Thursday, May 28, 2026
Google search engine
Homeವಿದೇಶ4 ಗಂಟೆಯಲ್ಲಿ ಇರಾನ್ ಸರ್ವನಾಶಕ್ಕೆ ಟ್ರಂಪ್ ಎಚ್ಚರಿಕೆ: ಮಾನವ ಸರಪಳಿಗೆ ಇರಾನ್ ಕರೆ

4 ಗಂಟೆಯಲ್ಲಿ ಇರಾನ್ ಸರ್ವನಾಶಕ್ಕೆ ಟ್ರಂಪ್ ಎಚ್ಚರಿಕೆ: ಮಾನವ ಸರಪಳಿಗೆ ಇರಾನ್ ಕರೆ

ಕದನ ವಿರಾಮ ಒಪ್ಪಂದ ಮುಗಿದ 4 ಗಂಟೆಯಲ್ಲಿ ಇರಾನ್ ಸರ್ವನಾಶ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ.

ಕದನ ವಿರಾಮ ಒಪ್ಪಂದಕ್ಕೆ ನೀಡಿದ್ದ ಗಡುವು ಮಂಗಳವಾರ ರಾತ್ರಿ 8 ಗಂಟೆಗೆ ಮುಕ್ತಾಯಗೊಳ್ಳಲಿದೆ. ಭಾರತೀಯ ಕಾಲಮಾನ ಪ್ರಕಾರ ಬುಧವಾರ ಮುಂಜಾನೆಗೆ ಅಮೆರಿಕ ಭೀಕರ ದಾಳಿ ನಡೆಸುವ ಎಚ್ಚರಿಕೆ ನೀಡಿದೆ.

ನಮಗೆ ಇರಾನ್ ಧ್ವಂಸ ಮಾಡಲು 4 ಗಂಟೆ ಸಾಕು. ರಾತ್ರಿ ಆಗುವುದರೊಳಗೆ ಇರಾನ್ ಸರ್ವನಾಶ ಆಗಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಇದರಿಂದ ಮಧ್ಯಪ್ರಾಚ್ಯ ಯುದ್ಧ ತಾರಕಕ್ಕೇರುವ ಸಾಧ್ಯತೆ ಇದೆ.

ಮತ್ತೊಂದೆಡೆ ಇರಾನ್ ಕೂಡ ಒಪ್ಪಂದ ಪ್ರಸ್ತಾಪ ತಿರಸ್ಕರಿಸಿದ್ದು, ಕದನ ವಿರಾಮದಿಂದ ಶಾಶ್ವತ ಪರಿಹಾರ ಸಾಧ್ಯವಿಲ್ಲ ಎಂದು ಹೇಳಿದ್ದು, 10 ಷರತ್ತುಗಳನ್ನು ವಿಧಿಸಿದೆ.

ಅಮೆರಿಕ ದಾಳಿ ಎಚ್ಚರಿಕೆ ಹಿನ್ನೆಲೆಯಲ್ಲಿ ಇರಾನ್ ದೇಶಾದ್ಯಂತ ಮಾನವ ಸರಪಳಿ ನಿರ್ಮಿಸಲು ಮುಂದಾಗಿದೆ. ಈ ಮೂಲಕ ನಾಗರಿಕರ ಮೇಲಿನ ದಾಳಿ ತಡೆಯಲು ಹೊಸ ತಂತ್ರ ಬಳಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments