Saturday, 14 November 2026 — Kannadavahini
BREAKING NEWS
ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್ ರಾಜಕೀಯ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿಗಳಿಗೆ ಕುತ್ತು: ಸಿಎಂ ಡಿ ಕೆ ಶಿವಕುಮಾರ್ ಅಪರಾಧ ದರೋಡೆ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಗನ್‌ ಮ್ಯಾನ್: 2.39 ಕೋಟಿ ರೂ. ವಶ ರಾಜ್ಯ ಎಥೆನಾಲ್ ಮಿಶ್ರಣ ಕುರಿತು 67 ಕಡೆ ಪೆಟ್ರೋಲ್ ಮಾದರಿ ಸಂಗ್ರಹಿಸಿ ಪರಿಶೀಲನೆ: ಸಿಎಂ ಡಿಕೆ ಶಿವಕುಮಾರ್ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್ ರಾಜಕೀಯ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿಗಳಿಗೆ ಕುತ್ತು: ಸಿಎಂ ಡಿ ಕೆ ಶಿವಕುಮಾರ್ ಅಪರಾಧ ದರೋಡೆ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಗನ್‌ ಮ್ಯಾನ್: 2.39 ಕೋಟಿ ರೂ. ವಶ ರಾಜ್ಯ ಎಥೆನಾಲ್ ಮಿಶ್ರಣ ಕುರಿತು 67 ಕಡೆ ಪೆಟ್ರೋಲ್ ಮಾದರಿ ಸಂಗ್ರಹಿಸಿ ಪರಿಶೀಲನೆ: ಸಿಎಂ ಡಿಕೆ ಶಿವಕುಮಾರ್
ದೇಶ

ನೌಕಾಪಡೆ ಒಕ್ಕೂಟ ರಚನೆಗೆ ಟ್ರಂಪ್ ಆಹ್ವಾನ ತಿರಸ್ಕರಿಸಿದ ಭಾರತ ಸೇರಿ ಮಿತ್ರ ರಾಷ್ಟ್ರಗಳು!

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
3 ನಿಮಿಷ ಓದು 19 ವೀಕ್ಷಣೆಗಳು
trump-modi

ವಾಷಿಂಗ್ಟನ್: ಹರ್ಮುಜ್ ಜಲಸಂಧಿ ಮುಕ್ತಗೊಳಿಸಲು ನೌಕಾಪಡೆ ಮಿತ್ರ ಕೂಟ ರಚನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದು, ಭಾರತ ಸೇರಿದಂತೆ ಮಿತ್ರ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ.

ಇರಾನ್ ವಶದಲ್ಲಿರುವ ಹರ್ಮುಜ್ ಜಲಸಂಧಿಯನ್ನು ಮುಕ್ತೊಗೊಳಿಸಲು ನೌಕಾಪಡೆ ಒಕ್ಕೂಟ ರಾಷ್ಟ್ರಗಳು ಕೈ ಜೋಡಿಸಬೇಕು. ಹಾಗೂ ತಮ್ಮ ನೌಕಾಪಡೆ ಹಡಗುಗಳನ್ನು ಹರ್ಮುಜ್ ಬಳಿ ತರಬೇಕು ಎಂದು ಮನವಿ ಮಾಡಿದ್ದಾರೆ.

ಟ್ರಂಪ್ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ 7 ರಾಷ್ಟ್ರಗಳ ನೌಕಾಪಡೆ ಒಕ್ಕೂಟ ರಚನೆಗೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಆ 7 ರಾಷ್ಟ್ರಗಳ ಹೆಸರು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಆದರೆ ಟ್ರಂಪ್ ಆಹ್ವಾನವನ್ನು ಆಸ್ಟ್ರೇಲಿಯಾ, ಜಪಾನ್ ರಾಷ್ಟ್ರಗಳು ತಿರಸ್ಕರಿಸಿದರೆ, ಭಾರತ ಈ ಬಗ್ಗೆ ಅಮೆರಿಕ ಜೊತೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಪ್ರಕಟಿಸಿದೆ.

ಜಗತ್ತಿನ ತೈಲ ಸಾಗಾಟದ ಶೇ.20ರಷ್ಟು ಹರ್ಮುಜ್ ಜಲಸಂಧಿ ಮಾರ್ಗದಿಂದ ಸಾಗುತ್ತವೆ. ಈ ಮಾರ್ಗದಲ್ಲಿ ಸಂಚರಿಸುವುದರಿಂದ ವೆಚ್ಚ ಕಡಿತ ಹಾಗೂ ಸಮಯ ಉಳಿತಾಯ ಆಗುತ್ತದೆ.

ಇರಾನ್ ವಿರುದ್ಧದ ಯುದ್ಧದ 17ನೇ ದಿನಕ್ಕೆ ಕಾಲಿಟ್ಟಿದ್ದರೂ ಹರ್ಮುಜ್ ಜಲಸಂಧಿಯ ಬಿಕ್ಕಟ್ಟು ಬಗೆಹರಿಯವ ಲಕ್ಷಣ ಕಾಣುತ್ತಿಲ್ಲ. ಇರಾನ್ ತಮಗೆ ಸಹಕಾರ ನೀಡಿದ ದೇಶಗಳ ಹಡುಗಳಿಗೆ ಮಾತ್ರ ಸಾಗಾಟಕ್ಕೆ ಅವಕಾಶ ನೀಡಿದ್ದು, ಉಳಿದ ದೇಶಗಳ ಹಡುಗಳನ್ನು ನಿರ್ಬಂಧಿಸಿದೆ.

