Saturday, October 3, 2026
Google search engine
Homeರಾಜ್ಯ84,900 ಮತದಾರರ ಹೆಸರು ಡಿಲಿಟ್‌ ಗೆ ಫಾರಂ-7 ಸಲ್ಲಿಕೆ: ಚುನಾವಣಾ ಆಯೋಗ ಮಾಹಿತಿ

84,900 ಮತದಾರರ ಹೆಸರು ಡಿಲಿಟ್‌ ಗೆ ಫಾರಂ-7 ಸಲ್ಲಿಕೆ: ಚುನಾವಣಾ ಆಯೋಗ ಮಾಹಿತಿ

ರಾಜ್ಯದಲ್ಲಿ ಸಾಮೂಹಿಕ ಫಾರ್ಮ್​ 7 ಸಲ್ಲಿಸುವ ಮೂಲಕ ಮತದಾರರ ಪಟ್ಟಿಯಿಂದ ಮತದಾರರ ಹೆಸರನ್ನು ಡಿಲಿಟ್‌ ಮಾಡುವ ಬಿಜೆಪಿ ತಂತ್ರ ಬಹಿರಂಗವಾಗಿದ್ದು, ಚುನಾವಣಾ ಆಯೋಗದ ಪ್ರಕಾರವೇ ರಾಜ್ಯದಲ್ಲಿ 84,900 ಅರ್ಜಿಗಳು ಸಲ್ಲಿಕೆಯಾಗಿವೆ.

ಮತದಾರರ ಹೆಸರು ಡಿಲಿಟ್‌ ಮಾಡಲು ಬಿಜೆಪಿ ಕಾರ್ಯಕರ್ತರು ಸಲ್ಲಿಸಿದ ಫಾರಂ-೭ ಬಹಿರಂಗಪಡಿಸಲು ಸಿಎಂ ಡಿಕೆ ಶಿವಕುಮಾರ್‌ ನೇತೃತ್ವದಲ್ಲಿ ಸಚಿವ ಸಂಪುಟ ಸಹದ್ಯೋಗಿಗಳು ನಡೆಸಿದ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಫಾರ್ಮ್ 7 ಮೂಲಕ ಈವರೆಗೆ ಒಟ್ಟು 84,900 ಅರ್ಜಿ ಸಲ್ಲಿಕೆಯಾಗಿದೆ ಎಂದು ವಿವರ ಬಹಿರಂಗಪಡಿಸಿದೆ.

ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ರಾಜ್ಯದಲ್ಲಿ ಈವರೆಗೆ ಒಟ್ಟು ಫಾರ್ಮ್ 7 ಸಲ್ಲಿಕೆ ಮಾಡಿರುವ ಜಿಲ್ಲಾವಾರು ವಿವರವನ್ನು ನೀಡಿದೆ. ರಾಜ್ಯದಲ್ಲಿ ಒಟ್ಟು 84,900 ಫಾರ್ಮ್ 7 ಸಲ್ಲಿಕೆಯಾಗಿರುವ ಬಗ್ಗೆ ಅಂಕಿ – ಅಂಶ ನೀಡಿದೆ. ಅ.2ರ ವರೆಗೆ 4.49 ಕೋಟಿ ಮತದಾರರು ಮತದಾರರ ಪಟ್ಟಿಯಲ್ಲಿದ್ದಾರೆ‌. ಕರಡು ಮತದಾರರ ಪಟ್ಟಿಯಲ್ಲಿ 4.46 ಕೋಟಿ ರೂ. ಮತದಾರರು ಇದ್ದರು. ಅಂದರೆ ಕರಡು ಪಟ್ಟಿಗೆ ಸುಮಾರು 3 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ.

ಫಾರ್ಮ್ 7 ಸಲ್ಲಿಕೆ ಜಿಲ್ಲಾವಾರು ಅಂಕಿ – ಅಂಶ: ಜೂ.16 ರಿಂರ ಅ.1ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಟ್ಟು 84,900 ಫಾರ್ಮ್ 7 ಸಲ್ಲಿಕೆ ಮಾಡಲಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.‌

ಬೆಂಗಳೂರು ನಗರ ಜಿಲ್ಲೆಯಲ್ಲಿ 3,026, ಬಿಬಿಎಂಪಿ ಉತ್ತರ 1,689, ಬೆಳಗಾವಿ 3,539, ಮೈಸೂರು 2,828, ದ.ಕನ್ನಡ 4,746, ಬಿಬಿಎಂಪಿ ದಕ್ಷಿಣ 1,429, ಗುಲ್ಬರ್ಗ 1,040, ಬಿಬಿಎಂಪಿ ಕೇಂದ್ರ 1,356, ತುಮಕೂರು 4,350, ಬೀದರ್ 5,915, ಧಾರವಾಡ 1,338, ರಾಯಚೂರು 3,295 ಫಾರ್ಮ್ 7 ಸಲ್ಲಿಕೆಯಾಗಿದೆ.

ಶಿವಮೊಗ್ಗ 5,760, ಬಿಜಾಪುರ 3,788, ಉಡುಪಿ 1,600, ವಿಜಯನಗರ 2,202, ದಾವಣಗೆರೆ 3,747, ಹಾಸನ 2,798, ಮಂಡ್ಯ 2,711, ಬಾಗಲಕೋಟೆ 2,227, ಕೋಲಾರ 2,517, ಚಿತ್ರದುರ್ಗ 2,919, ಉತ್ತರ ಕನ್ನಡ 1,376, ರಾಮನಗರ 2,222, ಬಳ್ಳಾರಿ 2,036, ಯಾದಗಿರಿ 609 ಫಾರ್ಮ್‌ 7 ಸಲ್ಲಿಕೆ ಮಾಡಲಾಗಿದೆ.

ಕೊಪ್ಪಳ 2,322, ಚಿಕ್ಕಮಗಳೂರು 2,518, ಬೆಂಗಳೂರು ಗ್ರಾಮೀಣ 1,354, ಹಾವೇರಿ 1,934, ಚಿಕ್ಕಬಳ್ಳಾಪುರ 1,646, ಗದಗ 1,118, ಕೊಡಗು 1,143, ಚಾಮರಾಜನಗರ 1,802 ಫಾರ್ಮ್ 7 ಸಲ್ಲಿಕೆ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments