ಮಾಸ್ಕೊ: ರಷ್ಯಾದ ರಾಜಧಾನಿ ಮಾಸ್ಕೋ ಮೇಲೆ ಉಕ್ರೇನ್ ರಾತ್ರಿಯಿಡೀ ಭೀಕರ ಡ್ರೋಣ್ ದಾಳಿ ನಡೆಸಿದ್ದು, ದೇಶದ ಅತಿದೊಡ್ಡ ಆನ್‌ಲೈನ್ ಚಿಲ್ಲರೆ ವ್ಯಾಪಾರಿ ಉಗ್ರಾಣ ಭಸ್ಮವಾಗಿದೆ.
ಡ್ರೋನ್ ದಾಳಿಯು ದೇಶದ ಅತಿದೊಡ್ಡ ಆನ್‌ಲೈನ್ ಚಿಲ್ಲರೆ ವ್ಯಾಪಾರಿ ವೈಲ್ಡ್‌ಬೆರ್ರಿಸ್ ಮೇಲೆ ಭಾರೀ ಪ್ರಮಾಣದ ಡ್ರೋಣ್ ಬಂದು ಬಿದ್ದಿವೆ. ಇದರಿಂದ ಗೋದಾಮಿಗೆ ಬೆಂಕಿ ಬಿದ್ದಿದ್ದು, ಸಂಪೂರ್ಣ ನಾಶಗೊಂಡಿದೆ.
ಬೆಂಕಿಯ ಪರಿಣಾಮವಾಗಿ ಕೊಲೆಡಿನೊ ಪ್ರದೇಶದ ಮೇಲೆ ದೊಡ್ಡ ಪ್ರಮಾಣದ ಜ್ವಾಲೆ ಹಾಗೂ ಆಕಾಶದವರೆಗೂ ಹಬ್ಬಿದ ದೊಡ್ಡ ಹೊಗೆ ಕಾಣಿಸಿಕೊಂಡಿದ್ದು, ಭಾರೀ ಪ್ರಮಾಣದ ಹಾನಿ ಆಗಿದೆ. ಆದರೆ ಸಾವಿನ ಪ್ರಮಾಣದ ಬಗ್ಗೆ ಯಾವುದೇ ವರದಿ ಆಗಿಲ್ಲ.
ಮಾಸ್ಕೋದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾದ ಡೊಮೊಡೆಡೋವೊದಲ್ಲಿರುವ ಎರಡನೇ ಲಾಜಿಸ್ಟಿಕ್ಸ್ ಸೌಲಭ್ಯವು ಸಹ ಹಾನಿಗೊಳಗಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.