ಜಗತ್ತಿನಲ್ಲಿ ತೈಲ ಹಾಗೂ ಎಲ್ ಪಿಜಿ ಕೊರತೆ ಕಾಡಲು ಆರಂಭಿಸಿದ್ದರಿಂದ ಅಮೆರಿಕ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ 7 ರಾಷ್ಟ್ರಗಳು ಹರ್ಮುಜ್ ಜಲಸಂಧಿ ಇರಾನ್ ನಿಂದ ಮುಕ್ತಗೊಳಿಸಲು ನೆರವು ಯಾಚಿಸಿದೆ.

ಅಮೆರಿಕ ಸಹಕಾರ ಕೋರಿದ 7 ರಾಷ್ಟ್ರಗಳ ಹೆಸರು ಬಹಿರಂಗಪಡಿಸದೇ ಇದ್ದರೂ ಜಪಾನ್ ಹಾಗೂ ಆಸ್ಟ್ರೇಲಿಯಾ ನೌಕಾಪಡೆ ಒಕ್ಕೂಟ ರಚನೆಯಿಂದ ಹೊರಗುಳಿಯುವುದಾಗಿ ಘೋಷಿಸಿದೆ. ಈ ಮೂಲಕ ಟ್ರಂಪ್ ಗೆ ಮತ್ತೊಮ್ಮೆ ಹಿನ್ನಡೆ ಉಂಟಾಗಿದೆ.

ಖಾರ್ಗ್ ವಶಕ್ಕೆ ಸೇನೆ ರವಾನೆ

ಇರಾನ್ ಶೇ.90ರಷ್ಟು ತೈಲ ಉತ್ಪಾದನೆ ಮಾಡುವ ಖಾರ್ಗ್ ದ್ವೀಪದ ಮೇಲೆ ದಾಳಿ ಮಾಡಿದ್ದ ಅಮೆರಿಕ ಇದೀಗ ಖಾರ್ಗ್ ದ್ವೀಪ ವಶಪಡಿಸಿಕೊಳ್ಳಲು ಸೇನೆ ರವಾನಿಸುವುದಾಗಿ ಘೋಷಿಸಿದೆ.

ಜಗತ್ತಿನ ಶೇ.20ರಷ್ಟು ತೈಲ ಉತ್ಪಾದಿಸುವ ಇರಾನ್ ನ ಹೃದಯ ಎಂದೇ ಕರೆಯಲಾಗುವ ಖಾರ್ಗ್ ದ್ವೀಪವೊಂದರಲ್ಲೇ ಶೇ.90ರಷ್ಟು ತೈಲ ಉತ್ಪಾದನೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ದ್ವೀಪವನ್ನು ವಶಪಡಿಸಿಕೊಳ್ಳಲು ಅಮೆರಿಕ ಮುಂದಾಗಿದೆ.

ದುಬೈ ವಿಮಾನ ನಿಲ್ದಾಣ ಬಂದ್

ಯುದ್ಧ 17ನೇ ದಿನಕ್ಕೆ ಕಾಲಿಟ್ಟಿದ್ದರೂ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್ ದಾಳಿ ಮುಂದುವರಿಸಿದೆ. ಅಮೆರಿಕ ನೆಲೆಗಳಿಗೆ ಆಶ್ರಯ ನೀಡಿದರೆ ದಾಳಿ ಮಾಡುವುದಾಗಿ ರೊಮೇನಿಯಾಗೆ ಇರಾನ್ ಎಚ್ಚರಿಕೆ ನೀಡಿದೆ.

ದುಬೈನ ವಿಮಾ ನಿಲ್ದಾಣದ ಮೇಲೆ ಇರಾನ್ ಭಾರೀ ಪ್ರಮಾಣದಲ್ಲಿ ದಾಳಿ ಮಾಡಿದ್ದರಿಂದ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಸಂಪೂರ್ಣ ಬಂದ್ ಮಾಡಲಾಗಿದೆ. ಇದೇ ವೇಳೆ ಇರಾಕ್ ನಲ್ಲಿರುವ ಅಮೆರಿಕದ ವಿಕ್ಟೋರಿಯಾ ನೆಲೆಗಳ ಮೇಲೂ ದಾಳಿ ಮಾಡಿ ಧ್ವಂಸಗೊಳಿಸಿದೆ.

ಮತ್ತೊಂದೆಡೆ ಇರಾನ್ ರಾಜಧಾನಿ ಟೆಹರಾನ್, ಶಿರಾಜ್, ತಬ್ರಿಜ್ ನಗರಗಳ ಮೇಲೆ ಇಸ್ರೇಲ್ ದಾಳಿ ಮಾಡಿದ್ದು ಇರಾನ್ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಿ ಹಾನಿ ಮಾಡಿದೆ. ಆದರೆ ದಾಳಿ- ಪ್ರತಿದಾಳಿಯಲ್ಲಿ ಸಂಭವಿಸಿದ ಸಾವುನೋವಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8412 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment