಮೆ ಏರತೊಡಗಿದೆ.
ಹರ್ಮುಜ್ ಜಲಸಂಧಿ ಪ್ರವೇಶಿಸಿದ್ದ ಈ ಜಲಾಂತರ್ಗಾಮಿ ಇರಾನ್ ನ 5 ತೈಲ ಟ್ಯಾಂಕರ್ ಗಳ ಮೇಲೆ ದಾಳಿ ಮಾಡಿತ್ತು. ಇದೀಗ ಇರಾನ್ ತಮ್ಮ ಅತ್ಯಂತ ಕಡಿಮೆ ವೆಚ್ಚದ ತಂತ್ರಜ್ಞಾನ ಬಳಸಿ ಪತ್ತೆ ಹಚ್ಚಿದ್ದೂ ಅಲ್ಲದೇ ವಶಪಡಿಸಿಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಡೈವ್ ಎಲ್ ಡಿ ಎಂದು ಸಬ್ ಮೇರಿನ್ ಮೇಲೆ ಹೆಸರಿದೆ. ಆದರೆ ಈ ಸಬ್ ಮೇರಿನ್ ನ ನಿಜವಾದ ಹೆಸರು ಹಾಗೂ ಇತರೆ ವಿಷಯಗಳು ತಿಳಿದು ಬಂದಿಲ್ಲ. ಅಲ್ಲದೇ ಈ ಸಬ್ ಮೇರಿನ್ ನಲ್ಲಿ ಯಾವುದೇ ಸಿಬ್ಬಂದಿ ಪತ್ತೆಯಾಗಿಲ್ಲ.
ಸಬ್ ಮೇರಿನ್ ನಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದ್ದು, ಈ ಸಬ್ ಮೇರಿನ್ ರಕ್ಷಣಾ ವ್ಯವಸ್ಥೆಯನ್ನು ಹಾನಿಗೊಳಿಸಲಾಗಿದ್ದು, ಎಂಕ್ಯೂ-9 ರಿಪೇರ್ ಡ್ರೋಣ್ ಗಳನ್ನು ಉಡಾಯಿಸುವ ಸಾಮರ್ಥ್ಯವನ್ನು ಧ್ವಂಸಗೊಳಿಸಲಾಗಿದೆ ಎಂದು ಇರಾನ್ ಸೇನೆ ಐಆರ್ ಜಿಸಿ ಪ್ರಕಟಣೆಯಲ್ಲಿ ತಿಳಿಸಿದೆ.



