ಮ್ಯಾಡ್ರಿಡ್: ಸ್ಪೇನ್‌ನಲ್ಲಿ ಎರಡು ಹೈಸ್ಪೀಡ್ ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 64ಕ್ಕೆ ಏರಿಕೆಯಾಗಿದ್ದು, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಬುಧವಾರ ಬೆಳಿಗ್ಗೆ ಸ್ಥಳೀಯ ಕಾಲಮಾನ 9 ಗಂಟೆಗೆ ಸುಮಾರಿಗೆ ಟೊಲೆಡೊ ಪ್ರಾಂತ್ಯದ ಲಾಸ್ ಯೆಬೇನ್ಸ್ ಮತ್ತು ಉರ್ಡಾ ನಗರಗಳ ನಡುವೆ ಎರಡು ಹೈಸ್ಪೀಡ್ ರೈಲುಗಳು ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಎರಡು ಬೋಗಿಗಳು ಹಳಿತಪ್ಪಿ ಇಳಿಜಾರಿನಲ್ಲಿ ಉರುಳಿವೆ ಎಂದು ಹೇಳಲಾಗಿದೆ. ಅಪಘಾತದ ನಂತರ, ಮ್ಯಾಡ್ರಿಡ್, ಸಿಯುಡಾಡ್ ರಿಯಲ್ ಮತ್ತು ಆಂಡಲೂಸಿಯಾ ಮಾರ್ಗಗಳಲ್ಲಿ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಎರಡು ರೈಲುಗಳು ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದವು ಎಂದು ವರದಿ ಮಾಡಿದೆ. ಒಂದು ರೈಲು ಇನ್ನೊಂದರ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಅದರ ಎರಡು ಬೋಗಿಗಳು ಹಳಿತಪ್ಪಿವೆ. ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ದುರಂತ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು ಮೃತರಿಗೆ ಸಂತಾಪ ಸೂಚಿಸಿದ್ದಾರೆ.
ಮಾನವ ಲೋಪದಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದ್ದು, ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.
ವರ್ಷದಲ್ಲಿ ನಡೆದ 2ನೇ ರೈಲು ಅಪಘಾತ
ಈ ವರ್ಷ ಸ್ಪೇನ್‌ನಲ್ಲಿ ನಡೆದ ಎರಡನೇ ಪ್ರಮುಖ ರೈಲು ಅಪಘಾತ ಇದಾಗಿದೆ. ಈ ವರ್ಷದ ಆರಂಭದಲ್ಲಿ, ಜನವರಿ 18 ರಂದು, ದಕ್ಷಿಣ ಸ್ಪೇನ್‌ನಲ್ಲಿ ಎರಡು ರೈಲುಗಳು ಡಿಕ್ಕಿ ಹೊಡೆದು 45 ಜನರು ಸಾವನ್ನಪ್ಪಿದ್ದು 170 ಜನರು ಗಾಯಗೊಂಡಿದ್ದರು.
