Sunday, May 31, 2026
Google search engine
Homeವಿದೇಶಹಿಂದೆಂದೂ ನೋಡದ ಭೀಕರ ದಾಳಿ ನಡೆಸುತ್ತೇವೆ: ಇರಾನ್‌ ಗೆ ಟ್ರಂಪ್‌ ಎಚ್ಚರಿಕೆ

ಹಿಂದೆಂದೂ ನೋಡದ ಭೀಕರ ದಾಳಿ ನಡೆಸುತ್ತೇವೆ: ಇರಾನ್‌ ಗೆ ಟ್ರಂಪ್‌ ಎಚ್ಚರಿಕೆ

ಅಯೊತುಲ್ಲಾ ಖಮೇನಿ ಹತ್ಯೆ ನಂತರವೂ ಇರಾನ್‌ ದಾಳಿ ಮುಂದುವರಿಸಿರುವುದಕ್ಕೆ ಆಕ್ರೋಶ ಹೊರಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇರಾನ್‌ ದಾಳಿ ಮುಂದುವರಿಸಿದರೆ ಹಿಂದೆಂದೂ ನೋಡದಂತಹ ಭೀಕರ ದಾಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಶನಿವಾರ ತಡರಾತ್ರಿ ಅಮೆರಿಕದ ಸೇನೆ ಖಮೇನಿ ಹತ್ಯೆ ಮಾಡಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ ಬೆನ್ನಲ್ಲೇ ಇರಾನ್‌ ದುಬೈ, ಕತಾರ್‌ ವಿಮಾನ ನಿಲ್ದಾಣ ಹಾಗೂ ವಾಯುನೆಲೆಗಳ ಮೇಲೆ ದಾಳಿ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ ಮೇಲೆ ಇಂದು ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲಿದ್ದೇವೆ. ಎಷ್ಟು ದೊಡ್ಡ ಪ್ರಮಾಣದಲ್ಲಿ ದಾಳಿ ಮಾಡುತ್ತೇವೆ ಅಂದರೆ ಅವರು ಹಿಂದೆಂದೂ ನೋಡಿರುವುದಿಲ್ಲ, ಇರಾನ್‌ ದಾಳಿ ಮುಂದುವರಿಸಿದರೆ ನಾವು ದಾಳಿ ತೀವ್ರಗೊಳಿಸುತ್ತೇವೆ ಎಂದು ಟ್ರಂಪ್‌ ಎಚ್ಚರಿಸಿದ್ದಾರೆ.

ಇದೇ ವೇಳೆ ಇರಾನ್‌ ಯಾವುದೇ ಕಾರಣಕ್ಕೂ ಶರಣಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಈಗಾಗಲೇ ಇಂಡಿಯನ್‌ ಓಶನ್‌ ನಲ್ಲಿರುವ ಅಮೆರಿಕದ ನೌಕೆಗಳ ಮೇಲೆ ದಾಳಿ ಮಾಡಲಾಗಿದ್ದು, ಹಲವಾರು ಅಮೆರಿಕದ ಯೋಧರನ್ನು ಕೊಂದಿರುವುದಾಗಿ ಹೇಳಿಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments