Wednesday, August 19, 2026
Google search engine
Homeದೇಶಹನೂರು ಎನ್ ಕೌಂಟರ್: ಮೃತ ಕುಟಂಬಗಳಿಗೆ 10 ಲಕ್ಷ ಪರಿಹಾರ ಘೋಷಿಸಿದ ತಮಿಳುನಾಡು ಸರ್ಕಾರ

ಹನೂರು ಎನ್ ಕೌಂಟರ್: ಮೃತ ಕುಟಂಬಗಳಿಗೆ 10 ಲಕ್ಷ ಪರಿಹಾರ ಘೋಷಿಸಿದ ತಮಿಳುನಾಡು ಸರ್ಕಾರ

ಚೆನ್ನೈ: ಕರ್ನಾಟಕ ಅರಣ್ಯ ಇಲಾಖೆ ನಡೆಸಿದ ಎನ್​​ಕೌಂಟರ್​ನಲ್ಲಿ ಮೂವರು ತಮಿಳಿಗರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ವಿಶೇಷ ಗಮನ ಸೆಳೆಯುವ ನಿರ್ಣಯ ಮಂಡಿಸಲಾಯಿತು.

ಕಳೆದ ಆಗಸ್ಟ್ 15 ರಂದು ಕರ್ನಾಟಕದ ಅಣ್ಣೂರು ಬಳಿ ರಾಜ್ಯ ಸರ್ಕಾರದಿಂದ ಮೂವರು ತಮಿಳರ ಮೇಲೆ ನಡೆದ ಗುಂಡಿನ ದಾಳಿಯ ವಿಷಯವನ್ನು ವಿಧಾನಸಭೆಯ ನಿಯಮ 55ರ ಅಡಿ ವಿಶೇಷ ಗಮನ ಸೆಳೆಯುವ ನಿರ್ಣಯವಾಗಿ ಪ್ರಸ್ತಾಪಿಸಲಾಗುತ್ತಿದೆ ಎಂದು ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ತಿಳಿಸಿದರು.

ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರ ಆರ್ಥಿಕ ನೆರವು ನೀಡಲು ಕ್ರಮ ಕೈಗೊಳ್ಳುತ್ತದೆಯೇ?” ಎಂದು ಸದನದಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಸರ್ಕಾರವನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅರಣ್ಯ ಸಚಿವ ರಂಜಿತ್ ಕುಮಾರ್, “ಮುಖ್ಯಮಂತ್ರಿ ವಿಜಯ್ ಅವರ ಆದೇಶದಂತೆ, ತಮಿಳುನಾಡು ಸರ್ಕಾರದ ಅರಣ್ಯ ಇಲಾಖೆಯ ಪರವಾಗಿ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು” ಎಂದು ಘೋಷಿಸಿದರು.

ಇದು ನಕಲಿ ಎನ್‌ಕೌಂಟರ್:

ವಿಶೇಷ ಗಮನ ಸೆಳೆಯುವ ನಿರ್ಣಯದ ವೇಳೆ ಮಾತನಾಡಿದ ಡಿಎಂಕೆ ಶಾಸಕ ಮನೋಜ್ ಪಾಂಡಿಯನ್, “ಕರ್ನಾಟಕದ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಹುಡುಕುತ್ತಿದ್ದ ಮೂವರು ತಮಿಳರನ್ನು ರಾಜ್ಯ ಅರಣ್ಯ ಇಲಾಖೆ ಗುಂಡಿಕ್ಕಿ ಕೊಂದಿದೆ. ತಮಿಳರ ಮೇಲೆ ಎಲ್ಲೆಲ್ಲಿ ಅನ್ಯಾಯ ನಡೆದರೂ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮೊದಲಿಗರಾಗಿ ಧ್ವನಿ ಎತ್ತುತ್ತಿದ್ದರು. ಕರ್ನಾಟಕದಲ್ಲಿ ತಮಿಳರನ್ನು ಗುಂಡಿಕ್ಕಿ ಕೊಂದಿರುವುದು ಸಂಪೂರ್ಣ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇದು ನಕಲಿ ಎನ್‌ಕೌಂಟರ್ ಎಂದು ಆರೋಪಿಸಿದರು.

ಮೃತ ತಮಿಳರಿಗೆ ನ್ಯಾಯ ದೊರಕಬೇಕಾದರೆ ಸಂತ್ರಸ್ತ ಕುಟುಂಬಗಳಿಗೆ ಉದ್ಯೋಗಾವಕಾಶ ನೀಡಬೇಕು. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿ, ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಈ ನಕಲಿ ಎನ್‌ಕೌಂಟರ್ ಕುರಿತು ನ್ಯಾಯಾಂಗ ತನಿಖೆ ಅಗತ್ಯವಿದೆ. ಇದು ತಮಿಳರಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಯಾಗಿದೆ. ಈ ಬಗ್ಗೆ ಸ್ಪಷ್ಟವಾದ ನ್ಯಾಯಾಂಗ ತನಿಖೆ ನಡೆಯಬೇಕು. ತಮಿಳುನಾಡು ಸರ್ಕಾರವು ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.

ಯಾವ ಕ್ರಮ ಕೈಗೊಂಡಿದೆ?

ಸುಪ್ರೀಂ ಕೋರ್ಟ್ ತನ್ನ ತೀರ್ಪುಗಳಲ್ಲಿ ತಮಿಳುನಾಡು ಸರ್ಕಾರವು ಈ ವಿಚಾರವನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಗಮನಕ್ಕೆ ತರಬಹುದು ಎಂದು ಹೇಳಿದೆ. ಅದರಂತೆ ತಮಿಳುನಾಡು ಸರ್ಕಾರ ಈ ವಿಚಾರದಲ್ಲಿ ಯಾವ ಕ್ರಮ ಕೈಗೊಂಡಿದೆ?, ಕರ್ನಾಟಕ ಸರ್ಕಾರಕ್ಕೆ ಈ ಸಂಬಂಧ ಯಾವುದೇ ಪತ್ರ ಬರೆದಿದೆಯೇ?, ತಮಿಳರನ್ನು ಗುಂಡಿಕ್ಕಿ ಕೊಂದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ?” ಎಂದು ಪ್ರಶ್ನಿಸಿದರು.

ಸಿಬಿಐ ತನಿಖೆಗೆ ಆಗ್ರಹ:

ಎಡಪ್ಪಾಡಿ ಪಳನಿಸ್ವಾಮಿ ಮಾತನಾಡಿ, “ಆಗಸ್ಟ್ 15ರಂದು ಕರ್ನಾಟಕದಲ್ಲಿ ಜಿಂಕೆ ಬೇಟೆಯಾಡಲು ಹೋಗಿದ್ದರು ಎಂಬ ಆರೋಪದ ಮೇಲೆ ಮೂವರು ತಮಿಳಿಗರನ್ನು ಎನ್​ಕೌಂಟರ್​ ಮಾಡಿ ಕೊಲ್ಲಲಾಗಿದೆ. ಈ ಗುಂಡಿನ ದಾಳಿಯ ಹಿಂದೆ ದೊಡ್ಡ ಸಂಚು ಇದೆ ಎಂದು ಆರೋಪಿಸಿ ಮೃತರ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಾದರೆ ಸಿಬಿಐ ತನಿಖೆ ನಡೆಯಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ತಮಿಳುನಾಡು ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಪ್ರಕರಣದ ನೈಜ ಸ್ವರೂಪವನ್ನು ತಮಿಳುನಾಡಿನ ಜನರಿಗೆ ತಿಳಿಸುವುದು ಸರ್ಕಾರದ ಕರ್ತವ್ಯ” ಎಂದು ಹೇಳಿದರು.

ಹಸು ಹುಡುಕಲು ಹೋಗಿದ್ದರು:

ಪಿಎಂಕೆ ಶಾಸಕ ಗಣೇಶ್ ಕುಮಾರ್ ಮಾತನಾಡಿ, “ಕರ್ನಾಟಕ ಸರ್ಕಾರವು ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ನೀಡಿದೆ. ಎನ್​ಕೌಂಟರ್​ನಿಂದ ಯಾವುದೇ ಹಕ್ಕುಗಳ ಉಲ್ಲಂಘನೆಯಾಗಿಲ್ಲ ಎಂದು ಕರ್ನಾಟಕದ ಅರಣ್ಯ ಸಚಿವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಆದರೆ, ಈ ಎನ್​ಕೌಂಟರ್​ ಪ್ರಕರಣದ ಕುರಿತು ಸಿಬಿಐ ತನಿಖೆ ಅಗತ್ಯವಿದೆ. ಮೃತರ ಕುಟುಂಬಗಳಿಗೆ ತಲಾ 1 ಕೋಟಿ ಆರ್ಥಿಕ ನೆರವು ನೀಡಬೇಕು. ಕರ್ನಾಟಕ ಅರಣ್ಯ ಇಲಾಖೆ ಎನ್​​ಕೌಂಟರ್​ನಲ್ಲಿ ಮೃತಪಟ್ಟವರು​ ಜಿಂಕೆಗಳ ಬೇಟೆಗೆ ಹೋಗಿರಲಿಲ್ಲ, ಅವರು ಹಸುಗಳನ್ನು ಹುಡುಕಲು ಹೋಗಿದ್ದರು” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments