ಬಿಜೆಪಿ ರಾಜ್ಯಾ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ವಿನೋದ್ ತಾವ್ಡೆ ವಿರುದ್ಧ ಚುನಾವಣಾ ಆಯೋಗ ಎಫ್ ಐಆರ್ ದಾಖಲಿಸಿಕೊಂಡಿದೆ.
ಪಾಲ್ಗರ್ ಜಿಲ್ಲೆಯ ವಿರಾರ್ ಕ್ಷೇತ್ರದ ಖಾಸಗಿ ಹೋಟೆಲ್ ನಲ್ಲಿ ಚುನಾವಣೆಗೆ ಸುಮಾರು ೫ ಕೋಟಿ ರೂ. ಹಣ ಹಂಚಿಕೆ ಮಾಡುವಾಗ ಸ್ಥಳೀಯ ಪ್ರಾದೇಶಿಕ ಪಕ್ಷದ ಕಾರ್ಯಕರ್ತರು ದಾಳಿ ನಡೆಸಿದ್ದರಿಂದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಹೈಡ್ರಾಮಾ ನಡೆದಿದೆ.
ಬಹುಜನ ವಿಕಾಸ್ ಅಂಗಡಿ ಪಕ್ಷದ ಕಾರ್ಯಕರ್ತರು ನಲಸೊಪರಾ ರಾಜನ್ ನಾಯ್ಕ್ ಕ್ಷೇತ್ರದ ಅಭ್ಯರ್ಥಿ ಮತದಾರರ ಮೇಲೆ ಪ್ರಭಾವ ಬೀರಲು ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಸುಳಿವಿನ ಮೇರೆಗೆ ಹೋಟೆಲ್ ಮೇಲೆ ದಾಳಿ ಮಾಡಿ ದಾಂಧಲೆ ನಡೆಸಿದರು.
ದಾಳಿಯ ವೇಳೆ ಎನ್ವಲಪ್ ಕವರ್ ಗಳು ಹಾಗೂ ನಗದು ಹಾಗೂ ೫ ಕೋಟಿ ರೂ. ನಗದು ಪತ್ತೆಯಾಗಿದೆ ಎಂದು ಬಹುಜನ ವಿಕಾಸ್ ಅಂಗಡಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಬಹುಜನ ಪಕ್ಷದ ಕಾರ್ಯಕರ್ತರು ಬ್ಯಾಗ್ ನಲ್ಲಿರುವ ನಗದು ಹಣವನ್ನು ತೆಗೆದು ತೋರಿಸುತ್ತಿರುವ ವೀಡಿಯೋಗಳು ಮಾಧ್ಯಮಗಳಿಗೆ ಸಿಕ್ಕಿದೆ. ಆದರೆ ಈ ಹಣ ನನ್ನದು ಅಲ್ಲ. ನಾನು ಹಣ ಹಂಚಿಕೆ ಮಾಡುತ್ತಿಲ್ಲ ಎಂದು ಬಿಜೆಪಿ ಮುಖಂಡ ವಿನೋದ್ ತಾಲ್ಡೆ ಆರೋಪ ನಿರಾಕರಿಸಿದ್ದಾರೆ.
ವಿನೋದ್ ತಾವ್ಡೆ ಹಣ ಹಂಚಿಕೆ ಮಾಡುವ ವೇಳೆ ಹೋಟೆಲ್ ನಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ತೆಗೆದು ಹಾಕಿದ್ದಾರೆ. ಕಾರ್ಯಕರ್ತರು ದಾಳಿ ಮಾಡಿದಾಗ ವಿನೋದ್ ತಾವ್ಡೆ ಅಡುಗೆ ಮನೆಗೆ ಓಡಿ ಹೋಗಿ ತಲೆ ಮರೆಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಬಹುಜನ ಸಮಾಜಪಕ್ಷದ ಮುಖಂಡರು ಆರೋಪಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ವಿನೋದ್ ತಾವ್ಡೆ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದೆ.