Thursday, October 1, 2026
Google search engine
Homeದೇಶಕೋ-ಪೈಲಟ್‌ನಿಂದ ಚಾಕು ಇರಿತ: ಸಾಹಸಿ ಭಾರತೀಯ ಪೈಲಟ್ ದುಬೈಗೆ ಏರ್‌ಲಿಫ್ಟ್

ಕೋ-ಪೈಲಟ್‌ನಿಂದ ಚಾಕು ಇರಿತ: ಸಾಹಸಿ ಭಾರತೀಯ ಪೈಲಟ್ ದುಬೈಗೆ ಏರ್‌ಲಿಫ್ಟ್

ದುಬೈ: ದುಬೈನಿಂದ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಕೋ-ಪೈಲಟ್‌ನಿಂದ ಚಾಕು ಇರಿತಕ್ಕೊಳಗಾದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಇಂದು ಸೌದಿ ಅರೇಬಿಯಾದಿಂದ ದುಬೈಗೆ ಏರ್‌ಲಿಫ್ಟ್ ಮಾಡಲಾಗಿದೆ.

ವಿಮಾನದಲ್ಲಿ ಸಂಭವಿಸಿದ ದಾಳಿಯ ನಡುವೆಯೂ ಸಮಯಪ್ರಜ್ಞೆ ಮೆರೆದ ಕ್ಯಾಪ್ಟನ್ ಸ್ಮಿತ್, ಸಂಭವನೀಯ ಭೀಕರ ವಿಮಾನ ದುರಂತವನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವರದಿಯಾಗಿದೆ.

ದುಬೈನಿಂದ ಟೆಲ್ ಅವೀವ್‌ಗೆ ಹಾರಾಟ ನಡೆಸುತ್ತಿದ್ದ ವೇಳೆ ಓಮನ್ ಮೂಲದ ಕೋ-ಪೈಲಟ್ ಕ್ಯಾಪ್ಟನ್ ಸ್ಮಿತ್ ಅವರ ಮೇಲೆ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡು ಕಾಕ್‌ಪಿಟ್‌ನಲ್ಲಿ ಬಿದ್ದಿದ್ದರೂ ಧೈರ್ಯ ಕಳೆದುಕೊಳ್ಳದ ಸ್ಮಿತ್, ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲೂ ಕಾಕ್‌ಪಿಟ್ ಬಾಗಿಲನ್ನು ಅನ್‌ಲಾಕ್ ಮಾಡಿದ್ದಾರೆ ಎನ್ನಲಾಗಿದೆ.

ಇದರಿಂದ ಹೊರಗಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿ ಕಾಕ್‌ಪಿಟ್‌ಗೆ ಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಿಸಲು ಸಾಧ್ಯವಾಯಿತು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.
ಬಳಿಕ ವಿಮಾನದಲ್ಲಿದ್ದ ಫ್ಲೈದುಬೈ ಸಂಸ್ಥೆಯ ಇಬ್ಬರು ರಿಲೀಫ್ ಪೈಲಟ್‌ಗಳು ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ನಗರದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ.

ಆರೋಗ್ಯ ಸ್ಥಿತಿ ಸ್ಥಿರ:

ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ಪ್ರಕಾರ, ಕ್ಯಾಪ್ಟನ್ ಸ್ಮಿತ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರ ಕುಟುಂಬ ಹಾಗೂ ಸೌದಿ ಅಧಿಕಾರಿಗಳೊಂದಿಗೆ ರಾಯಭಾರ ಕಚೇರಿ ನಿರಂತರ ಸಂಪರ್ಕದಲ್ಲಿದೆ.

ತಬುಕ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ದುಬೈಗೆ ಸ್ಥಳಾಂತರಿಸಲಾಗಿದೆ.

166 ಇಸ್ರೇಲಿ ಪ್ರಯಾಣಿಕರು:

ವಿಮಾನದಲ್ಲಿದ್ದ ಒಟ್ಟು 174 ಪ್ರಯಾಣಿಕರ ಪೈಕಿ 166 ಮಂದಿ ಇಸ್ರೇಲಿ ಪ್ರಜೆಗಳಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಫ್ಲೈದುಬೈ ಸಂಸ್ಥೆ ತಿಳಿಸಿದೆ. ಘಟನೆಯನ್ನು ಇಸ್ರೇಲಿ ಅಧಿಕಾರಿಗಳು “ಸಂಭಾವ್ಯ ಭಯೋತ್ಪಾದನಾ ದಾಳಿ” ಎಂದು ಪರಿಗಣಿಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments