Wednesday, May 13, 2026
Google search engine
Homeದೇಶಭಾರತದ ಸೌರಶಕ್ತಿ ಸರಕು ಮೇಲೆ ಶೇ.125.87 ಸುಂಕ ಹೇರಿದ ಅಮೆರಿಕ

ಭಾರತದ ಸೌರಶಕ್ತಿ ಸರಕು ಮೇಲೆ ಶೇ.125.87 ಸುಂಕ ಹೇರಿದ ಅಮೆರಿಕ

ನವದೆಹಲಿ: ಸುಂಕ ಗೊಂದಲ ಮುಂದುವರಿದಿರುವಂತೆಯೇ ಕೆಲವು ಭಾರತೀಯ ಸೌರಶಕ್ತಿ ಸರಕುಗಳ ಆಮದಿನ ಮೇಲೆ ಶೇಕಡಾ 125.87ರಷ್ಟು ಪ್ರತಿ​​ ವೈಲಿಂಗ್ ಸುಂಕ ಘೋಷಿಸಿದೆ.

ಸೌರಶಕ್ತಿ ಉತ್ಪನ್ನಗಳಿಗೆ ಭಾರತ ಸರ್ಕಾರ ಅನ್ಯಾಯವಾಗಿ ಸಬ್ಸಿಡಿ ನೀಡಿದೆ ಎಂದು ಆರೋಪಿಸಿರುವ ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದದ ನಂತರವೂ ಭಾರೀ ಪ್ರಮಾಣದಲ್ಲಿ ಸುಂಕ ವಿಧಿಸಿದೆ.

ಇಂಡೋನೇಷ್ಯಾ ಮತ್ತು ಲಾವೋಸ್‌ ನಿಂದ ಆಮದಾಗುವ ಸ್ಫಟಿಕ ಸಿಲಿಕಾನ್ ಫೋಟೊವೋಲ್ಟಾಯಿಕ್ ಕೋಶಗಳು, ಮಾಡ್ಯೂಲ್‌ಗಳ ಆಮದಿನ ಮೇಲೂ ಅಮೆರಿಕವು ವಿಭಿನ್ನ ಸುಂಕಗಳನ್ನು ಘೋಷಿಸಿದೆ.

ಫೆಬ್ರವರಿ 24, 2026 ರಂದು, ಭಾರತ, ಇಂಡೋನೇಷ್ಯಾ ಮತ್ತು ಲಾವೋ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ಲಾವೋಸ್​ನಿಂದ ಆಮದಾಗುತ್ತಿರುವ ಸೌರ ಕೋಶಗಳಲ್ಲಿನ(ಮಾಡ್ಯೂಲ್‌) ಸ್ಫಟಿಕ ಸಿಲಿಕಾನ್ ಫೋಟೊವೋಲ್ಟಾಯಿಕ್ ಕೋಶಗಳ ಮೇಲೆ ಪ್ರತಿ – ವೈಲಿಂಗ್ ಸುಂಕವನ್ನು ವಿಧಿಸಲಾಗಿದೆ ಎಂದು ಅಮೆರಿಕದ ವಾಣಿಜ್ಯ ಇಲಾಖೆಯು ತನ್ನ ಪ್ರಾಥಮಿಕ ದೃಢೀಕರಣ ನಿರ್ಣಯಗಳನ್ನು ಘೋಷಿಸಿದೆ ಎಂದು ಅಮೆರಿಕ ಸರ್ಕಾರದ ಆದೇಶವು ತಿಳಿಸಿದೆ.

ಈ ಸುಂಕಗಳು ಫೆಬ್ರವರಿ 24 ರಿಂದ ಟ್ರಂಪ್ ಆಡಳಿತವು ಎಲ್ಲ ದೇಶಗಳ ಮೇಲೆ ಘೋಷಿಸಿದ ಶೇಕಡಾ 10 ರಷ್ಟು ಸುಂಕಗಳಿಗಿಂತ ಭಿನ್ನವಾಗಿವೆ. ಭಾರತದಿಂದ ಅಮೆರಿಕಕ್ಕೆ ಸೌರ ಫಲಕಗಳ ಆಮದು, 2022 ರಲ್ಲಿ 83.86 ಮಿಲಿಯನ್‌ ಡಾಲರ್​​​ನಿಂದ 2024 ರಲ್ಲಿ 792.6 ಮಿಲಿಯನ್ ಡಾಲರ್​ಗೆ ಏರಿಕೆ ಕಂಡಿದೆ.

CVD ತನಿಖೆಗಳಲ್ಲಿ ಅಂತಿಮ ನಿರ್ಧಾರವನ್ನು ಜುಲೈ 6, 2026 ರಂದು ಹೊರಡಿಸಲು ನಿರ್ಧರಿಸಲಾಗಿದೆ. ಅಮೆರಿದ ವಾಣಿಜ್ಯ ಇಲಾಖೆಯು ಭಾರತ, ಇಂಡೋನೇಷ್ಯಾ ಮತ್ತು ಲಾವೋಸ್‌ನಿಂದ ಸೌರ ಕೋಶಗಳ ಏಕಕಾಲಿಕ ಡಂಪಿಂಗ್ ಬಗ್ಗೆ ತನಿಖೆ ನಡೆಸುತ್ತಿದೆ. ಸಬ್ಸಿಡಿ ಆಮದುಗಳ ಹೆಚ್ಚಳದಿಂದ ರಕ್ಷಿಸಲು ಪ್ರತಿ – ವೈಲಿಂಗ್ ಸುಂಕಗಳನ್ನು ಹೇರಲಾಗಿದೆ ಇದು ನಮ್ಮಲ್ಲಿನ ಕಂಪನಿಗಳಿಗೆ ಸಹಾಯ ಮಾಡುತ್ತದೆ ಎಂದು ಅಮೆರಿಕ ವಾಣಿಜ್ಯ ಇಲಾಖೆ ಹೇಳಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments