ವೀಡಿಯೋ ಗೇಮ್ ನೋಡುತ್ತಾ ಮಕ್ಕಳು ಮೈಮರೆಯುತ್ತಾರೆ. ಮೊಬೈಲ್ ಕಿತ್ತುಕೊಂಡರೆ ಅಥವಾ ಮೊಬೈಲ್ ಗೇಮ್ ಆಡಬೇಡ ಅಂದರೆ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುವಷ್ಟು ಮೈಮರೆಯುತ್ತಾರೆ. ಆದರೆ ಅದನ್ನೇ ಅದನ್ನೇ ಬಂಡವಾಳ ಮಾಡಿಕೊಂಡು ವೈದ್ಯರು ಚಿಕಿತ್ಸೆ ನೀಡಿದ ಅಚ್ಚರಿ ವಿಷಯ ಈಗ ವೈರಲ್ ಆಗಿದೆ.
ಶಸ್ತ್ರಚಿಕಿತ್ಸೆ ಮಾಡುವಾಗ ವೈದ್ಯರು ಅರವಳಿಕೆ ನೀಡುವುದು ಸಹಜ. ಇದರಿಂದ ಶಸ್ತ್ರಚಿಕಿತ್ಸೆ ವೇಳೆ ರೋಗಿಗೆ ನೋವಿನ ಅರಿವಾಗುವುದಿಲ್ಲ. ಆದರೆ ಅರವಳಿಕೆಗಿಂತ ಹೆಚ್ಚು ಪ್ರಭಾವಶಾಲಿ ಅವರ ನೆಚ್ಚಿನ ಹವ್ಯಾಸ ಅಥವಾ ಚಟ ಎಂದೇ ಹೇಳಬಹುದು.
ಹೌದು, ಇದೇ ಚಟ ಅಥವಾ ಅಭ್ಯಾಸವನ್ನೇ ಬಂಡವಾಳ ಮಾಡಿಕೊಂಡ ವೈದ್ಯರೊಬ್ಬರು ರೋಗಿಗೆ ಅರವಳಿಕೆ ನೀಡುವ ಬದಲು ಮೊಬೈಲ್ ಗೇಮ್ ಆಡಲು ಬಿಟ್ಟು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಅಲ್ಲದೇ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಅಮೆರಿಕದ ಮಿಯಾಮಿಯ ಕ್ಯಾನ್ಸರ್ ಚಿಕಿತ್ಸಾ ಕೇಂದ್ರದ ಹಾಸ್ಪತ್ರಗೆ ದಾಖಲಾಗಿದ್ದ ಕ್ರಿಸ್ಚಿಯನ್ ನೊಲಾನ್ ಎಂಬ ರೋಗಿ ಬ್ರೈನ್ ಟ್ಯೂಮರ್ ಚಿಕಿತ್ಸೆಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗ ವೀಡಿಯೋ ಗೇಮ್ ಆಡುತ್ತಿದ್ದರೆ, ಪಕ್ಕದಲ್ಲಿದ್ದ ಮತ್ತೊಬ್ಬ ವೈದ್ಯ ಹಾಡು ಹೇಳುತ್ತಿದ್ದಾನೆ.
‘ರೋಗಿ ಮೊಬೈಲ್ ಗೇಮ್ ಆಡುತ್ತಿದ್ದಾಗಲೇ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ ವೀಡಿಯೊವನ್ನು ಅರಿವಳಿಕೆ ತಂತ್ರಜ್ಞ ಡಾ. ಸುಮಿತ್ ಘೋಷ್ ಮತ್ತು ಡಯಾಲಿಸಿಸ್ ತಂತ್ರಜ್ಞೆ ಡಾ. ಪಿಂಕಿ ಮುಖರ್ಜಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಈ ವಿಡಿಯೊ ವೈರಲ್ ಆಗಿದೆ.
ರೋಗಿಯು ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಹಾಸಿಗೆಯ ಮೇಲೆ ಮಲಗಿರುವುದನ್ನು ತೋರಿಸಲಾಗಿದೆ. ಪರಿಸ್ಥಿತಿಯ ಗಂಭೀರತೆಯ ಹೊರತಾಗಿಯೂ, ಆ ವ್ಯಕ್ತಿ ತಮ್ಮ ಮೊಬೈಲ್ ಫೋನ್‌ನಲ್ಲಿ ವಿಡಿಯೊ ಗೇಮ್‌ಗಳನ್ನು ಆಡುವುದರಲ್ಲಿ ಮಗ್ನರಾಗಿದ್ದಾರೆ.
ವಿಡಿಯೊವನ್ನು ಈಗಾಗಲೇ 100 ಮಿಲಿಯನ್‌ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಹಲವರು ಲೈಕ್ಸ್ ಕಾಮೆಂಟ್ ಮಾಡಿದ್ದಾರೆ. ಹಿಂದೊಮ್ಮೆ ಆಪರೇಷನ್ ನಡೆಯುವಾಗ ಗೀಟಾರ್ ಬಾರಿಸುತ್ತಿರುವ ವ್ಯಕ್ತಿಯ ವಿಡಿಯೊ ವೈರಲ್ ಆಗಿತ್ತು, ಇತ್ತೀಚಿನ ದಿನಗಳಲ್ಲಿ ಅಪರೇಷನ್ ನಡೆಯುವ ಜಾಗ ಮಾತ್ರ ಮರಗಟ್ಟುವಂತೆ ಅನಸ್ತೇಶಿಯಾ ಇಂಜೆಕ್ಷನ್ ನೀಡಲಾಗುತ್ತಿದ್ದು, ಸರ್ಜರಿ ಮಾಡುವಾಗ ಮಾತನಾಡುವುದು, ನಗುವುದು ಮುಂತಾದವನ್ನು ಮಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ್ದೇವೆ.